Home ಕ್ರೈಂ ನ್ಯೂಸ್ ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ನವವಿವಾಹಿತ, ಸೋದರ ಮಾವನೂ ಆತ್ಮಹತ್ಯೆ: ದಾವಣಗೆರೆಯಲ್ಲಿ ಡಬಲ್ ಟ್ರಾಜೆಡಿ!”
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ನವವಿವಾಹಿತ, ಸೋದರ ಮಾವನೂ ಆತ್ಮಹತ್ಯೆ: ದಾವಣಗೆರೆಯಲ್ಲಿ ಡಬಲ್ ಟ್ರಾಜೆಡಿ!”

Share
ದಾವಣಗೆರೆ
Share

ದಾವಣಗೆರೆ: ಪತ್ನಿ ಅಕ್ರಮ ಸಂಬಂಧಕ್ಕೆ ಬೇಸತ್ತು ಮದುವೆಯಾದ ಎರಡೂವರೆ ತಿಂಗಳಿಗೆ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ನಡೆದಿದ್ದು, ಈತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನವವಿವಾಹಿತೆಯ ಸೋದರ ಮಾವ ಸಹ ಸೂಸೈಡ್ ಮಾಡಿಕೊಂಡಿದ್ದಾರೆ.

ಗುಮ್ಮನೂರು ಗ್ರಾಮದ ಹರೀಶ್ (32) ಮೃತಪಟ್ಟ ದುರ್ದೈವಿ. ನವವಿವಾಹಿತೆಯ ಸೋದರ ಮಾವ ರುದ್ರೇಶ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆ ಹಿನ್ನೆಲೆ:

ಕಳೆದ ಎರಡೂವರೆ ತಿಂಗಳ ಹಿಂದೆಯಷ್ಟೇ ರುದ್ರೇಶ್ ಅವರೇ ಮುಂದೆ ನಿಂತು ಹರೀಶ್ ಮತ್ತು ಸರಸ್ವತಿ ಎಂಬಾಕೆಯ ಜೊತೆ ವಿವಾಹ ಮಾಡಿಸಿದ್ದರು. ಆದರೆ ಸರಸ್ವತಿ ಮಾತ್ರ ಮತ್ತೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಮದುವೆಯಾಗಿದ್ದರೂ ಮುಂದುವರಿದಿತ್ತು. ಈ ಬಗ್ಗೆ ಸಣ್ಣದಾದ ಅನುಮಾನವೂ ಹರೀಶ್ ಗೆ ಬಂದಿರಲಿಲ್ಲ. ಆದರೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸರಸ್ವತಿಯು ಕುಮಾರ್ ಎಂಬಾತನ ಜೊತೆ ಓಡಿ ಹೋಗಿದ್ದಳು ಎನ್ನಲಾಗಿದೆ.

ಈ ಘಟನೆಯ ಮುಖ್ಯಾಂಶಗಳು 

  • ಮೃತಪಟ್ಟವರು: ಗುಮ್ಮನೂರು ಗ್ರಾಮದ ಹರೀಶ್ (32) ಮತ್ತು ಅವರ ಪತ್ನಿಯ ಸೋದರ ಮಾವ ರುದ್ರೇಶ್.

  • ಹಿನ್ನೆಲೆ: ಹರೀಶ್ ಮತ್ತು ಸರಸ್ವತಿ ಎಂಬುವವರ ವಿವಾಹವು ಎರಡೂವರೆ ತಿಂಗಳ ಹಿಂದೆಯಷ್ಟೇ ನಡೆದಿತ್ತು. ರುದ್ರೇಶ್ ಅವರೇ ಮುಂದೆ ನಿಂತು ಈ ಮದುವೆ ಮಾಡಿಸಿದ್ದರು.

ಇದರಿಂದ ಬೇಸತ್ತ ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಡೆತ್ ನೋಟ್ ಸಹ ಬರೆದಿಟ್ಟಿದ್ದಾರೆ. ಹರೀಶ್ ಸಾವಿನ ತಿಳಿಯುತ್ತಲೇ ಸರಸ್ವತಿಯ ಸೋದರ ಮಾವ ರುದ್ರೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ತಾಲೂಕಿನ ಆನೆಕೊಂಡದ ನಿವಾಸಿಯಾಗಿದ್ದ ರುದ್ರೇಶ್ ತುಂಬಾ ಸ್ನೇಹಜೀವಿಯಾಗಿದ್ದರು. ಈ ವಿಚಾರ ಕೇಳಿ ಬರಸಿಡಿಲು ಬಡಿದಂತಾಗಿತ್ತು. ತಾನೇ ಮುಂದೆ ನಿಂತು ಮಾಡಿಸಿದ್ದ ಮದುವೆ ಈ ರೀತಿ ಆಯ್ತಲ್ಲಾ, ಹರೀಶ್ ಸಾವಿಗೆ ನಾನೇ ಕಾರಣನಾದೆ ಎಂದು ನೊಂದು ಕೊಂಡು ರುದ್ರೇಶ್ ಸಹ ಸಾವಿಗೆ ಶರಣಾಗಿದ್ದಾರೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಸ್ವತಿಯು ತನ್ನ ಪತಿ ವಿರುದ್ಧವೇ ಆರೋಪ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ನಂಬಿಕೆಯೇ ಆಧಾರವಾಗಿರಬೇಕಾದ ದಾಂಪತ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಸಮಾಜಕ್ಕೆ ದೊಡ್ಡ ಎಚ್ಚರಿಕೆಯಾಗಿದೆ.

Share

Leave a comment

Leave a Reply

Your email address will not be published. Required fields are marked *