Home ದಾವಣಗೆರೆ ದಾವಣಗೆರೆ ಜನರೇ ಗಮನಿಸಿ: ಹತ್ತು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜಿನಲ್ಲಿ ಆಗಲಿದೆ ವ್ಯತ್ಯಯ
ದಾವಣಗೆರೆಬೆಂಗಳೂರು

ದಾವಣಗೆರೆ ಜನರೇ ಗಮನಿಸಿ: ಹತ್ತು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜಿನಲ್ಲಿ ಆಗಲಿದೆ ವ್ಯತ್ಯಯ

Share
ದಾವಣಗೆರೆ
Share

SUDDIKSHANA KANNADA NEWS/DAVANAGERE/DATE:30_12_2025

ದಾವಣಗೆರೆ: ನಗರದ ಟಿ.ವಿ ಸ್ಟೇಷನ್ ಕುಡಿಯುವ ನೀರು ಘಟಕವನ್ನು ತಾತ್ಕಾಲಿಕವಾಗಿ ಹತ್ತು ಕಾಲ ನಿಲುಗಡೆಗೊಳಿಸುತ್ತಿದ್ದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

READ ALSO THIS STORY: ಬೇಸಿಗೆ ಬೆಳೆಗೆ ಭದ್ರಾ ಡ್ಯಾಂ ನೀರು ಹರಿಸುವ ಕುರಿತಂತೆ ಚರ್ಚಿಸಲು ಜ.2ಕ್ಕೆ ಸಿಇಸಿ ಸಭೆ

ಕೆ.ಯು.ಐ.ಡಿ.ಎಫ್.ಸಿ ಇಲಾಖೆಯಿಂದ ಜಲಸಿರಿ ಯೋಜನೆಯಡಿ ಟಿ.ವಿ ಸ್ಟೇಷನ್ ಕುಡಿಯುವ ನೀರು. ಪುನಃಶ್ಚೇತನ ಕಾಮಗಾರಿಯು ಡಿಸೆಂಬರ್ 30 ರಿಂದ ಜನವರಿ 9, 2026 ರವರೆಗೆ ನಡೆಯಲಿದೆ.

ಎಸ್.ಪಿ.ಬಿ ಕಾಲೋನಿ, ಕೆ.ಎಸ್.ಆರ್.ಟಿ.ಸಿ ಡಿಪೋ ಮತ್ತು ಎನ್.ಸಿ.ಸಿ ಘಟಕದ ಸುತ್ತಮುತ್ತ ಕೆ.ಬಿ.ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ, ಜಯನಗರ, ಸರಸ್ವತಿ ನಗರ, ಶಕ್ತಿ ನಗರ, ಸುಬ್ರಮಣ್ಯ ನಗರ, ಶ್ರೀನಿವಾಸ ನಗರ, ಲೋಕಿಕೆರೆ ಮುಖ್ಯ ರಸ್ತೆ, ಕೈಗಾರಿಕಾ ಪ್ರದೇಶ, ಕೆ.ಟಿ.ಜೆ ನಗರ, ಜಯದೇವ ಸರ್ಕಲ್, ಡಿ.ಸಿ.ಎಂ ‘ಎ’ ‘ಆ’ ಮತ್ತು ‘ಸಿ’ ಬ್ಲಾಕ್, ಪಿ.ಬಿ.59 ರಸ್ತೆ ರಿಲಯನ್ಸ್ ಬಜಾರ್ ಸುತ್ತ, ನಿಟುವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ವ್ಯತ್ಯಯವಾಗಲಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *