Home ಕ್ರೈಂ ನ್ಯೂಸ್ ದಾವಣಗೆರೆಯಲ್ಲಿ ಅಕ್ರಮ ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ: ಓರ್ವನ ಬಂಧನ, 6 ಸಿಲಿಂಡರ್ ವಶ
ಕ್ರೈಂ ನ್ಯೂಸ್ದಾವಣಗೆರೆ

ದಾವಣಗೆರೆಯಲ್ಲಿ ಅಕ್ರಮ ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ: ಓರ್ವನ ಬಂಧನ, 6 ಸಿಲಿಂಡರ್ ವಶ

Share
ದಾವಣಗೆರೆ
Share

ದಾವಣಗೆರೆ: ಜಿಲ್ಲಾಧಿಕಾರಿಗಳಿಗೆ ಖಚಿತ ಮಾಹಿತಿ ಮೇರೆಗೆ ದಾವಣಗೆರೆಯ ಕಬ್ಬೂರು ಬಸಪ್ಪ ನಗರದ ಗೋಡೌನ್ ಒಂದರ ಮೇಲೆ ಆಹಾರ ಇಲಾಖೆ ಹಾಗೂ ಆರ್.ಎಂ.ಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಆಟೋಗಳಿಗೆ ಮನೆ ಬಳಕೆ ಸಿಲಿಂಡರ್ ತುಂಬುತ್ತಿದ್ದ ಅಕ್ರಮ ಅಡ್ಡೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಸ್ಥಳದಲ್ಲಿದ್ದ 5 ಭಾರತ್ ಗ್ಯಾಸ್ ಹಾಗೂ 1 ಹೆಚ್.ಪಿ ಸಿಲಿಂಡರ್ ಸೇರಿದಂತೆ ಒಟ್ಟು 6 ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದಾರೆ.

ಕಾರ್ಯಾಚರಣೆಯ ವೇಳೆ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಸಿಲಿಂಡರ್ ತುಂಬಲು ಬಳಸುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ.

Share

Leave a comment

Leave a Reply

Your email address will not be published. Required fields are marked *