ದಾವಣಗೆರೆ: ನಗರದ ಪ್ರತಿಷ್ಠಿತ ಆಫೀಸರ್ಸ್ ಕ್ಲಬ್ ಆವರಣದಲ್ಲಿರುವ ಈಜು ಕೊಳದಲ್ಲಿ ಏಪ್ರಿಲ್ 01 ರಿಂದ 25 ದಿನಗಳ ಕಾಲ ವಿಶೇಷ ಈಜು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳಿಗೆ ಈಜನ್ನು ಕಲಿಯಲು ಇದೊಂದು ಉತ್ತಮ ಅವಕಾಶವಾಗಿದೆ.
ಈ ಶಿಬಿರಕ್ಕೆ ಒಟ್ಟು ರೂ. 4,500/- ಗಳ ತರಬೇತಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಕ್ಲಬ್‌ನ ಸದಸ್ಯರು, ಅವರ ಕುಟುಂಬದ ಸದಸ್ಯರು ಮಾತ್ರವಲ್ಲದೆ ಸಾಮಾನ್ಯ ಸಾರ್ವಜನಿಕರಿಗೂ ಪ್ರವೇಶ ನೀಡಲಾಗಿದೆ. ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಮೊದಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ‘ಮೊದಲು ಬಂದವರಿಗೆ ಆದ್ಯತೆ’ ತತ್ವದ ಮೇಲೆ ಪ್ರವೇಶಾತಿ ನೀಡಲಾಗುವುದು ಎಂದು ಕ್ಲಬ್‌ನ ಕಾರ್ಯದರ್ಶಿಗಳಾದ ಡಾ|| ಚಂದ್ರಶೇಖರ್ ಎಸ್ ಸಂಕದ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ದೂರವಾಣಿ: 08192-223520
ಸ್ಥಳ: ಆಫೀಸರ್ಸ್ ಕ್ಲಬ್ ಕಚೇರಿ, ದಾವಣಗೆರೆ.





Leave a comment