Home ದಾವಣಗೆರೆ ದಾವಣಗೆರೆ ದಕ್ಷಿಣದಲ್ಲಿ ಬದಲಾವಣೆ ಗಾಳಿ: ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪತ್ನಿ ಸಂಧ್ಯಾರಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ ತುಂಬಿ ಹಾರೈಕೆ!
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣದಲ್ಲಿ ಬದಲಾವಣೆ ಗಾಳಿ: ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪತ್ನಿ ಸಂಧ್ಯಾರಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ ತುಂಬಿ ಹಾರೈಕೆ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಕೀಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರ ಪರವಾಗಿ ಇಂದು ಅವರ ಧರ್ಮಪತ್ನಿ ಸಂಧ್ಯಾ ಶ್ರೀನಿವಾಸ್ ಅವರು ಇಮಾಂ ನಗರದಲ್ಲಿ ನಡೆಸಿದ ಮನೆ ಮನೆ ಪ್ರಚಾರವು ಗಮನ ಸೆಳೆಯಿತು.

ಭಾವೈಕ್ಯತೆಯ ಸ್ವಾಗತ:

ಇಮಾಂ ನಗರದ ಮುಸ್ಲಿಂ ಮಹಿಳೆಯರು ಸಂಧ್ಯಾ ಶ್ರೀನಿವಾಸ್ ಅವರಿಗೆ ಅತ್ಯಂತ ಆತ್ಮೀಯವಾಗಿ ಸ್ವಾಗತ ಕೋರಿದರು. ಕೇವಲ ಪ್ರಚಾರಕ್ಕೆ ಸೀಮಿತವಾಗದ ಈ ಭೇಟಿಯಲ್ಲಿ, ಸ್ಥಳೀಯ ಮಹಿಳೆಯರು ಅವರನ್ನು ಮನೆಗೆ ಆಹ್ವಾನಿಸಿ, ಕುಡಿಯಲು ನೀರು ನೀಡಿ ಸತ್ಕರಿಸಿದ್ದಲ್ಲದೆ, ಹಿಂದೂ ಸಂಪ್ರದಾಯದಂತೆ ಉಡಿ ತುಂಬಿ ಆಶೀರ್ವದಿಸುವ ಮೂಲಕ ತಮ್ಮ ಬೆಂಬಲವನ್ನು ಘೋಷಿಸಿದರು.

ಕಾಂಗ್ರೆಸ್ ವಿರುದ್ಧ ಆಕ್ರೋಶ, ಬಿಜೆಪಿಗೆ ಬೆಂಬಲ:

ಈ ಸಂದರ್ಭದಲ್ಲಿ ಮಾತನಾಡಿದ ಅಲ್ಪಸಂಖ್ಯಾತ ಮಹಿಳೆಯರು, “ಕಾಂಗ್ರೆಸ್ ಪಕ್ಷವು ಇಷ್ಟು ವರ್ಷ ನಮ್ಮ ಮತಗಳನ್ನು ಪಡೆದು ನಮಗೆ ದ್ರೋಹ ಮಾಡಿದೆ. ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ನಮಗೆ ಬಿಜೆಪಿ ವಿರೋಧಿಯಲ್ಲ, ಉತ್ತಮ ವ್ಯಕ್ತಿತ್ವದ ಶ್ರೀನಿವಾಸ್ ಅವರಿಗೆ ನಾವು 100% ಬೆಂಬಲ ನೀಡುತ್ತೇವೆ” ಎಂದು ಘೋಷಿಸಿದರು.

ಸಾಮಾನ್ಯ ಹಿನ್ನೆಲೆಗೆ ಮೆಚ್ಚುಗೆ:

ಅಭ್ಯರ್ಥಿ ಶ್ರೀನಿವಾಸ್ ಅವರ ತಂದೆ ಹಮಾಲಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದವರು. ಅಂತಹ ಕಡು ಬಡತನದ ಹಿನ್ನೆಲೆಯಿಂದ ಬಂದ ಮಗ ಇಂದು ಜನರ ಪರವಾಗಿ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಮತದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಚಾರದ ಈ ಸಂದರ್ಭದಲ್ಲಿ ಸಂಧ್ಯಾ ಶ್ರೀನಿವಾಸ್ ಅವರೊಂದಿಗೆ ಪದ್ಮಾವತಿ, ಲಲಿತಾ, ತೃಪ್ತಿ, ನಮಿತಾ ಸಿರಿ, ಅಂಬಿಕಾ ಹಾಗೂ ವಿಜಯ್ ಸಾವಂತ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *