Home ಕ್ರೈಂ ನ್ಯೂಸ್ ಶಿಕ್ಷಕ ಕಳೆದುಕೊಂಡಿದ್ದ ‘ಅಮೂಲ್ಯ ದಾಖಲೆ’ಗಳಿದ್ದ ಮೊಬೈಲ್ ಮರಳಿಸಿದ ದಾವಣಗೆರೆ ಪೊಲೀಸ್
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಶಿಕ್ಷಕ ಕಳೆದುಕೊಂಡಿದ್ದ ‘ಅಮೂಲ್ಯ ದಾಖಲೆ’ಗಳಿದ್ದ ಮೊಬೈಲ್ ಮರಳಿಸಿದ ದಾವಣಗೆರೆ ಪೊಲೀಸ್

Share
Share

ದಾವಣಗೆರೆ: ಕಳೆದುಹೋದ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ದಾವಣಗೆರೆ ಪೊಲೀಸರು ಮತ್ತೊಮ್ಮೆ ತಮ್ಮ ದಕ್ಷತೆಯನ್ನು ಸಾಬೀತುಪಡಿಸಿದ್ದಾರೆ.

ದಾವಣಗೆರೆ ತಾಲ್ಲೂಕಿನ ಕೊಕ್ಕನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಅರುಣ್ ಕುಮಾರ್ ಅವರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂದಿನ ರಸ್ತೆಯಲ್ಲಿ ತಮ್ಮ ಮೊಬೈಲ್ ಫೋನನ್ನು ಕಳೆದುಕೊಂಡಿದ್ದರು.

ಮುಖ್ಯಾಂಶಗಳು: 

  • ದಾವಣಗೆರೆ ಗ್ರಾಮಾಂತರ ಠಾಣೆ ಮುಂಭಾಗವೇ ಫೋನ್ ಕಳೆದುಕೊಂಡಿದ್ದ ಕೊಕ್ಕನೂರು ಶಾಲೆಯ ಶಿಕ್ಷಕ.
  • ದೂರು ನೀಡಿದ ಕೆಲವೇ ಕ್ಷಣಗಳಲ್ಲಿ ಮೊಬೈಲ್ ಪತ್ತೆ ಹಚ್ಚಿದ ಪೊಲೀಸ್ ತಂಡ.
  •  “ಮೊಬೈಲ್ ಬೆಲೆಗಿಂತ ಅದರಲ್ಲಿನ ನೆನಪುಗಳು ಮುಖ್ಯ” – ಪೊಲೀಸರಿಂದ ಜಾಗೃತಿ ಮನವಿ.

ಫೋನ್‌ನಲ್ಲಿ ಶಿಕ್ಷಕರಿಗೆ ಸಂಬಂಧಿಸಿದ ಅತ್ಯಮೂಲ್ಯ ಶೈಕ್ಷಣಿಕ ದಾಖಲಾತಿಗಳು ಮತ್ತು ವೈಯಕ್ತಿಕ ಮಾಹಿತಿ ಇದ್ದಿದ್ದರಿಂದ ಅವರು ಆತಂಕಕ್ಕೊಳಗಾಗಿದ್ದರು. ತಕ್ಷಣ ಠಾಣೆಗೆ ಭೇಟಿ ನೀಡಿ ವಿಷಯ ತಿಳಿಸಿದಾಗ, ಗ್ರಾಮಾಂತರ ಪೊಲೀಸ್ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೊಬೈಲ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಪತ್ತೆಯಾದ ಮೊಬೈಲನ್ನು ಶಿಕ್ಷಕರಿಗೆ ಹಸ್ತಾಂತರಿಸುವ ಮೂಲಕ ದಕ್ಷತೆ ಮೆರೆದಿದ್ದಾರೆ.

ಪೊಲೀಸರಿಂದ ಜಾಗೃತಿ ಮನವಿ:

ಈ ಸಂದರ್ಭದಲ್ಲಿ ಪೊಲೀಸರು ಸಾರ್ವಜನಿಕರಿಗೆ ವಿಶೇಷ ವಿನಂತಿ ಮಾಡಿದ್ದಾರೆ. “ಯಾರಿಗಾದರೂ ಅಕಸ್ಮಿಕವಾಗಿ ಮೊಬೈಲ್ ಫೋನ್ ಸಿಕ್ಕಲ್ಲಿ, ದಯವಿಟ್ಟು ಅದನ್ನು ವಾರಸುದಾರರಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಿ. ಮೊಬೈಲ್ ಬೆಲೆಗಿಂತಲೂ ಅದರಲ್ಲಿರುವ ಫೋಟೋಗಳು, ದಾಖಲೆಗಳು ಮತ್ತು ಸಂಪರ್ಕ ಸಂಖ್ಯೆಗಳು ಮಾಲೀಕರಿಗೆ ಅತ್ಯಂತ ಅಮೂಲ್ಯವಾಗಿರುತ್ತವೆ. ಒಮ್ಮೆ ಫೋನ್ ಫ್ಲಾಶ್ ಮಾಡಿದರೆ ಆ ಎಲ್ಲಾ ನೆನಪುಗಳು ಅಳಿಸಿ ಹೋಗುತ್ತವೆ, ಆದ್ದರಿಂದ ಮಾನವೀಯತೆ ಪ್ರದರ್ಶಿಸಿ” ಎಂದು ಕೋರಿದ್ದಾರೆ.

Share

Leave a comment

Leave a Reply

Your email address will not be published. Required fields are marked *