Site icon Kannada News-suddikshana

Davanagere: ದಾವಣಗೆರೆಯ ಹದಡಿಯಲ್ಲಿ ಬೆಂಕಿ ಅವಘಡ: ಗೋದಾಮು, ಮರದ ಮುಟ್ಟು, ಪೈಲ್ವಾನ್ ಕುರಿ, ಹುಲ್ಲಿನ ಬಣವೆ ಬೆಂಕಿಗಾಹುತಿ

DAVANAGERE FIRE ACCIDENT

DAVANAGERE FIRE ACCIDENT

SUDDIKSHANA KANNADA NEWS/ DAVANAGERE/ DATE: 09-09-2023

ದಾವಣಗೆರೆ(Davanagere): ಮಧ್ಯ ರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದ ಜೂಜಿನ ಪೈಲ್ವಾನ್ ಕುರಿ, ಭತ್ತದ ಹುಲ್ಲಿನ ಬಣವೆ ಮತ್ತು ತ್ರಿಚಕ್ರದ ಸ್ಕೂಟರ್ ಭಸ್ಮವಾಗಿದ ಘಟನೆ ಹದಡಿ ಗ್ರಾಮದಲ್ಲಿ ನಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಶುಕ್ರವಾರ – ಶನಿವಾರ ಮಧ್ಯೆ ರಾತ್ರಿ ಸುಮಾರು 2 ಗಂಟೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತಕ್ಷಣ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: 

Ganesh Chaturthi: ಗಣೇಶ ಚತುರ್ಥಿ ಹಬ್ಬಕ್ಕೆ ಮೂರ್ತಿ ಪ್ರತಿಷ್ಠಾಪಿಸುವ ಆಯೋಜಕರಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕೊಟ್ಟಿರುವ ಸೂಚನೆಗಳೇನು…? ಎಚ್ಚರಿಕೆಗಳೇನು…?

ಹದಡಿ ಗ್ರಾಮದ ಗಿಡ್ಡಜ್ಜರ ಮಲ್ಲಿಕಾರ್ಜುನಪ್ಪನವರಿಗೆ ಸೇರಿದ ಗೋದಾಮು, ಮರದ ಮುಟ್ಟು, ಕರಿಮಾಳ್ಳರ ಮಂಜಪ್ಪನ ಪೈಲ್ವಾನ್ ಕುರಿ, ಎಂ ಡಿ ನಿಂಗಪ್ಪನ ಭತ್ತದ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ.

ರೈತ ಮುಖಂಡ ಕೊಳೇನಹಳ್ಳಿ ಬಿ. ಎಂ. ಸತೀಶ್ ರವರು ಸ್ಥಳಕ್ಕೆ ಭೇಟಿ ನೀಡಿ, ತಹಸೀಲ್ದಾರ್ ಡಾ.ಆಶ್ವಥ್ ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದರು. ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸತೀಶ್ ಅವರು, ಸರ್ಕಾರ ನೊಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಕ್ಷಣ ತಹಶೀಲ್ದಾರ್ ಡಾ.ಆಶ್ವಥ್, ರೆವೆನ್ಯೂ ಇನ್ಸ್ಪೆಕ್ಟರ್ ಬಸವರಾಜಪ್ಪ, ಪಶು ವೈದ್ಯಾಧಿಕಾರಿ ಹೇಮಂತಕುಮಾರ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸುವ ಭರವಸೆ ನೀಡಿದರು. ಹದಡಿ ಠಾಣೆ ಸಬ್ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ಕೊಳೇನಹಳ್ಳಿ ಬಿ ಎಂ ಸತೀಶ್, ಹದಡಿ ಗ್ರಾಮದ ಮುಖಂಡರಾದ ಎಂ. ಡಿ. ನಿಂಗಪ್ಪ, ಟಿ. ಬಿ. ಮಹಾಂತೇಶ,
ಜಿ. ಸಿ. ನಾಗರಾಜ್, ಎ. ಹೆಚ್. ನಾಗರಾಜ್, ಜಿ. ಸಿ. ಬಸವರಾಜಪ್ಪ, ಆರ್. ಬಿ. ಹನುಮಂತಪ್ಪ, ಗ್ರಾಮ ಪಂಚಾಯಿತಿ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

STORY SUMMARY:

Davangere: A fire accident that occurred in the middle of the night destroyed a pile of gambling sheep, a pile of paddy grass and a three-wheeled scooter in Hadadi village, costing lakhs of rupees. A loss has occurred.

Exit mobile version