Home ಕ್ರೈಂ ನ್ಯೂಸ್ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ, ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಮೂವರು ಪುತ್ರರ ಬಂಧನ: ಯಾವ ಕೇಸ್ ನಲ್ಲಿ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ, ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಮೂವರು ಪುತ್ರರ ಬಂಧನ: ಯಾವ ಕೇಸ್ ನಲ್ಲಿ?

Share
ಎಸ್. ಎಸ್. ಮಲ್ಲಿಕಾರ್ಜುನ್
Share

ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ, ದಾವಣಗೆರೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಅವರ ಮೂವರು ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ.

ಅಯೂಬ್ ಪೈಲ್ವಾನ್ ಪುತ್ರರಾದ ಹಸೇನ್ ಪೈಲ್ವಾನ್, ಹುಸೇನ್ ಪೈಲ್ವಾನ್, ಅಮ್ಜಾ ಹುಸೇನ್ ಬಂಧಿತ ಆರೋಪಿಗಳು. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಮುಖಂಡರಾಗಿದ್ದ ಅಯೂಬ್ ಪೈಲ್ವಾನ್ ಪ್ರಭಾವಿ ವ್ಯಕ್ತಿ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಮಾತ್ರವಲ್ಲ, ಅಯೂಬ್ ಪೈಲ್ವಾನ್ ಅವರೂ ಈ ಹಿಂದೆ ಪೊಲೀಸ್ ಅಧಿಕಾರಿ ಜೊತೆ ವಾಗ್ವಾದ ನಡೆಸಿದ್ದರು.

ಅಯೂಬ್ ಪೈಲ್ವಾನ್ ವಿಚಾರಣೆ :

ಪೊಲೀಸರ ಮೇಲೆ ಹಲ್ಲೆ ಕೇಸ್ ಸಂಬಂಧ ಪುತ್ರರು ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕಾರ ಮಾಡಿದ್ದರು ಎಂಬ ಕಾರಣಕ್ಕೆ ಬಡಾವಣೆ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿ ಕಳುಹಿಸಿದ್ದರು. ಮತ್ತೆ ವಿಚಾರಣೆಗೆ ಕರೆದರೆ ಬರುವಂತೆ ಸೂಚನೆ ಕೊಟ್ಟಿದ್ದರು. ಇದರಂತೆ ಅಯೂಬ್ ಪೈಲ್ವಾನ್ ವಿಚಾರಣೆ ಎದುರಿಸಿದ್ದರು.

ಮೂವರು ಪುತ್ರರೂ ಅರೆಸ್ಟ್:

ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಆಟೋ ನಿಲ್ದಾಣದ ಬಳಿ ಗಲಾಟೆಯಾಗಿತ್ತು. ಮತ್ತೆ ಚಿಗಟೇರಿ ಆಸ್ಪತ್ರೆಯಲ್ಲಿ ಮುಖಾಮುಖಿಯಾದಾಗ ಮತ್ತೆ ಘರ್ಷಣೆ ಸಂಭವಿಸಿತ್ತು. ಬಂಧನಕ್ಕೆ ತೆರಳಿದ್ದ ವೇಳೆ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅಯೂಬ್ ಪೈಲ್ವಾನ್ ಮನೆಗೆ ಹೋದಾಗ ವೃತ್ತ ನಿರೀಕ್ಷಕಿ ಗಾಯತ್ರಿ, ಪೊಲೀಸ್ ಸಿಬ್ಬಂದಿಗಳಾದ ಕೆಂಚಪ್ಪ ಮತ್ತು ಹರೀಶ್ ಮೇಲೆ ಹಲ್ಲೆ ನಡೆಸಲಾಗಿತ್ತು. ಮೊಬೈಲ್ ಕಸಿದುಕೊಂಡು ದುರ್ವರ್ತನೆ, ಗೂಂಡಾಗಿರಿ ಪ್ರದರ್ಶಿಸಿದ್ದ ಅಯೂಬ್ ಪೈಲ್ವಾನ್ ಪುತ್ರ ಹಸೇನ್ ಪೈಲ್ವಾನ್ ನನ್ನು ಈಗಾಗಲೇ ಬಂಧಿಸಲಾಗಿತ್ತು. ಈಗ ಇನ್ನಿಬ್ಬರೂ ಪುತ್ರರನ್ನೂ ಅರೆಸ್ಟ್ ಮಾಡಲಾಗಿದೆ.

ಯಾವ ಕೇಸ್ ನಲ್ಲಿ ಬಂಧನ:

ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ನಡೆದ ಘರ್ಷಣೆ ಹಾಗೂ ಅಮಾನುಲ್ಲಾ ಖಾನ್ ಪುತ್ರನ ಗುಂಪು ಮತ್ತು ಅಯೂಬ್ ಪೈಲ್ವಾನ್ ಪುತ್ರರ ಗುಂಪಿನ ನಡುವೆ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಮೂವರು ಪುತ್ರರು
ಬಂಧನಕ್ಕೊಳಗಾಗಿದ್ದು, ಆರೋಪಿಗಳಿಗೆ ಶೋಧ ಮುಂದುವರಿದಿದೆ.

ಪೊಲೀಸರ ಮೇಲಿನ ಹಲ್ಲೆ ಕೇಸ್ ಬಾಕಿ:

ವೃತ್ತ ನಿರೀಕ್ಷಕಿ ಗಾಯತ್ರಿ ಮತ್ತು ಪೊಲೀಸ್ ಸಿಬ್ಬಂದಿಗಳ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ. ಈ ಪ್ರಕರಣ ಇನ್ನೂ ಬಾಕಿ ಇದೆ. ಈಗ ಸದ್ಯಕ್ಕೆ ಗಲಾಟೆ ಪ್ರಕರಣ ಸಂಬಂಧ ಮೂವರು ಪುತ್ರರು ಬಂಧನಕ್ಕೊಳಗಾಗಿದ್ದು, ಮುಂದಿನ
ದಿನಗಳಲ್ಲಿ ಪೊಲೀಸ್ ತನಿಖೆ ಮತ್ತು ವಿಚಾರಣೆ ಬಿಸಿ ಹೆಚ್ಚಾಗಲಿದೆ.

ಒಟ್ಟು ಐವರು ಬಂಧನ:

ಅಯೂಬ್ ಪೈಲ್ವಾನ್ ಪುತ್ರ ಹಸೇನ್ ಪೈಲ್ವಾನ್ ಹಾಗೂ ಪೈಜಾನ್ ಎಂಬಾತನನ್ನು ಭಾನುವಾರ ಪೊಲೀಸರು ಬಂಧಿಸಿದ್ದರು. ಮತ್ತಿಬ್ಬರು ಆರೋಪಿಗಳಾದ ಅಬ್ರಾರ್ ಹಾಗೂ ಅಯಾನ್ ಬಂಧಿಸಲಾಗಿದೆ. ಇದರಿಂದ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ. ಇನ್ನು ಪ್ರಕರಣದಲ್ಲಿನ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *