Site icon Kannada News-suddikshana

Davanagere Celebaration:ಚಂದ್ರನ ಅಂಗಳದಲ್ಲಿ ಭಾರತ ತ್ರಿವಿಕ್ರಮ: ದಾವಣಗೆರೆಯ ವಿವಿಧೆಡೆ ಸಂಭ್ರಮಾಚರಣೆ

Davanagere Celebaration_

Davanagere Celebaration_

SUDDIKSHANA KANNADA NEWS/ DAVANAGERE/ DATE:23-08-2023

ದಾವಣಗೆರೆ (Davanagere): ಚಂದ್ರನ ಅಂಗಳಕ್ಕೆ ಕಾಲಿಡುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ದಾವಣಗೆರೆ (Davanagere) ಜಿಲ್ಲೆಯಾದ್ಯಂತ ಸಡಗರ, ಸಂಭ್ರಮ ಆಚರಿಸಲಾಯಿತು.

ನಗರದ ವಿವಿಧೆಡೆಯೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಶಂಭ್ರಮಿಸಲಾಯಿತು‌. ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಸತತ ಶ್ರಮ ಮತ್ತು ಕೋಟಿ ಕೋಟಿ ಭಾರತೀಯರ ಪ್ರಾರ್ಥನೆಯಿಂದ ಚಂದ್ರಯಾನ – 3 ಯಶಸ್ವಿಯಾಗಿದೆ. ನಗರದ ಗಡಿಯಾರ ಕಂಬದ ಬಳಿ ಸಂಭ್ರಮಾಚರಣೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು.

Read Also This Story:

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂಡಿಯಾ ಕಮಾಲ್: ಚಂದ್ರನ ಅಂಗಳದಲ್ಲಿ ಭಾರತ ತ್ರಿವಿಕ್ರಮ, ಸುಸೂತ್ರವಾಗಿ ಲ್ಯಾಂಡ್ ಆದ ವಿಕ್ರಮ್ ಲ್ಯಾಂಡರ್

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಮಾತನಾಡಿ ಚಂದ್ರನ ದಕ್ಷಿಣ ಧೃವಕ್ಕೆ ಯಶಸ್ವಿಯಾಗಿ ಪ್ರಥಮವಾಗಿ ತಲುಪಿದ ಕೀರ್ತಿ ಭಾರತಕ್ಕೆ ಬಂದಿದೆ. ಚಂದ್ರನ ಮೇಲೆ ವಿಕ್ರಮ್ ಸಾಧಿಸಿದ ನಮ್ಮ ಇಸ್ರೋ ವಿಜ್ಞಾನಿಗಳ ಸಾಧನೆ ಇಡೀ ವಿಶ್ವವೇ ಭಾರತದತ್ತ ನೋಡುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು‌. ಈ ಸಂದರ್ಭದಲ್ಲಿ ವ್ಯಾಪಾರ ವಾಣಿಜ್ಯ -ಪ್ರಕೋಷ್ಟದ ಸಹ ಸಂಚಾಲಕ ಮಹೇಂದ್ರ ಕೊಠಾರಿ, ಪ್ರವೀಣ್ ಜೈನ್,ಲಲಿತ್ ಜೈನ್, ಕಾಂತಿಲಾಲ್, ಆಟೋ ಶೇಖರ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ದಾವಣಗೆರೆ (Davanagere) ನಗರದ ಜಯದೇವ ವೃತ್ತದಲ್ಲಿ ಭಾರತೀಯ ವಿಜ್ಞಾನ ಕಲಾ ಪರಿಷತ್ ವತಿಯಿಂದಲೂ ಖುಷಿ ವ್ಯಕ್ತ ಪಡಿಸಲಾಯಿತು. ಬಿಜೆಪಿ ಕಚೇರಿಯಲ್ಲೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

Exit mobile version