Home ದಾವಣಗೆರೆ ದಾವಣಗೆರೆಯಲ್ಲಿ ಅಡುಗೆ ಅನಿಲ ಕೊರತೆಯಿಲ್ಲ: ವದಂತಿ ನಂಬಬೇಡಿ, ಹೊಸ ಬುಕ್ಕಿಂಗ್ ನಿಯಮಗಳು ಇಲ್ಲಿವೆ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ದಾವಣಗೆರೆಯಲ್ಲಿ ಅಡುಗೆ ಅನಿಲ ಕೊರತೆಯಿಲ್ಲ: ವದಂತಿ ನಂಬಬೇಡಿ, ಹೊಸ ಬುಕ್ಕಿಂಗ್ ನಿಯಮಗಳು ಇಲ್ಲಿವೆ!

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯಲ್ಲಿ ಗೃಹ ಬಳಕೆ ಎಲ್.ಪಿ.ಜಿ ಸಿಲಿಂಡರ್‌ಗಳ ಯಾವುದೇ ಕೊರತೆಯಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಕೆಲವು ದಿನಪತ್ರಿಕೆಗಳಲ್ಲಿ ಗ್ರಾಹಕರು ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲಾಗಿ ನಿಂತಿರುವ ವರದಿಗಳು ಪ್ರಕಟವಾಗುತ್ತಿದ್ದು, ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಮನೆ ಬಾಗಿಲಿಗೆ ವಿತರಣೆ: ಅನಿಲ ಕಂಪನಿಗಳ ನಿಯಮದಂತೆ ಏಜೆನ್ಸಿಗಳ ಬಳಿ ನೇರವಾಗಿ ಸಿಲಿಂಡರ್ ವಿತರಿಸಲು ಅವಕಾಶವಿಲ್ಲ. ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದರೆ, ಏಜೆನ್ಸಿಯವರು ಮನೆಗೆ ಬಂದು ಒ.ಟಿ.ಪಿ ಮೂಲಕ ವಿತರಿಸಲಿದ್ದಾರೆ.

ಪ್ಯಾನಿಕ್ ಬುಕ್ಕಿಂಗ್ ಬೇಡ: ಜಿಲ್ಲೆಗೆ ಪ್ರತಿದಿನ ಅವಶ್ಯಕತೆಗೆ ತಕ್ಕಂತೆ ಸಿಲಿಂಡರ್‌ಗಳು ಪೂರೈಕೆಯಾಗುತ್ತಿದ್ದು, ಗ್ರಾಹಕರು ಅನಾವಶ್ಯಕವಾಗಿ ಆತಂಕಗೊಂಡು ಬುಕ್ಕಿಂಗ್ ಮಾಡಬಾರದು.

ಮರುಪೂರಣದ ಅವಧಿ :

ಉಜ್ವಲ ಯೋಜನೆ: ಸಿಲಿಂಡರ್ ಮರುಪೂರಣಕ್ಕೆ 45 ದಿನಗಳ ಅವಧಿ ನಿಗದಿಪಡಿಸಲಾಗಿದೆ. ಒಂದು ಸಿಲಿಂಡರ್ ಹೊಂದಿರುವವರು: 25 ದಿನಗಳ ನಂತರ ಮರುಪೂರಣಕ್ಕೆ ಅವಕಾಶವಿದೆ.

ಎರಡು ಸಿಲಿಂಡರ್ ಹೊಂದಿರುವವರು: 35 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ.

ಸಾರ್ವಜನಿಕರು ಯಾವುದೇ ವದಂತಿಗಳಿಗೆ ನಂಬಬಾರದು ಮತ್ತು ನಿಯಮದಂತೆ ಆನ್‌ಲೈನ್ ಬುಕ್ಕಿಂಗ್ ಮೂಲಕವೇ ಸಿಲಿಂಡರ್ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08192-251552 ಅಥವಾ ಇಮೇಲ್ ddfcs.dvg-ka@nic.in ಅನ್ನು ಸಂಪರ್ಕಿಸಬಹುದಾಗಿದೆಎಂದು ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *