Home ಕ್ರೈಂ ನ್ಯೂಸ್ ನಾನೊಂದು ತೀರ, ನೀನೊಂದು ತೀರ ಅಂತಿದ್ರು.. ಮನಸ್ತಾಪ ಮರೆತು ಒಂದಾದ್ರು 37 ಜೋಡಿಗಳು: ಕೌಟುಂಬಿಕ ನ್ಯಾಯಾಲಯದಲ್ಲಿ ಸಹಬಾಳ್ವೆಗೆ ಸಮ್ಮತಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ನಾನೊಂದು ತೀರ, ನೀನೊಂದು ತೀರ ಅಂತಿದ್ರು.. ಮನಸ್ತಾಪ ಮರೆತು ಒಂದಾದ್ರು 37 ಜೋಡಿಗಳು: ಕೌಟುಂಬಿಕ ನ್ಯಾಯಾಲಯದಲ್ಲಿ ಸಹಬಾಳ್ವೆಗೆ ಸಮ್ಮತಿ!

Share
ಜೋಡಿ
Share

ದಾವಣಗೆರೆ: ಜಿಲ್ಲೆಯ ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ವಿವಾಹ ವಿಚ್ಛೇಧನ ಮತ್ತು ಜೀವನಾಂಶದ ಪ್ರಕರಣಗಳಲ್ಲಿ ಮಹತ್ವದ ತಿರುವು ಸಿಕ್ಕಿದೆ. ಜಿಲ್ಲೆಯಲ್ಲಿ ಒಟ್ಟು 37 ವೈವಾಹಿಕ ಪ್ರಕರಣಗಳು ರಾಜಿಯಾಗಿದ್ದು, ಈ ಪೈಕಿ 28 ಜೋಡಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಮತ್ತೆ ಒಂದಾಗಿ ಸಹಬಾಳ್ವೆ ನಡೆಸಲು ನಿರ್ಧರಿಸಿದ್ದಾರೆ.

ದಾವಣಗೆರೆ 4ನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 2 ಜೋಡಿಗಳು, ಚನ್ನಗಿರಿ ತಾಲ್ಲೂಕಿನ 5 ಜೋಡಿಗಳು, ಹರಿಹರ ತಾಲ್ಲೂಕಿನ 1 ಜೋಡಿ, ಹೊನ್ನಾಳಿ ತಾಲ್ಲೂಕಿನ 1 ಜೋಡಿ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟಾರೆ 37 ಪ್ರಕರಣಗಳಲ್ಲಿ ರಾಜಿ ಸಂಧಾನ ಏರ್ಪಟ್ಟಿದೆ.

ಎಲ್ಲಾ ನ್ಯಾಯಾಲಯಗಳಿಂದ ಇದೇ ಮಾರ್ಚ್ ೧ ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 42,188 ಪ್ರಕರಣಗಳು ಬಾಕಿ ಇದ್ದವು. ಇದರಲ್ಲಿ ಲೋಕ್ ಅದಾಲತ್ ಗೆ ಒಟ್ಟು 11,841 ಪ್ರಕರಣಗಳನ್ನು ಗುರುತಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಸುಮಾರು 6,818 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡಿವೆ.

ಒಂದೇ ಕುಟುಂಬದ ಮಹದೇವಪ್ಪ -ಶಾಂತಿಲೀಲಾ ಮತ್ತು ರುದ್ರಪ್ಪ ಕಲ್ಪನಾ ದಂಪತಿಗಳು ಅಕ್ಕ,ತಂಗಿ ಮತ್ತು ಅಣ್ಣ, ತಮ್ಮ ದಂಪತಿಗಳು ಬೇರೆ ಬೇರೆಯಾಗಿದ್ದರು ಇಂದು ಒಂದಾಗಿದ್ದು ವಿಶೇಷವಾಗಿತ್ತು.

30 ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ತಿಪ್ಪೇಸ್ವಾಮಿ ಹಾಗೂ ಸುಮಾ ಎಂಬ ದಂಪತಿಗಳು ಇಂದು ಮತ್ತೆ ಒಂದಾಗುವ ಮೂಲಕ ಗಮನ ಸೆಳೆದರು. ಇವರ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆದು ಮಗಳು ಡಾಕ್ಟರ್ ಮತ್ತು ಮಗ ಇಂಜಿನಿಯರ್ ವಿದೇಶದಲ್ಲಿ ನೆಲೆಸಿದ್ದಾರೆ. ಇಳಿವಯಸ್ಸಿನಲ್ಲಿ ಸಣ್ಣ ಕಾರಣಕ್ಕೆ ದೂರವಾಗಿದ್ದ ಈ ದಂಪತಿಗಳು, ನ್ಯಾಯಾಧೀಶರ ಮತ್ತು ವಕೀಲರ ಸಮ್ಮುಖದಲ್ಲಿ ರಾಜಿ ಮಾಡಿಕೊಂಡು ಸಂಭ್ರಮಿಸಿದರು.

2007ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮತ್ತೊಂದು ದಂಪತಿಗಳು ಕೂಡ ಇಂದು ಒಂದಾದರು. “ಕೆಲಸದ ಒತ್ತಡ ಮತ್ತು ಹಣದ ಬೆನ್ನತ್ತಿ ಹೋಗುವ ಧಾವಂತದಲ್ಲಿ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗಲಿಲ್ಲ. ಇದರಿಂದ ಮನಸ್ತಾಪ ಉಂಟಾಗಿತ್ತು. ಆದರೆ ಈಗ ನಮ್ಮ ತಪ್ಪು ನಮಗೆ ಅರ್ಥವಾಗಿದೆ, ಎಂದು ಬಸವರಾಜು ಮತ್ತು ರೇಖಾ ದಂಪತಿಗಳು ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಆಸ್ತಿ ಹಂಚಿಕೆ ವಿಷಯದಲ್ಲಿ 16 ವರ್ಷಗಳಿಂದ ಬಗೆಹರಿಯದೆ ಇದ್ದ ಪ್ರಕರಣವನ್ನು ಇಂದು ಲೋಕ ಅದಾಲತ್ ನಲ್ಲಿ ಒಂದು ಮಾಡಿದರು. ನಾಗರಾಜು ಮತ್ತು ಗೀತಾಬಾಯಿ ದಂಪತಿಗಳು ನ್ಯಾಯಾಧೀಶರಿಗೆ, ವಕೀಲರಿಗೆ ಧನ್ಯವಾದಗಳನ್ನು ತಿಳಿಸಿದರು.

ರಾಜೀ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡ ಕಕ್ಷಿದಾರರಿಗೆ ಅಭಿನಂದನೆಗಳು. ಹೆಚ್ಚು ಪ್ರಕರಣಗಳು ರಾಜೀಯಾಗಲು ಮತ್ತು ಪಕ್ಷಗಾರರಿಗೆ ಮಾಹಿತಿ, ಕಾನೂನು ಸಲಹೆ ಮತ್ತು ಮಾಹಿತಿಯನ್ನು ನೀಡಿದ ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೂ, ಸಂಧಾನಕಾರರಿಗೂ, ವಕೀಲರಿಗೂ  ನ್ಯಾಯಾಂಗ ಇಲಾಖೆ, ವಕೀಲರ ಸಂಘಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಸಭೆ, ಬಿ.ಎಸ್.ಎನ್.ಎಲ್. ಸಾರಿಗೆ ಇಲಾಖೆ, ಹಾಗೂ ಇನ್ನಿತರೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಮತ್ತು ಸಿಬ್ಬಂದಿಯವರಿಗೆ ಧನ್ಯವಾದ ತಿಳಿಸಿದರು.

54 ಅಪರಾಧಿಕ ಪ್ರಕರಣಗಳು, 165 ಚೆಕ್ ಅಮಾನ್ಯ ಪ್ರಕರಣಗಳು, 50 ಬ್ಯಾಂಕ್ ವಸೂಲಾತಿ ಕೇಸ್ಗಳು, 27 ಇತರೆ ಹಣ ವಸೂಲಾತಿ, 55 ಅಪಘಾತ ಪರಿಹಾರ ಪ್ರಕರಣಗಳು, 123 ವಿದ್ಯುತ್ ಕಳ್ಳತನದ ಪ್ರಕರಣಗಳು, 38 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆಗಳು, 15 ಮೊಟಾರು ವಾಹನ ಪರಿಹಾರ ಜಾರಿ ಅರ್ಜಿ, 106 ಇತರೆ ಜಾರಿ ಅರ್ಜಿಗಳು ಅಲ್ಲದೆ ಹಲವು ಕಾರಣಕ್ಕಾಗಿ ದಾಖಲಿಸಿದ 72 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ ದಾವೆಗಳು 39 ರಾಜೀ ಮೂಲಕ ಇತ್ಯರ್ಥಗೊಂಡಿರುತ್ತವೆ. ಜಿಲ್ಲೆಯಾದ್ಯಾಂತ ಜನನ ಪ್ರಮಾಣ ಪತ್ರ ಕೋರಿ ದಾಖಲಿಸಿದ್ದ 1138 ಪ್ರಕರಣಗಳು ಅದಾಲತ್ತಿನಲ್ಲಿ ಇತ್ಯರ್ಥಗೊಂಡಿವೆ. ಇದಲ್ಲದೇ ಇತರೆ ಪ್ರಕರಣಗಳು ಸೇರಿ ಒಟ್ಟು 6,818 ಜಾರಿಯಲ್ಲಿದ್ದ ಪ್ರಕರಣಗಳು ಇತ್ಯರ್ಥಗೊಂಡಿವೆ.

 

Share

Leave a comment

Leave a Reply

Your email address will not be published. Required fields are marked *