SUDDIKSHANA KANNADA NEWS/DAVANAGERE/DATE:29_12_2025
ದಾವಣಗೆರೆ: ಎಲೆಕ್ಟ್ರಿಕ್ ಕಂಟ್ರ್ಯಾಕ್ಟರ್, ಗುತ್ತಿಗೆದಾರ ಕಂ ಕಾಂಗ್ರೆಸ್ ಮುಖಂಡ, ಎಳನೀರು, ಪ್ಲೈವುಡ್ ವ್ಯಾಪಾರಿ. ದಾವಣಗೆರೆ ಸಿಂಥೆಟಿಕ್ ಡ್ರಗ್ಸ್ ನಲ್ಲಿ ಅರೆಸ್ಟ್ ಆಗಿರುವವರ ವೃತ್ತಿ ಇದು.
READ ALSO THIS STORY: ದಾವಣಗೆರೆ ಸಿಂಥೆಟಿಕ್ ಡ್ರಗ್ಸ್ ಕೇಸ್ ನಲ್ಲಿ ಬಿಗ್ ಆಪರೇಷನ್: ಬಂಧಿತರ ಸಂಖ್ಯೆ 8ಕ್ಕೇರಿಕೆ, ಕಾಂಗ್ರೆಸ್ ಘಟಾನುಘಟಿಗಳು ಬಂಧನ!
ದಾವಣಗೆರೆ ಡ್ರಗ್ಸ್ ಕರಾಳ ಲೋಕದ ಹೆಡೆಮುರಿ ಕಟ್ಟಲು ಸನ್ನದ್ಧರಾಗಿರುವ ಪೊಲೀಸರು ಮತ್ತಷ್ಟು ಆರೋಪಿಗಳ ಬಂಧನಕ್ಕೆ ಶೋಧ ಶುರುವಿಟ್ಟುಕೊಂಡಿದ್ದಾರೆ. ವಿದ್ಯಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ತಲೆಮರೆಸಿಕೊಂಡಿದ್ದ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ:
ಡಿಸೆಂಬರ್ 22ರಂದು ದಾಖಲಾಗಿದ್ದ ವಿದ್ಯಾನಗರ ಪೊಲೀಸ್ ಠಾಣೆ ಗುನ್ನೆ ನಂ: 295/2025 ಕಲಂ 20(b)(II) (A), 8(C) NDPS Act ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿತರುಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶರಣ ಬಸವೇಶ್ವರ ಬಿ. ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಶಿಲ್ಪಾ ವೈ.ಎಸ್ ಅವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮಾದಕ ದ್ರವ್ಯ ನಿಗ್ರಹ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ವಿಶೇಷ ಕರ್ತವ್ಯಕ್ಕೆ ನೇಮಕ ಮಾಡಲಾಗಿತ್ತು.
ಅದರಂತೆ ಮಾದಕ ದ್ರವ್ಯ ನಿಗ್ರಹ ಪಡೆಯ ವಿಭಾಗದ ಅಧಿಕಾರಿ, ಸಿಬ್ಬಂದಿಗಳಾದ ಪಿಎಸ್ಐ ಸಾಗರ್ ಅತ್ತಾರ್ವಾಲ, ಹೆಚ್. ಪ್ರಕಾಶ್, ಗೋವಿಂದರಾಜು ಎಸ್., ಮಂಜಪ್ಪ ಎಂ, ಕೆ. ಷಣ್ಮುಖ, ಶಿವರಾಜ್ ಎಂ..ಎಸ್. ಅವರು ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರ ವಿವರ:
1. ಪರಶುರಾಮ್ @ ಪಾರಸ್, 37 ವರ್ಷ, ಪ್ರೈವುಡ್ ವ್ಯಾಪಾರಿ, ವಾಸ ಗೌರಮ್ಮ ನಿಲಯ, ರಾಜು ಮೆಡಿಕಲ್ಸ್ ಎದುರು, ಎಂ.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಸ್ವಂತ ವಿಳಾಸ: ಮಾಲೀಯೋ ಕಾ ಬಾಷ್, ಬೋಪಾಲ್ ಗಡ್ ಗ್ರಾಮ,
ಬೋಪಾಲ್ಗಡ್ ಪೊಲೀಸ್ ಠಾಣೆ ಎದುರು, ಜೋಧಪುರ, ರಾಜಸ್ಥಾನ.
2. ಕೃಷ್ಣಮೂರ್ತಿ ಸಿಂಗಾರಾಮ್ 44 ವರ್ಷ, ಎಲೆಕ್ಟಿಕಲ್ ಕಂಟ್ರ್ಯಾಕ್ಟರ್ ಕೆಲಸ, 7ನೇ ಕ್ರಾಸ್, 11ನೇ ಮೇನ್, ಕುವೆಂಪು ನಗರ, ಅಪೋಲೋ ಮೆಡಿಕಲ್ಸ್ ಎದುರು, ಬಿಐಇಟಿ ರಸ್ತೆ, ಎಂ.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ. ಸ್ವಂತ
ವಿಳಾಸ: ಕಿಲಕ್ಕಮೇಡು ಗ್ರಾಮ, ಕೋನಾಪಟ್ಟಿ ಪೋಸ್ಟ್, ನಾಟ್ರಮ್ ಪಲ್ಲಿ ತಾಲೂಕು ತಿರುಪತ್ತೂರು, ತಮಿಳುನಾಡು.
3. ಮಂಜುನಾಥ.ಎಮ್ @ ಧೋನಿ 38 ವರ್ಷ, ಎಳನೀರು ವ್ಯಾಪಾರ, ವಾಸ ಚೌಡಾಂಬಿಕ ದೇವಸ್ಥಾನದ ಹತ್ತಿರ, ಜರಿಕಟ್ಟೆ ಗ್ರಾಮ ದಾವಣಗೆರೆ ತಾಲ್ಲೂಕು ದಾವಣಗೆರೆ ಜಿಲ್ಲೆ.
4. ಅನ್ವರ್ ಬಾಷಾ 50 ವರ್ಷ, ಕಂಟ್ರ್ಯಾಕ್ಟರ್, ವಾಸ ಇದ್ದಾ ಹತ್ತಿರ. ತುರ್ಚಘಟ್ಟ ಗ್ರಾಮ, ದಾವಣಗೆರೆ
ಬಂಧಿತರಿಂದ ಕೃತ್ಯಕ್ಕೆ ಸಂಬಂಧಿಸಿದಂತೆ 4 ವಿವಿಧ ಕಂಪನಿಗಳ ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿತರು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಉಳಿದ ಆರೋಪಿತರುಗಳ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ. ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಜಿ.ನಾಗರಾಜ, ಪಿಎಸ್ಐ ಸುನೀಲ್ ಬಿ.ಸಿ., ಮಾದಕ ದ್ರವ್ಯ ನಿಗ್ರಹ ಪಡೆಯ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಹಾಗೂ ವಿದ್ಯಾನಗರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.







Leave a comment