Site icon Kannada News-suddikshana

Davanagere: ಡಿ. ಎಲ್. ಮಾಡಿಸ್ಬೇಕಾ… ಡಿ. ಎಲ್. ಸ್ಲಾಟ್ ಓಪನ್.. ಇಂದಿನಿಂದ ನಿಮಗೆ ಮೂರು ತಿಂಗಳ ಕಾಲ ಅವಕಾಶ…!

DL SLOT OPEN IN DAVANAGERE

DL SLOT OPEN IN DAVANAGERE

SUDDIKSHANA KANNADA NEWS/ DAVANAGERE/ DATE:20-09-2023

ದಾವಣಗೆರೆ (Davanagere): ಡಿ. ಎಲ್. ಮಾಡಿಸಬೇಕು ಎಂದುಕೊಂಡಿದ್ದೀರಾ. ಹಾಗಿದ್ದರೆ ಇಂದಿನಿಂದ ಮೂರು ತಿಂಗಳ ಕಾಲ ಡಿ. ಎಲ್. ಸ್ಲಾಟ್ ತೆರೆಯಲಾಗಿದೆ.

ಈ ಸುದ್ದಿಯನ್ನೂ ಓದಿ: 

ಭದ್ರಾ ಡ್ಯಾಂ (Bhadra Dam) ನೀರು ಬಂದ್, ದಾವಣಗೆರೆಯಲ್ಲಿ ಮುಂದುವರಿದ ಆಕ್ರೋಶದ ಜ್ವಾಲೆ: ಒಮ್ಮತಕ್ಕೆ ಬರಲಿಲ್ಲ ಬೆಂಗಳೂರಿನಲ್ಲಿ ಡಿ. ಕೆ. ಶಿವಕುಮಾರ್ ನಿವಾಸದಲ್ಲಿ ನಡೆದ ಸಭೆ

ಸೆಪ್ಟೆಂಬರ್ 20 ರಿಂದ ಮುಂದಿನ 3 ತಿಂಗಳ ಡಿ.ಎಲ್ ಸ್ಲಾಟ್ ಗಳನ್ನು ತೆರೆಯಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆ 8 ಗಂಟೆಯಿಂದ ಸಾರಿಗೆ ಇಲಾಖೆಯ ವೆಬ್ ಸೈಟ್‍ನಲ್ಲಿ ಡಿ.ಎಲ್ ಟೆಸ್ಟ್ ಗೆ ಸಂಬಂಧಿಸಿದಂತೆ ತಮಗೆ ಬೇಕಾದ ದಿನಾಂಕವನ್ನು ಕಾಯ್ದಿರಿಸಿಕೊಳ್ಳಬಹುದು.

ತಾವು ಕಾಯ್ದಿರಿಸಿದ ದಿನಾಂಕದಂದು ಡಿ.ಎಲ್ ಟೆಸ್ಟ್‍ಗೆ ಹಾಜರಾಗಬೇಕು. ದಿನಾಂಕವನ್ನು ಬದಲಾಯಿಸಲು ಅವಕಾಶವಿರುವುದಿಲ್ಲ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ಕೆ ಮಲ್ಲಾಡ ತಿಳಿಸಿದ್ದಾರೆ.

ಎಷ್ಟೋ ಮಂದಿ ಡಿ. ಎಲ್. ಪಡೆಯಲು ಅರ್ಜಿ ಹಾಕುವುದಕ್ಕಾಗಿ ಕಾಯುತ್ತಿದ್ದರು. ಟ್ರಾಫಿಕ್ ಪೊಲೀಸರು ಸಹ ಸಂಚಾರಿ ನಿಯಮಗಳನ್ನು ಬಿಗಿಗೊಳಿಸಿದ್ದಾರೆ. ಇಲ್ಲದಿದ್ದರೆ ದಂಡ ಬೀಳುತ್ತೆ ಎಂಬ ಭಯದಿಂದ ಡಿ. ಎಲ್. ಮಾಡಿಸುವವರು ಇದ್ದಾರೆ.

ಮುಂದಿನ 90 ದಿನಗಳ ಕಾಲ ಅವಕಾಶ ನೀಡಲಾಗಿದೆ. ಯಾರು ಚಾಲನಾ ಪರವಾನಗಿ ಹೊಂದಿಲ್ಲವೋ ಅಂಥವರು ಅರ್ಜಿ ಸಲ್ಲಿಸಬಹುದಾಗಿದೆ. ಇಂದಿನಿಂದಲೇ ಅರ್ಜಿ ಸಲ್ಲಿಸಿ ಡಿ. ಎಲ್. ಪಡೆಯಿರಿ. ಹೆಚ್ಚಿನ ಮಾಹಿತಿಗೆ ಸಾರಿಗೆ ಇಲಾಖೆ ಸಂಪರ್ಕಿಸಬಹುದಾಗಿದೆ. http://www.parivahan.sewasarathi ಈ ಲಿಂಕ್ ಕ್ಲಿಕ್ ಮಾಡಿ ಡಿಎಲ್ ಗೆ ಅರ್ಜಿ ಸಲ್ಲಿಸಿ.

Exit mobile version