Home ದಾವಣಗೆರೆ ಸಿಎಂ ಸಿದ್ದರಾಮಯ್ಯರ ದೂರದೃಷ್ಟಿ ಇಲ್ಲದ “ಸಾಲದ ಬಜೆಟ್”: ಶಿವನಗೌಡ ಟಿ. ಪಾಟೀಲ್ ಟೀಕೆ
ದಾವಣಗೆರೆನವದೆಹಲಿಬೆಂಗಳೂರು

ಸಿಎಂ ಸಿದ್ದರಾಮಯ್ಯರ ದೂರದೃಷ್ಟಿ ಇಲ್ಲದ “ಸಾಲದ ಬಜೆಟ್”: ಶಿವನಗೌಡ ಟಿ. ಪಾಟೀಲ್ ಟೀಕೆ

Share
ಸಿದ್ದರಾಮಯ್ಯ
Share

​ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಯಾವುದೇ ದೂರದೃಷ್ಟಿ ಇಲ್ಲದ, ಕೇವಲ ಸಾಲದ ಸುಳಿಯಲ್ಲಿ ಸಿಲುಕಿರುವ ಆಯವ್ಯಯ ಎಂದು ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಟೀಕಿಸಿದ್ದಾರೆ.

​ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿದ್ದರಾಮಯ್ಯ ಅವರು ಇದೊಂದು ದಾಖಲೆಯ ಬಜೆಟ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇದು ಅಭಿವೃದ್ಧಿಯ ದಾಖಲೆಯಲ್ಲ, ಬದಲಿಗೆ ಅತೀ ಹೆಚ್ಚು ಸಾಲ ಮಾಡಿರುವ “ಸಾಲದ ದಾಖಲೆ” ಬಜೆಟ್ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

​ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವಂತಹ ಕೃಷಿ ಘಟಕ, ವೈದ್ಯಕೀಯ ಕಾಲೇಜು ಸ್ಥಾಪನೆ ಅಥವಾ ಜಿಲ್ಲಾಸ್ಪತ್ರೆಯ ಮೇಲ್ದರ್ಜೆಗೇರಿಸುವಂತಹ ಯಾವುದೇ ಮಹತ್ವದ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಅನುದಾನ ಘೋಷಿಸಿಲ್ಲ. ​ಇಡೀ ಜಿಲ್ಲೆಯನ್ನು ಕಡೆಗಣಿಸಿ, ಕೇವಲ ಚುನಾವಣಾ ದೃಷ್ಟಿಯಿಂದ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

​ಕಳೆದ 30 ವರ್ಷಗಳಿಂದ ಆಗದ ಅಭಿವೃದ್ಧಿಯನ್ನು ಈಗ ಮಾಡುತ್ತೇವೆ ಎಂದು ಹಣ ಬಿಡುಗಡೆ ಮಾಡಿರುವುದು ಕೇವಲ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿರುವ ತಂತ್ರವಾಗಿದೆ. ​ಒಟ್ಟಾರೆಯಾಗಿ, ಈ ಬಜೆಟ್ ಜನಸಾಮಾನ್ಯರ ಅಥವಾ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೂಡಿಲ್ಲ ಎಂದು ಶಿವನಗೌಡ ಟಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *