Site icon Kannada News-suddikshana

Davanagere: ದಾವಣಗೆರೆಯಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ನೃತ್ಯೋತ್ಸವದ ಸೊಬಗು

SHREE RAGHAVENDRA SWAMY ARADHANE

SUDDIKSHANA KANNADA NEWS/ DAVANAGERE/ DATE:03-09-2023

ದಾವಣಗೆರೆ (Davanagere): ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದಲ್ಲಿ ನೃತ್ಯೋತ್ಸವ ಗಮನ ಸೆಳೆಯಿತು.

ನಮನ ಅಕಾಡೆಮಿಯ ಗುರು ವಿದುಷಿ ಮಾಧವಿ ಡಿ.ಕೆ. ಮತ್ತು ಶಿಷ್ಯ ವೃಂದದವರ ವಿಶೇಷ ಭರತನಾಟ್ಯ

ರಾಯರ ಆರಾಧನಾ ಮಹೋತ್ಸವದ ಪ್ರಯುಕ್ತ ನಗರದ ಕೆ.ಬಿ.ಬಡಾವಣೆಯ ರಾಯರ ಮಠದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದಾವಣಗೆರೆ(Davanagere)ಯ ನಮನ ಅಕಾಡೆಮಿಯ ಗುರು ವಿದುಷಿ ಮಾಧವಿ ಡಿ.ಕೆ. ಮತ್ತು ಶಿಷ್ಯ ವೃಂದದವರು ವಿಶೇಷ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಗಣೇಶ ವಂದನ, ನಟರಾಜ ಸ್ತುತಿ, ಪುಷ್ಪಾಂಜಲಿ, ದಶಾವತಾರ ಸೇರಿದಂತೆ ಇನ್ನೂ ಅನೇಕ ಶಾಸ್ತ್ರೀಯ ನೃತ್ಯಗಳನ್ನು ಪ್ರದರ್ಶಿಸಿದರು.

ಈ ಸುದ್ದಿಯನ್ನೂ ಓದಿ: 

Explosive Detection Expertise: ಬೆರಗಾಗುವಂಥ ಟ್ರ್ಯಾಕ್ ರೆಕಾರ್ಡ್: ಸ್ಫೋಟಕ ಪತ್ತೆ, ವಿಧ್ವಂಸಕ ಕೃತ್ಯ ತಡೆ, ಪ್ರಧಾನಿ ಭೇಟಿ ಸ್ಥಳ ತಪಾಸಣೆ ನಿಪುಣೆ ಸೌಮ್ಯ ಈಗ ನೆನಪಷ್ಟೇ……!

ಈ ನೃತ್ಯಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ದಾವಣಗೆರೆಯ ನಮನ ಅಕಾಡೆಮಿಯಿಂದ ನೃತ್ಯರೂಪಕ ಪ್ರದರ್ಶನ

ಅದರಲ್ಲಿಯೂ ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಆಧಾರಿತ “ಕಲ್ಪವೃಕ್ಷ” ಎಂಬ ನೃತ್ಯರೂಪಕವನ್ನುಅತಿ ಸುಂದರವಾಗಿ ಪ್ರಸ್ತುತಪಡಿಸಿದರು.

ದಾವಣಗೆರೆಯ ನಮನ ಅಕಾಡೆಮಿಯಿಂದ ನೃತ್ಯರೂಪಕ

ನಮನ ಅಕಾಡೆಮಿಯ ಗುರುಗಳೊಂದಿಗೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ನೃತ್ಯ ಪ್ರದರ್ಶನ ನೀಡಿದರು. ಒಂದಕ್ಕಿಂತ ಮತ್ತೊಂದು ನೃತ್ಯ ಗಮನ ಸೆಳೆಯಿತು.

 

ದಾವಣಗೆರೆಯ ನಮನ ಅಕಾಡೆಮಿಯಿಂದ ನೃತ್ಯರೂಪಕ ಪ್ರದರ್ಶನ

 

30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರದರ್ಶನ ಗುರುರಾಯರ ಆರಾಧನೆಯ ಜೊತೆಗೆ ನೃತ್ಯೋತ್ಸವದ ರಸದೌತಣ ಉಣಬಡಿಸಿದರು.

 

 

Exit mobile version