ದಾವಣಗೆರೆ: ಸುಮಾರು 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಆರ್ ಪ್ರಕರಣದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ:
1998ರ ಸೆಪ್ಟೆಂಬರ್ 23 ರಂದು ರಂಗನಾಥ ಬಡಾವಣೆಯ ನಿವಾಸಿ ರುದ್ರಯ್ಯ ಎಂಬುವರ ಮನೆಯಲ್ಲಿ ಟಿವಿ ಕಳ್ಳತನವಾಗಿತ್ತು. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಪೊಲೀಸರು ಎ1-ರವಿ ಮತ್ತು ಎ4-ಮುನಾವರ್ ಎಂಬುವರನ್ನು ಬಂಧಿಸಿ ಟಿವಿಯನ್ನು ವಶಪಡಿಸಿಕೊಂಡಿದ್ದರು. ಆದರೆ, ಎ2-ರಾಜ ಮತ್ತು ಎ3-ಪಕೀರ ಎಂಬುವರು ಅಂದಿನಿಂದ ತಲೆಮರೆಸಿಕೊಂಡಿದ್ದರು.
ಬಂಧನ ಪ್ರಕ್ರಿಯೆ:
ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈ ಪ್ರಕರಣವು 2019 ರಲ್ಲಿ ಎಲ್.ಪಿ.ಆರ್ ಆಗಿ ಬದಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಅವರ ನಿರ್ದೇಶನದಲ್ಲಿ, ಪಿ.ಎಸ್.ಐ ಜೋವಿತ್ ರಾಜ್ ಮತ್ತು ಸಿಬ್ಬಂದಿ ಹನುಮಂತಪ್ಪ ಅವರ ತಂಡವು ತನಿಖೆ ನಡೆಸಿ, ದೇವರಾಜ್ ಅರಸ್ ಬಡಾವಣೆಯ ಪೂಜಾ ಹೋಟೆಲ್ ಹಿಂಭಾಗದ ಗುಡಿಸಲಿನಲ್ಲಿ ವಾಸವಿದ್ದ ಪಕ್ಕೀರ ಅಲಿಯಾಸ್ ಕುಲ್ಡ (50 ವರ್ಷ) ಎಂಬ ಆರೋಪಿಯನ್ನು ಬಂಧಿಸಿದೆ.
ಪ್ರಸ್ತುತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮತ್ತೊಬ್ಬ ಆರೋಪಿ ‘ರಾಜ’ನಿಗಾಗಿ ಹುಡುಕಾಟ ಮುಂದುವರಿದಿದೆ. ಸುದೀರ್ಘ 28 ವರ್ಷಗಳ ನಂತರ ಆರೋಪಿಯನ್ನು ಪತ್ತೆಹಚ್ಚಿದ ತಂಡವನ್ನು ದಾವಣಗೆರೆ ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಅವರು ಅಭಿನಂದಿಸಿದ್ದಾರೆ.
- 28 years old theft case
- 28 ವರ್ಷಗಳ ನಂತರ ಬಂಧನ
- Accused arrested after 28 years
- Davanagere crime news
- DAVANAGERE POLICE
- Davanagere rural police
- Karnataka Police success
- LPR Case Davanagere
- Pakkeera alias Kulda arrest
- TV theft case 1998
- ಎಲ್.ಪಿ.ಆರ್ ಪ್ರಕರಣ
- ಕರ್ನಾಟಕ ಪೊಲೀಸ್ ಕಾರ್ಯಾಚರಣೆ
- ಕಳ್ಳತನ ಪ್ರಕರಣ
- ಟಿವಿ ಕಳ್ಳತನ
- ದಾವಣಗೆರೆ ಕ್ರೈಂ ನ್ಯೂಸ್
- ದಾವಣಗೆರೆ ಗ್ರಾಮಾಂತರ ಪೊಲೀಸ್
- ದಾವಣಗೆರೆ ಪೊಲೀಸ್
- ಪಕೀರ ಅಲಿಯಾಸ್ ಕುಲ್ಡ





Leave a comment