Site icon Kannada News-suddikshana

ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆ ನಿವಾರಣೆಗೆ “ದಾವಣಗೆರೆ ಸ್ಮಾರ್ಟ್ ಹೆಲ್ಪ್ ಅಪ್ಲಿಕೇಷನ್”: ದೂರು ಸಲ್ಲಿಸುವುದು ಹೇಗೆ ಗೊತ್ತಾ?

ದಾವಣಗೆರೆ

SUDDIKSHANA KANNADA NEWS/ DAVANAGERE/DATE:22_09_2025

ದಾವಣಗೆರೆ: ನಾಗರೀಕ ಸೇವೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಜಂಟಿ ಸಹಯೋಗದೊಂದಿಗೆ ದಾವಣಗೆರೆ ಸ್ಮಾರ್ಟ್ ಸಿಟಿಯುಅಪ್ಲಿಕೇಷನ್ ಎಂಬ “ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ”ಗಾಗಿ “ದಾವಣಗೆರೆ ಸ್ಮಾರ್ಟ್ ಹೆಲ್ಪ್” ಅಪ್ಲಿಕೇಶನ್ನ್ನು ಜಿಲ್ಲಾ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಬಿಡುಗಡೆಗೊಳಿಸಿದರು.

READ ALSO THIS STORY: ಏನೂ ಕೆಲಸ ಮಾಡದ ಮಾಜಿ ಸಂಸದರ ಚೇಲಾಗಳ ಮಾತುಗಳಿಗೆ ತಲೆಕೆಡಿಸಿಕೊಳ್ಳಲ್ಲ: ಸಿದ್ದೇಶ್ವರ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಗುಟುರು!

ಸಾರ್ವಜನಿಕರು ಮಹಾನಗರ ಪಾಲಿಕೆಯ ಆರೋಗ್ಯ ಮತ್ತು ಪರಿಸರ ವಿಭಾಗಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಕಸವಿಲೇವಾರಿ ಸಮಸ್ಯೆ ಕುರಿತು ಛಾಯಾಚಿತ್ರಗಳೊಂದಿಗೆ ಮೊಬೈಲ್ ಅಪ್ಲಿಕೇಷನ್ ಮೂಲಕ ದೂರು ಸಲ್ಲಿಸಿ, ಸ್ವೀಕೃತಿ ಪಡೆಯಲು ಮತ್ತು ನಿಗಧಿತ ಸಮಯದಲ್ಲಿ ದೂರು ಪರಿಹಾರವಾಗುವ ಬಗ್ಗೆ ಪರಿಶೀಲಿಸಲು ಅವಕಾಶವಿರುತ್ತದೆ. ಸಾರ್ವಜನಿಕರು ಮೊದಲ ಬಾರಿಗೆ ಮೊಬೈಲ್ ಅಪ್ಲಿಕೇಷನ್ನಲ್ಲಿ ತಮ್ಮ ಮೊಬೈಲ್ ನಂಬರ್, ಇ-ಮೇಲ್ ಐಡಿ ನೀಡುವ ಮೂಲಕ ಒಂದು ಬಾರಿ ನೊಂದಾಯಿಸಿಕೊಳ್ಳಬೇಕು.

ದೂರು ಸಲ್ಲಿಸುವ ವಿಧಾನ:

ತೆರೆದ ಜಾಗದಲ್ಲಿ ಕಸವನ್ನು ಸುಡುವುದು. ಕಟ್ಟಡದ ನಿರ್ಮಾಣದ ಸಾಮಗ್ರಿ, ಅವಶೇಷಗಳನ್ನು ಹಾಗೆ ಬಿಟ್ಟಿರುವ ಕಸ ವಿಲೇವಾರಿ ಕುರಿತು ದೂರನ್ನು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸಲು ಪ್ಲೇ-ಸ್ಟೋರ್‌ನಲ್ಲಿ https://play.google.com/store/apps/details?id=com.dvgsmart.help ಜಾಲತಾಣದಲ್ಲಿ ಡೌನ್‌ಲೋಡ್  ಮಾಡಿಕೊಳ್ಳಲಾಗುವುದು.

ಪ್ರಸ್ತುತ ಕಸ ವಿಲೇವಾರಿ (SWM) ಸಂಬಂಧಿಸಿದಂತೆ ದೂರುಗಳನ್ನು ಮೊಬೈಲ್ ಅಪ್ಲಿಕೇಷನ್ನ ಡ್ರಾಪ್ಡೌನ್ನಲ್ಲಿ ನಮೂದಾಗಿದ್ದು, ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆಗೆ ಸಂಬಂಧಿಸಿದ ಇತರೆ ದೂರುಗಳನ್ನು ಸಹ ನೊಂದಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾಹಿತಿ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ, ಡಿಯುಡಿಸಿ ಯೋಜನಾ ನಿರ್ದೇಶಕ ಮಹಾಂತೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Exit mobile version