Home ದಾವಣಗೆರೆ ದಾವಣಗೆರೆ: ಮೇ 22, 25 ಮತ್ತು 26 ರಂದು ಜಗಳೂರು, ಕಾಡಜ್ಜಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ದಾವಣಗೆರೆಬೆಂಗಳೂರು

ದಾವಣಗೆರೆ: ಮೇ 22, 25 ಮತ್ತು 26 ರಂದು ಜಗಳೂರು, ಕಾಡಜ್ಜಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

Share
ದಾವಣಗೆರೆ
Share

 ದಾವಣಗೆರೆ: ಜಗಳೂರು ಉಪವಿಭಾಗದ ಬೆಸ್ಕಾಂ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 22, ಮೇ 25 ಹಾಗೂ ಮೇ 26 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎನ್.ಜೆ.ವೈ ಮತ್ತು ಐ.ಪಿ ಮಾರ್ಗಗಳ ಗ್ರಾಹಕರಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ಮೇ22ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಕಾಡಜ್ಜಿ ಉಪಕೇಂದ್ರದ ವ್ಯಾಪ್ತಿಗೆ ಒಳಪಡುವ ಎಫ್-01-ರೆಡ್ಡಿ ಕ್ಯಾಂಪ್, ಎಫ್-02 ಪುಟುಗನಾಳು, ಎಫ್-04 ಎನ್ ಜೆ ಶ್ರೀರಾಮ್, ಎಫ್-06 ಕಾಡಜ್ಜಿ, ಎಫ್-07 ಬಸವನಾಳು, ಎಫ್-08 ನಾಗರಕಟ್ಟೆ ಮತ್ತು ಎಫ್-09 ರಾಂಪುರ ಐ.ಪಿ 11 ಕೆ.ವಿ. ಮಾರ್ಗಗಳ ಕಾಡಜ್ಜಿ, ನಾಗರಕಟ್ಟೆ,  ರಾಂಪುರ, ಬಸವನಾಳು, ಬಸವನಾಳು ಗೊಲ್ಲರಹಟ್ಟಿ, ಬೇತೂರು,   ಪುಟುಗನಾಳು,  ರೆಡ್ಡಿ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರಿಗೆ ಈ ಅವಧಿಯಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು  ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles