ದಾವಣಗೆರೆ: ದಾವಣಗೆರೆ ನೂತನ ಎಸ್ಪಿಯಾಗಿ ನಿಯುಕ್ತಿಗೊಂಡಿರುವ ಡಾ. ಶೇಖರ್ ಹೆಚ್. ತೆಕ್ಕಣ್ಣನವರ್ ಅವರನ್ನು ವರ್ಗಾವಣೆಗೊಳಿಸಲಾಗಿದೆ. ದಾವಣಗೆರೆಯಲ್ಲಿ ಡ್ರಗ್ಸ್ ಮಾಫಿಯಾ, ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ಕೆಲವು ವಿಚಾರಗಳಲ್ಲಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವೇಳೆ ಪೊಲೀಸರ ಕ್ರಮ ಶ್ಲಾಘನೆ ವ್ಯಕ್ತವಾದರೆ ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರ ಗಲಾಟೆ, ಗಾಂಜಾ, ಡ್ರಗ್ಸ್ ಅಮಲು ಘಾಟು ರಾಜ್ಯದ ಗಮನ ಸೆಳೆದಿತ್ತು.
ಡ್ರಗ್ಸ್ ವಿಚಾರದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಿಎಂ ಸಿದ್ದರಾಮಯ್ಯ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಶಾಸಕರಿಗೆ ಮುಜುಗರ ತಂದಿತ್ತು. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಬಹಿರಂಗವಾಗಿಯೇ ಪಕ್ಷಕ್ಕೆ ಮುಜುಗರ ಆಗಿದ್ದು ನಿಜ ಎಂದು ಒಪ್ಪಿಕೊಂಡಿದ್ದರು. ಎಸ್. ಎಸ್. ಮಲ್ಲಿಕಾರ್ಜುನ್ ಅವರು ನನ್ನ ಜೊತೆ ಫೋಟೋ ತೆಗೆಸಿಕೊಂಡವರೆಲ್ಲರಿಗೂ ನನ್ನ ಶ್ರೀರಕ್ಷೆ ಇದೆ ಎಂದು ಹೇಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತರಾಗಿದ್ದ ಶಾಮನೂರು ವೇದಮೂರ್ತಿ ಸೇರಿದಂತೆ ಕಾಂಗ್ರೆಸ್ ನಾಯಕರೇ ಈ ಜಾಲದಲ್ಲಿ ಸಿಕ್ಕಿಬಿದ್ದಿದ್ದರು. ಇವರೆಲ್ಲರನ್ನೂ ಜೈಲಿಗಟ್ಟಲಾಗಿತ್ತು. ಬಡಾವಣೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕಿ ಗಾಯತ್ರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆಯೂ ರಾಜ್ಯದ ಗಮನ ಸೆಳೆದಿತ್ತು. ಮಾತ್ರವಲ್ಲ, ಪೊಲೀಸ್ ಇಲಾಖೆಯ ಅಧಿಕಾರಿಗಳ ಮೇಲೆ ಕೈ ಮಾಡಿದ್ದ ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ರ ಮೂವರು ಪುತ್ರರೂ ಸೇರಿದಂತೆ ಆರು ಮಂದಿಯನ್ನು ಪೊಲೀಸ್ ಇಲಾಖೆ ಬಂಧಿಸಲಾಗಿತ್ತು. ಈ ಪ್ರಕರಣವು ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿತ್ತು. ಜೊತೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರೂ ಸಹ ಕಾನೂನು ಕ್ರಮ ಖಚಿತವಾಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಿಯೇ ಆಗುತ್ತದೆ ಎಂದು ದಾವಣಗೆರೆಗೆ ಭೇಟಿ ನೀಡಿದ್ದಾಗ ಹೇಳಿದ್ದರು.
ಎಲ್ಲಿಯವರು ಡಾ. ಶೇಖರ್ ಹೆಚ್. ತೆಕ್ಕಣ್ಣನವರ್?
ಬಾಗಲಕೋಟೆಯ ಬಿಳಿಗಿರಿ ತಾಲೂಕಿನ ನಾಗರಹಾಳ ಗ್ರಾಮದವರು ಡಾ. ಶೇಖರ್ ಹೆಚ್. ತೆಕ್ಕಣ್ಣನವರು. ಮೂಲತಃ ಬಾಗಲಕೋಟೆ ಜಿಲ್ಲೆಯವರು. 2008ರ ಕೆಪಿಎಸ್ ಬ್ಯಾಚಿನ ಪೊಲೀಸ್ ಅಧಿಕಾರಿ.
ಮೂಲ ಮತ್ತು ಹಿನ್ನೆಲೆ
ಊರು: ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ನಾಗರಾಳ ಗ್ರಾಮದವರು.
ವೃತ್ತಿಜೀವನದ ಆರಂಭ: ವೃತ್ತಿಯಿಂದ ಇವರು ಪಶುವೈದ್ಯರು. ಕಲಬುರಗಿಯ ಚಿಂಚೋಳಿಯಲ್ಲಿ ಪಶುವೈದ್ಯರಾಗಿ ಕೆಲಸ ಮಾಡಿದ್ದರು.
ಪೊಲೀಸ್ ಸೇವೆ: 2008ರ ಕೆಪಿಎಸ್ (KPS) ಬ್ಯಾಚಿನ ಅಧಿಕಾರಿಯಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು.
ಪಶು ವೈದ್ಯರಾಗಿಯೂ ಕೆಲಸ:
ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಪಶು ವೈದ್ಯಕೀಯ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದ ಶೇಖರ್ ಅವರು ಪಶು ವೈದ್ಯರಾಗಿ ಕೆಲ ತಿಂಗಳು ಕೆಲಸ ನಿರ್ವಹಿಸಿದ್ದಾರೆ. ಆದಾದ ಬಳಿಕ ಕರ್ನಾಟಕ ಲೋಕಾ ಸೇವಾ ಆಯೋಗದ
ಕೆಎಎಸ್ ಪರೀಕ್ಷೆ ಮೂಲಕ ಕೆಪಿಎಸ್‌ಗೆ ಸೇರ್ಪಡೆಗೊಂಡಿದ್ದರು.
ಎಲ್ಲೆಲ್ಲಿ ಕಾರ್ಯನಿರ್ಹವಣೆ?
ಶೇಖರ್ ಅವರು ಒಂದು ವರ್ಷ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2010ರಿಂದ 12ರವರೆಗೆ ಶಿವಮೊಗ್ಗದ ತೀರ್ಥಹಳ್ಳಿಯ ಉಪ ವಿಭಾಗದಲ್ಲಿ, 2012ರಿಂದ 2014ರವರೆಗೆ ಚಿತ್ರದುರ್ಗದ ಹಿರಿಯೂರು
ಉಪ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ಪದೋನ್ನತಿ ಪಡೆದು ಬೆಂಗಳೂರು ನಗರದ ಗುಪ್ತವಾರ್ತೆ ವಿಭಾಗದಲ್ಲಿ ಡಿಸಿಪಿಯಾಗಿ ಐದು ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆಯ 19ನೇ
ಉಪ ಪೊಲೀಸ್ ಆಯುಕ್ತರಾಗಿಯೂ ಕೆಲಸ ಮಾಡಿದ್ದಾರೆ.
ಸಸ್ಪೆಂಡ್ ಆಗಿದ್ದ ಶೇಖರ್ ಹೆಚ್. ತೆಕ್ಕಣ್ಣನವರ್:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ಬಲಿಯಾದ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಐದು ಮಂದಿ
ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತುಗೊಳಿಸಲಾಗಿತ್ತು. ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಶೇಖರ್ ಹೆಚ್. ತೆಕ್ಕಣ್ಣನವರ್ ಈ ಪ್ರಕರಣದಲ್ಲಿ ಸಸ್ಪೆಂಡ್ ಕೂಡ ಆಗಿದ್ದರು.
ಗಮನಾರ್ಹ ಸಂಗತಿಗಳು
ಸಸ್ಪೆನ್ಷನ್ ಪ್ರಕರಣ: ಇವರು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಅವಧಿಯಲ್ಲಿ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು.
ದಾವಣಗೆರೆಯ ಸವಾಲು: ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಡ್ರಗ್ಸ್ ಮಾಫಿಯಾ ಜಾಲದ ಪತ್ತೆ, ಪೊಲೀಸ್ ಅಧಿಕಾರಿಗಳ ಮೇಲಿನ ಹಲ್ಲೆ ಮತ್ತು ರಾಜಕೀಯ ವ್ಯಕ್ತಿಗಳ ಭಾಗೀದಾರಿಕೆಯಂತಹ ಸೂಕ್ಷ್ಮ ಪ್ರಕರಣಗಳ ನಡುವೆ ಇವರು ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
- Bagalkot
- Bilgi
- Davanagere Drugs Case
- Davanagere New SP
- Dr. Shekhar H Tekkannavar
- Karnataka IPS KPS Officers
- Karnataka Police Transfer
- Shekhar Tekkannavar Profile
- Veterinarian to SP
- ಕರ್ನಾಟಕ ಪೊಲೀಸ್ ವರ್ಗಾವಣೆ
- ಡಾ. ಶೇಖರ್ ಹೆಚ್ ತೆಕ್ಕಣ್ಣನವರ್
- ಡ್ರಗ್ಸ್ ಮಾಫಿಯಾ ದಾವಣಗೆರೆ
- ದಾವಣಗೆರೆ ಕ್ರೈಮ್
- ದಾವಣಗೆರೆ ನೂತನ ಎಸ್ಪಿ
- ಪಶುವೈದ್ಯ
- ಬಾಗಲಕೋಟೆ
- ಬಿಳಗಿ
- ಶೇಖರ್ ತೆಕ್ಕಣ್ಣನವರ್ ಟ್ರ್ಯಾಕ್ ರೆಕಾರ್ಡ್.





Leave a comment