Site icon Kannada News-suddikshana

Davanagere: ಆಕರ್ಷಕ ಪಥ ಸಂಚಲನ, ನೃತ್ಯ ರೂಪಕ ಸೂಪರ್: ಕಣ್ತುಂಬಿಕೊಂಡ ಸಾವಿರಾರು ಜನರು

SUDDIKSHANA KANNADA NEWS/ DAVANAGERE/ DATE:15-08-2023

ದಾವಣಗೆರೆ (Davanagere): ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ಪಥಸಂಚಲನ ಎಲ್ಲರ ಗಮನ ಸೆಳೆಯಿತು.

ಡಿ.ಎ.ಆರ್ ಪೋಲಿಸ್ ತಂಡ ಸಹದೇವಪ್ಪ ಬಂಡಿ ವಡ್ಡರ್, ನಾಗರಿಕ ಪೊಲೀಸ್ ತಂಡ ಮಹದೇವ ಸಿದ್ದಪ್ಪ ಭತ್ಯೆ, ಗೃಹ ರಕ್ಷಕ ದಳ ಹಾಲೇಶ್, ಅರಣ್ಯ ರಕ್ಷಕ ಅಂಜಿನಪ್ಪ, ಅಬಕಾರಿ ದಳ ಶ್ರೀಕಾಂತ್ ಧಾರಣಿ, ಅಗ್ನಿ ಶಾಮಕ ದಳ ಅವಿನಾಶ್,
ಎನ್‍ಸಿಸಿ ಕಾಲೇಜು ವಿಭಾಗದಿಂದ ಜಿಎಫ್‍ಜಿಸಿ ಕಾಲೇಜಿನ ಶಿವಕುಮಾರ್ ನೇತೃತ್ವ, ಎವಿಕೆ ಕಾಲೇಜಿನ ಪ್ಲಟೂನ್ ಕಮಾಂಡೆರ್ ಕುಮಾರಿ ಸೃಷ್ಠಿ, ಡಿಆರ್‍ಆರ್ ಕಾಲೇಜುನ ಪ್ಲಟೋನ್ ಕಮಾಂಡೆರ್ ಕೆ.ಆರ್ ಅಭಿಷೇಕ್ ನಾಯಕ್, ಜಿಎಂಐಟಿ
ಕಾಲೇಜಿನ ಪ್ರತೀಕ್, , ಡಿಆರ್‍ಎಂ ಕಾಲೇಜಿನ ದರ್ಶನ್ ಎಂ.ಎಂ, ಎ.ಆರ್.ಜಿ ಕಾಲೇಜಿನ ಯುವರಾಜ್ ಡಿ.ಬಿ, ಸೆಂಟ್ ಪಾಲ್ಸ್ ಸೂಲ್ಕಿನ ಹೈಸ್ಕೂಲ್ ವಿಭಾಗದ ಪ್ರತೀಕ್ಷ ಪಾಲ್ಗೊಂಡಿದ್ದರು.

ಬಾಪೂಜಿ ಎಸ್‍ಪಿಸಿ ಸ್ಕೂಲ್ ಗೋವರ್ಧನ್, ಸಿದ್ದಗಂಗಾ ಗೈಡ್ ಟ್ರೂಪ್ ರೋಷಣಿ, ಆರ್.ಎಂ.ಎಸ್.ಎ ನಿಟ್ಟುವಳ್ಳಿ ಸೇವಾದಳ ಬಿಂದು ಆರ್, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಟ್ರೂಪ್ ಸ್ವಪ್ನ, ಬಾಪೂಜಿ ಸಿಬಿಎಸ್‍ಇ ಬಾಲಕಿಯರ ವಿಭಾಗ ಯಶಸ್ವಿ, ಪೊಲೀಸ್ ಪಬ್ಲಿಕ್ ವಸತಿ ಶಾಲೆ ಸುಜಯ್ ಎಸ್.ಗೌಡ, ಜೈನ್ ಪಬ್ಲಿಕ್ ಸ್ಕೂಲಿನ ಪೃಥ್ವಿ, ಆರ್.ವಿ.ಜಿ.ಕೆ ಡಿಸ್ಟಿಕ್ಟ್ರ್ ಸ್ಕೌಟ್ಸ್ ಟ್ರೂಪ್ ಅಜಯ್, ಸರ್ಟಿಫೈಡ್ ಸ್ಕೂಲ್ ಮಂಜುನಾಥ, ಸಿದ್ದಗಂಗಾ ಟ್ರೂಪ್ ಶಶಾಂಕ್, ಪುಷ್ಪಾ ಮಹಾಲಿಂಗಪ್ಪ ಶಾಲೆಯ ಖುಷಿ, ತರಳಬಾಳು ಶಾಲೆಯ ಸಿಂಚನಾ ವೈ.ಜಿ, ಸೆಂಟ್ ಪಾಲ್ಸ್ ಸೆಂಟ್ರಲ್ ಸ್ಕೂಲ್ ಅಧವಿಕಾ.ಪಿ, ಮೌನೇಶ್ವರ ಡಪ್ ಅಂಡ್ ಡಂಬ್ ಸ್ಕೂಲ್ ಮಹೇಶ್ ಮತ್ತು ಆರ್.ವಿ.ಕೆ ಹೈಸ್ಕೂಲ್‍ನ ಮೌನಿಕಾ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.

ಬಹುಮಾನ ಗಳಿಸಿದ ತುಕಡಿಗಳು: ಗೃಹ ರಕ್ಷಕ ದಳ ಪ್ರಥಮ ಸ್ಥಾನ, ಅರಣ್ಯ ಇಲಾಖೆ ದ್ವಿತೀಯ ಸ್ಥಾನ ಪಡೆಯಿತು. ಎಸ್.ಸಿ.ಸಿ ಯೂನಿಟ್ ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನ ಜಿಎಂಐಟಿ ಕಾಲೇಜು, ಡಿಆರ್‍ಎಂ ಸೈನ್ಸ್ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಎನ್‍ಸಿಸಿ ವಿಭಾಗದಿಂದ ಮೌನೇಶ್ವರ ಡಪ್ ಅಂಡ್ ಡಂಬ್ ಸ್ಕೂಲ್ ಪ್ರಥಮ ಸ್ಥಾನ, ಆರ್.ಎಂ.ಎಸ್.ಎ ನಿಟ್ಟುವಳ್ಳಿ ಸೇವಾದಳ ದ್ವಿತೀಯ ಸ್ಥಾನ, ಹೈಸ್ಕೂಲ್ ವಿಭಾಗದಿಂದ ಪುಪ್ಪಾ ಮಹಾಲಿಂಗಪ್ಪ ಶಾಲೆ ಪ್ರಥಮ ಸ್ಥಾನ, ತರಳಬಾಳು ಹೈಸ್ಕೂಲ್ ಗರ್ಲ್ ದ್ವಿತೀಯ ಸ್ಥಾನ, ಪ್ರೈಮರಿ ವಿಭಾಗದಿಂದ ಪೊಲೀಸ್ ಪಬ್ಲಿಕ್ ಸ್ಕೂಲ್ ಕೊಂಡಜ್ಜಿ ಪ್ರಥಮ ಸ್ಥಾನ, ಜೈನ್ ಪಬ್ಲಿಕ್ ಸ್ಕೂಲ್ ದ್ವಿತೀಯ ಸ್ಥಾನವನ್ನು
ಪಡೆದವು.

ಉತ್ತಮ ಸಮವಸ್ತ್ರ;

ಪ್ರಥಮ ಸ್ಥಾನ ಸೆಂಟ್ ಪಾಲ್ಸ್ ಸೆಂಟ್ರಲ್ ಗರ್ಲ್ಸ್ ಸ್ಕೂಲ್, ದ್ವಿತೀಯ ಸ್ಥಾನ ಸರ್ಟಿಪೈಡ್ ಸ್ಕೂಲ್ ದಾವಣಗೆರೆ ಪಡೆಯಿತು.

ದೇಶಭಕ್ತಿ ಗೀತೆಗಳ ನೃತ್ಯ ರೂಪಕ:

ಲಲಿತ್ ಇಂಟರ್ ನ್ಯಾಷನಲ್ ಶಾಲೆಯಿಂದ ವಂದೇ ಮಾತರಂ, ಸೆಂಟ್ ಮೇರೀಸ್ ಶಾಲೆ ವಿನೋಬನಗರ ಚಕ್ ದೇ ಇಂಡಿಯಾ, ನಿಂಚನ ಪಬ್ಲಿಕ್ ಶಾಲೆ, ನಿಟ್ಟುವಳ್ಳಿ ಗಾಂಧಿ ಗೋಖಲೆ ಶಾಂತಿ ಇಂಡಿಯಾ, ಸಿದ್ದಗಂಗಾ ವಿದ್ಯಾ ಸಂಸ್ಥೆಯಿಂದ ಸಂಕೋಲೆಯಿಂದ ಸ್ವಾತಂತ್ರ್ಯದೆಡೆಗೆ ರೂಪಕ ಪ್ರದರ್ಶನ ಮತ್ತು ಜೈನ್ ವಿದ್ಯಾಲಯದಿಂದ ಜಾಗ್ ಹಿಂದೂಸ್ತಾನ್ ಕಾರ್ಯಕ್ರಮವನ್ನು ಸಾವಿರಾರು ವಿದ್ಯಾರ್ಥಿಗಳಿಂದ ಪ್ರದರ್ಶನ ಮಾಡಲ್ಪಟ್ಟಿತು.

ಕಿರು ಹೊತ್ತಿಗೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತಂದಿರುವ ನೂತನ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ನುಡಿದಂತೆ ನಡೆದಿದ್ದೆವೆ ಎಂಬ ಕಿರು ಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಬಿಡುಗಡೆಗೊಳಿಸಿದರು.

Exit mobile version