ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಳೆದ ಮೂರು ವರ್ಷಗಳಿಂದ ಆಯುಕ್ತರಾಗಿ ಅಧಿಕಾರ ನಡೆಸಿದ್ದ ಎಂ. ರೇಣುಕಾ ಅವರು ದಾವಣಗೆರೆಯಲ್ಲೇ ಉಳಿದುಕೊಂಡಿದ್ದಾರೆ. ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆಯಾಗಿ ನಿಯೋಜಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಮಹಾನಗರ ಪಾಲಿಕೆಯ ಆಯುಕ್ತೆಯಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಂದಿದ್ದ ರೇಣುಕಾ ಅವರು ಕಾಂಗ್ರೆಸ್ ಸರ್ಕಾರ ಬಂದಾದ ಮೇಲೂ ಇಲ್ಲೇ ಮುಂದುವರಿದಿದ್ದರು. ಸುಮಾರು ಮೂರು ವರ್ಷಗಳಿಗೂ ಅಧಿಕ ಕಾಲ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತೆಯಾಗಿದ್ದರು. ದಾವಣಗೆರೆ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹೋಗಲು ಮನಸ್ಸಿಲ್ಲದ ಕಾರಣ ಮತ್ತೆ ದಾವಣಗೆರೆಯಲ್ಲಿಯೇ ಉಳಿದುಕೊಳ್ಳುವಲ್ಲಿ ಎಂ. ರೇಣುಕಾ ಅವರು ಯಶಸ್ವಿ ಆಗಿದ್ದಾರೆ.
2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದಾವಣಗೆರೆ ದಕ್ಷಿಣ ಶಾಸಕರಾಗಿ ಶಾಮನೂರು ಶಿವಶಂಕರಪ್ಪರು ಇದ್ದರು. ಎಸ್. ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದರು. ಇನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸದೆಯಾಗಿ ಆಯ್ಕೆಯಾದರು. ಈ ಮೂವರು ನಾಯಕರ ವಿಶ್ವಾಸ ಗಳಿಸಿದ್ದರು. ಶಾಮನೂರು ಶಿವಶಂಕರಪ್ಪರ ನಿಧನದ ನಂತರವೂ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ರೇಣುಕಾ ಅವರು ಮತ್ತೆ ದಾವಣಗೆರೆಯಲ್ಲೇ ಉಳಿದುಕೊಳ್ಳಲಿದ್ದಾರೆ. ಆದರೆ ದೂಡಾ ಆಯುಕ್ತರಾಗಿ ಕೆಲಸ ನಿರ್ವಹಿಸಲಿದ್ದಾರೆ.
ಪ್ರಮುಖ ಬದಲಾವಣೆಗಳು
ಎಂ. ರೇಣುಕಾ (ದೂಡಾ ಆಯುಕ್ತರು): ಕಳೆದ ಮೂರು ವರ್ಷಗಳಿಂದ ಮಹಾನಗರ ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಇವರು, ಈಗ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (DUDA) ಆಯುಕ್ತೆ.
ಡಾ. ಎನ್. ಮಹಾಂತೇಶ್ (ಪಾಲಿಕೆ ಆಯುಕ್ತರು): ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನಾ ನಿರ್ದೇಶಕರಾಗಿದ್ದ ಇವರು ರೇಣುಕಾ ಅವರಿಂದ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಹುಲ್ಲುಮನಿ ತಿಮ್ಮಣ್ಣ: ಈ ಹಿಂದೆ ದೂಡಾ ಆಯುಕ್ತರಾಗಿದ್ದ ಇವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (DPAR) ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಗಮನಾರ್ಹ ಅಂಶಗಳು
ರಾಜಕೀಯ ವಿಶ್ವಾಸ: ಎಂ. ರೇಣುಕಾ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರಕ್ಕೆ ಬಂದಿದ್ದರೂ, ನಂತರ ಬಂದ ಕಾಂಗ್ರೆಸ್ ಸರ್ಕಾರದ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳೀಯ ನಿಯೋಜನೆ: ಜಿಲ್ಲೆಯಿಂದ ಹೊರಹೋಗಲು ಇಚ್ಛಿಸದ ರೇಣುಕಾ ಅವರು ದಾವಣಗೆರೆಯಲ್ಲೇ ಮತ್ತೊಂದು ಪ್ರಮುಖ ಹುದ್ದೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತ ಹುದ್ದೆ ಖಾಲಿಯಾದ ಜಾಗಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಯುಡಿಸಿ ಶ್ರೇಣಿ-1ರ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಎನ್. ಮಹಾಂತೇಶ್ ಅವರು ಬಂದಿದ್ದಾರೆ. ಅಧಿಕಾರವನ್ನು ರೇಣುಕಾ ಅವರಿಂದ ಮಹಾಂತೇಶ್ ಅವರು ಸ್ವೀಕರಿಸಿದ್ದಾರೆ.
ದೂಡಾ ಆಯುಕ್ತರಾಗಿದ್ದ ಹುಲ್ಲುಮನಿ ತಿಮ್ಮಣ್ಣ ಅವರನ್ನು ಸಕ್ಷಮ ಪ್ರಾಧಿಕಾರವಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆಯಲ್ಲಿ ಸೂಚನೆ ನೀಡಲಾಗಿದೆ.
- Davanagere City Corporation
- DAVANAGERE NEWS
- Davanagere-Harihara Urban Development Authority.
- Dr. N. Mahantesh
- DUDA Commissioner
- Karnataka Government
- M. Renuka
- Officer Transfer
- Prabha Mallikarjun
- S. S. MALLIKARJUN
- ಎಂ. ರೇಣುಕಾ
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ಸರ್ಕಾರ
- ಡಾ. ಎನ್. ಮಹಾಂತೇಶ್
- ದಾವಣಗೆರೆ ಮಹಾನಗರ ಪಾಲಿಕೆ
- ದಾವಣಗೆರೆ ಸುದ್ದಿ
- ದೂಡಾ ಆಯುಕ್ತೆ
- ಪ್ರಭಾ ಮಲ್ಲಿಕಾರ್ಜುನ್
- ವರ್ಗಾವಣೆ
- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ





Leave a comment