Site icon Kannada News-suddikshana

Davanagere New Sp: ಕ್ರಿಮಿನಲ್, ಕಾನೂನು ಬಾಹಿರ ಚಟುವಟಿಕೆ ತಡೆಗೆ ಕ್ರಮ: ನೂತನ ಎಸ್ಪಿ ಉಮಾ ಪ್ರಶಾಂತ್

SUDDIKSHANA KANNADA NEWS/ DAVANAGERE/ DATE:25-08-2023
ದಾವಣಗೆರೆ (Davanagere):  ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್ ಅಧಿಕಾರ ವಹಿಸಿಕೊಂಡರು. ವರ್ಗಾವಣೆಗೊಂಡ ಡಾ. ಅರುಣ್ ಕೆ. ಅವರಿಂದ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಜಿಲ್ಲೆಯಲ್ಲಿ ಕ್ರಿಮಿನಲ್, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.  ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು, ಹೆಚ್ಚು ಅಪಘಾತಗಳಾಗುತ್ತಿರುವುದರಿಂದ, ಅಪಘಾತಗಳ ತಡೆಗೆ ಹಲವು ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರನ್ನು ಜನಸ್ನೇಹಿಯಾಗಿ ಮಾಡಿ ಹಾಗೂ ಜನರ ಸಹಕಾರದೊಂದಿಗೆ ಒಳ್ಳೆಯ ರೀತಿಯ ಕೆಲಸ ನಮ್ಮ ಉದ್ದೇಶವಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ:
Davanagere: ಐದಾರು ದಿನಗಳಲ್ಲಿ ದಾವಣಗೆರೆಗೆ ಮೃತದೇಹಗಳು: ಪತ್ನಿ, ಪುತ್ರ ಕೊಂದು ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣನಾ…? ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ…?
ಈ ವೇಳೆ ಈ ಹಿಂದಿನ ಎಸ್.ಪಿ ಆಗಿದ್ದ ಡಾ.ಅರುಣ್ ಕೆ. ಅವರು ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.
Exit mobile version