SUDDIKSHANA KANNADA NEWS/ DAVANAGERE/ DATE:14-10-2023
ದಾವಣಗೆರೆ (Davanagere): ಆನ್ ಲೈನ್ ನಲ್ಲಿ ವ್ಯವಹಾರ ಮಾಡುವವರನ್ನೇ ಟಾರ್ಗೆಟ್ ಮಾಡುವ ಕೆಲ ದುಷ್ಕರ್ಮಿಗಳು ಹಣ ಲಪಟಾಯಿಸುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿವೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಾಲಿವಾಣ ನಿವಾಸಿಗೆ ಬರೋಬ್ಬರಿ 42.43 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
Read Also This Story
Bangalore: 1242 ಪ್ರಾಧ್ಯಾಪಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳ ನೇಮಕಕ್ಕೆ ಆದೇಶ ಹೊರಡಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಿ: ಸಚಿವ ಡಾ. ಸುಧಾಕರ್
ಎಸ್. ಎ. ಪರಮೇಶ್ವರಪ್ಪ ಎಂಬುವವರೇ ಮೋಸ ಹೋದವರು. ಮಿಶೋ ಆನ್ ಲೈನ್ ಶಾಪಿಂಗ್ ನಿಂದ 13.50 ಲಕ್ಷ ರೂಪಾಯಿ ಬಹುಮಾನದ ಹಣ ನಿಮಗೆ ಬಂದಿದೆ ಎಂಬ ಪತ್ರವೊಂದು ಬಂದಿತ್ತು. ಪತ್ರದಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿ ವಿಚಾರಿಸಿದರೆ ಬಹುಮಾನದ ಹಣ ಕಳುಹಿಸಿಕೊಡುತ್ತೇವೆ. ನೀವು ಜಿಎಸ್ ಟಿ ಮತ್ತು ಇತರೆ ಶುಲ್ಕ ಭರಿಸಿದರೆ ಹಣ ನಿಮ್ಮದಾಗುತ್ತದೆ ಎಂದು ನಂಬಿಸಲಾಗಿತ್ತು.
ಇದನ್ನು ನಂಬಿದ ಪರಮೇಶ್ವರಪ್ಪ ಎಂಬುವವರು 13.50 ಲಕ್ಷ ರೂಪಾಯಿ ಪಡೆಯುವ ಆಸೆಗೆ ಆನ್ ಲೈನ್ ಮೂಲಕ ಹಂತ ಹಂತವಾಗಿ ಹಣ ಸಂದಾಯ ಮಾಡಿದ್ದು, ಒಟ್ಟು 42.43 ಲಕ್ಷ ರೂಪಾಯಿ ಪಂಗನಾಮ ಹಾಕಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಹಣ ವರ್ಗಾವಣೆ ಮಾಡಿದ ಬಳಿಕ ನನ್ನ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಮೊದ ಮೊದಲು ಫೋನ್ ನಲ್ಲಿ ಮಾತನಾಡುತ್ತಿದ್ದರು. ಸಂದೇಶಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದರು. ಈಗ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಸಂದೇಶಕ್ಕೆ ಪ್ರತಿಕ್ರಿಯೆಯೂ ಇಲ್ಲ ಎಂದು ದಾವಣಗೆರೆ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಜನರು ಆನ್ ಲೈನ್ ನಲ್ಲಿ ಬಹುಮಾನ ಬಂದಿದೆ ಎಂದು ಪತ್ರ ಹಾಗೂ ಫೋನ್ ಕರೆ ಬಂದರೆ ನಂಬಬೇಡಿ. ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ. ಇಂಥ ವಂಚನೆ ಜಾಲಗಳಿಗೆ ತುತ್ತಾಗಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ
ಮನವಿ ಮಾಡಿದ್ದಾರೆ.