SUDDIKSHANA KANNADA NEWS/ DAVANAGERE/ DATE:27-08-2023
ದಾವಣಗೆರೆ:ಜೈಲಿನ ಗೋಡೆ ಜಿಗಿದು ಪರಾರಿಯಾಗಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ (Arrest) ಬಸವನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವಸಂತ (23) ಬಂಧಿತ ಆರೋಪಿ. ನಗರದ ಉಪಕಾರಾಗೃಹದ ಗೋಡೆ ಜಿಗಿದು ಎಸ್ಕೇಪ್ ಆಗಿದ್ದ. ನಗರದ ಹೊರವಲಯದ ಕರೂರ ಪ್ರದೇಶದ ನಿವಾಸಿಯಾಗಿದ್ದ ವಸಂತ ಆಟೋ ಚಾಲಕನಾಗಿದ್ದು, ಈತನ ವಿರುದ್ಧ ಕಳೆದ ಎರಡು ದಿನಗಳ ಹಿಂದೆಯಷ್ಟೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಈ ಸುದ್ದಿಯನ್ನೂ ಓದಿ:
Davanagere: ಎಂ. ಪಿ. ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಚರ್ಚೆಯಾಗಿಲ್ಲ, ಚನ್ನಗಿರಿ ಶಾಸಕರ ಅಸಮಾಧಾನ ಇಲ್ಲ: ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟನೆ
ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ (Arrest) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದ್ರೆ ಶನಿವಾರ ಮಧ್ಯಾಹ್ನ ಉಪಕಾರಾಗೃಹದ ಗೋಡೆ ಜಿಗಿಯುವಾಗ ಕಾಲಿಗೆ ಪೆಟ್ಟಾಗಿತ್ತು. ಆದ್ರೂ ತಪ್ಪಿಸಿಕೊಂಡು ಹೋಗಿದ್ದ. ದೂರು ದಾಖಲಿಸಿಕೊಂಡಿದ್ದ ಬಸವನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ (Arrest) ಯಶಸ್ವಿಯಾಗಿದ್ದಾರೆ.
ಹರಿಹರ ತಾಲೂಕಿನ ದುಗ್ಗವತಿ ಬಳಿ ಇದ್ದ ಆರೋಪಿ ವಸಂತ್ ನನ್ನು ಆತ ಪರಾರಿಯಾದ 24 ಗಂಟೆಯೊಳಗೆ ಬಂಧಿಸುವ ಮೂಲಕ ಪುನಃ ಜೈಲಿಗಟ್ಟಿದ್ದಾರೆ.