Home ದಾವಣಗೆರೆ ದಾವಣಗೆರೆ ದುಗ್ಗಮ್ಮ ಜಾತ್ರೆ ರೀಲ್ಸ್ ಸ್ಪರ್ಧೆ: ಗೆದ್ದವರಿಗೆ ನಗದು ಬಹುಮಾನ – ಭಾಗವಹಿಸುವುದು ಹೇಗೆ?
ದಾವಣಗೆರೆಬೆಂಗಳೂರು

ದಾವಣಗೆರೆ ದುಗ್ಗಮ್ಮ ಜಾತ್ರೆ ರೀಲ್ಸ್ ಸ್ಪರ್ಧೆ: ಗೆದ್ದವರಿಗೆ ನಗದು ಬಹುಮಾನ – ಭಾಗವಹಿಸುವುದು ಹೇಗೆ?

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ನಗರದ ಆರಾಧ್ಯ ದೇವಿ ಶ್ರೀ ದುರ್ಗಾಂಭಿಕಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಟೀಮ್ ಪ್ರಭಾ ವಿಕಾಸ್ ಹಾಗೂ ಎಸ್ ಎಸ್ ಕೇರ್ ಟ್ರಸ್ಟ್ ಸ್ಟೂಡೆಂಟ್ ವಿಂಗ್ ವತಿಯಿಂದ “ದುಗ್ಗಮ್ಮ ಜಾತ್ರೆ ರೀಲ್ಸ್” ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು‌ ತಂಡದವರು ತಿಳಿಸಿದ್ದಾರೆ.

ದಾವಣಗೆರೆಯ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಟೀಮ್ ಪ್ರಭಾ ವಿಕಾಸ್ ಹಾಗೂ ಎಸ್‌ಎಸ್ ಕೇರ್ ಟ್ರಸ್ಟ್ ಸ್ಟೂಡೆಂಟ್ ವಿಂಗ್ ವತಿಯಿಂದ ಈ ಸ್ಪರ್ಧೆ ನಡೆಯುತ್ತಿದೆ.

ಸ್ಪರ್ಧೆಯ ಪ್ರಮುಖ ವಿವರಗಳು

ಆಯೋಜಕರು: ಟೀಮ್ ಪ್ರಭಾ ವಿಕಾಸ್ ಮತ್ತು ಎಸ್‌ಎಸ್ ಕೇರ್ ಟ್ರಸ್ಟ್ ಸ್ಟೂಡೆಂಟ್ ವಿಂಗ್ (ನೇತೃತ್ವ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್).

ವಿಷಯ: ಜಾತ್ರೆಯ ಭಕ್ತಿ, ಸಂಭ್ರಮ, ಮೆರವಣಿಗೆ ಮತ್ತು ನೃತ್ಯ.

ಅವಧಿ: 30 ರಿಂದ 90 ಸೆಕೆಂಡ್‌ಗಳು.

ಕೊನೆಯ ದಿನಾಂಕ: ಫೆಬ್ರವರಿ 28, 2026.

ಭಾಗವಹಿಸುವುದು ಹೇಗೆ?

ಸ್ಪರ್ಧೆಯಲ್ಲಿ ನಿಮ್ಮ ರೀಲ್ಸ್ ಪರಿಗಣಿಸಲ್ಪಡಬೇಕಾದರೆ ಈ ನಿಯಮಗಳನ್ನು ಪಾಲಿಸಿ:

  1. ಟ್ಯಾಗ್ ಮಾಡಿ: ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಹ್ಯಾಂಡಲ್‌ಗೆ ಟ್ಯಾಗ್ ಮಾಡಬೇಕು.

  2. ಹ್ಯಾಶ್‌ಟ್ಯಾಗ್: ಕಡ್ಡಾಯವಾಗಿ #davanagerejatrereel ಬಳಸಬೇಕು.

  3. ಖಾತೆ ಸೆಟ್ಟಿಂಗ್: ಫಲಿತಾಂಶ ಬರುವವರೆಗೆ ನಿಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್ ‘Public’ ಆಗಿರಲಿ.

30ರಿಂದ 90 ಸೆಕೆಂಡ್ ಅವಧಿಯ ರೀಲ್ಸ್:

ಜಾತ್ರೆಯ ಭಕ್ತಿ, ಸಂಭ್ರಮ, ಮೆರವಣಿಗೆ, ನೃತ್ಯ ಹಾಗೂ ಉತ್ಸಾಹವನ್ನು ಪ್ರತಿಬಿಂಬಿಸುವ 30 ರಿಂದ 90 ಸೆಕೆಂಡ್ ಅವಧಿಯ ಇನ್‌ಸ್ಟಾಗ್ರಾಂ ರೀಲ್ಸ್‌ಗಳನ್ನು ಸೃಜಿಸಲು ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಆಹ್ವಾನಿಸಲಾಗಿದೆ.

ಸ್ಪರ್ಧಾರ್ಥಿಗಳು ಫೆಬ್ರವರಿ 28ರೊಳಗೆ ತಮ್ಮ ರೀಲ್ಸ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಬೇಕು. ರೀಲ್ಸ್‌ನಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಹ್ಯಾಂಡಲ್‌ಗೆ ಟ್ಯಾಗ್ ಮಾಡುವುದು ಹಾಗೂ #davanagerejatrereel ಹ್ಯಾಶ್‌ಟ್ಯಾಗ್ ಬಳಸುವುದು ಕಡ್ಡಾಯವಾಗಿದೆ.

ಅತಿ ಹೆಚ್ಚು ಲೈಕ್ ಸಿಕ್ಕರೆ ಸಿಗುತ್ತೆ ಬಹುಮಾನ: 

ಅತ್ಯುತ್ತಮ ಮೂರು ರೀಲ್ಸ್‌ಗಳನ್ನು ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಲಾಗುವುದು. ಅತೀ ಹೆಚ್ಚು ಲೈಕ್ಸ್ ಪಡೆದ ರೀಲ್ಸ್‌ಗೆ ನಗದು ಬಹುಮಾನ ನೀಡಲಾಗುತ್ತದೆ.

ನಿಯಮಗಳು: ಸ್ಪರ್ಧೆಗೆ ಸಲ್ಲಿಸುವ ರೀಲ್ಸ್ ಸಂಪೂರ್ಣವಾಗಿ ಸ್ಪರ್ಧಾರ್ಥಿಯದೇ ಆಗಿರಬೇಕು. ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕು. ರಾಜಕೀಯ ಭಾಷಣಗಳು ಅಥವಾ ಬ್ರ್ಯಾಂಡ್ ಜಾಹೀರಾತು ಇರಬಾರದು. ಫಲಿತಾಂಶ ಘೋಷಿಸುವವರೆಗೆ ಸ್ಪರ್ಧಾರ್ಥಿಯ ಇನ್‌ಸ್ಟಾಗ್ರಾಂ ಖಾತೆ ಸಾರ್ವಜನಿಕವಾಗಿರಬೇಕು. ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಎಐ ಮೂಲಕ ಮಾಡುವ ರೀಲ್ಸ್‌ಗಳನ್ನು ಪರಿಗಣಿಸಲಾಗುವುದಿಲ್ಲ. ಯುವಜನತೆಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9980769117 ಇಲ್ಲಿ ಸಂಪರ್ಕಿಸಬಹುದಾಗಿದೆ.

Share

Leave a comment

Leave a Reply

Your email address will not be published. Required fields are marked *