Home ದಾವಣಗೆರೆ ಶಾಮನೂರು ಮೂರನೇ ತಲೆಮಾರಿಗೆ ಕಾಂಗ್ರೆಸ್ ಟಿಕೆಟ್, ಒಂದೆರಡು ತಲೆಮಾರು ಬೇೆರೆಯವರು ಟಿಕೆಟ್ ನಿರೀಕ್ಷಿಸುವಂತಿಲ್ಲ: ಆರ್. ಅಶೋಕ್ ಭವಿಷ್ಯ!
ದಾವಣಗೆರೆಬೆಂಗಳೂರು

ಶಾಮನೂರು ಮೂರನೇ ತಲೆಮಾರಿಗೆ ಕಾಂಗ್ರೆಸ್ ಟಿಕೆಟ್, ಒಂದೆರಡು ತಲೆಮಾರು ಬೇೆರೆಯವರು ಟಿಕೆಟ್ ನಿರೀಕ್ಷಿಸುವಂತಿಲ್ಲ: ಆರ್. ಅಶೋಕ್ ಭವಿಷ್ಯ!

Share
ಆರ್. ಅಶೋಕ್
Share

ದಾವಣಗೆರೆ: ದಾವಣಗೆರೆ ಉಪ ಚುನಾವಣೆಯಲ್ಲಿ ಒಂದೇ ಕುಟುಂಬ ಬಿಟ್ಟು ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಿಗೆ ಟಿಕೆಟ್ ಸಿಗುತೆ ಅಂತ ಕಾಂಗ್ರೆಸ್ಸಿಗರು ಆಸೆ ಪಟ್ಟಿದ್ರು. ಆದರೆ ಆ ಆಸೆಗೆ ತಣ್ಣೀರು ಎರಚಿದರು. ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿಲ್ಲ. ಮುಸ್ಲಿಮರನ್ನು ಹತ್ತಿರಕ್ಕೆ ಸೇರಿಸಲಿಲ್ಲ. ಶಾಮನೂರು ಇದ್ದಾಗಲೇ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದರು. ಈಗ ಈ ಅಲ್ಪಸಂಖ್ಯಾತರೇ ರೊಚ್ಚಿಗೆದ್ದಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪರ ಕುಟುಂಬಕ್ಕೆ ಮತ್ತೆ ಈ ಬಾರಿ ಟಿಕೆಟ್ ನೀಡಿದ್ದರಿಂದ ಸದ್ಯ ಒಂದೆರಡು ತಲೆಮಾರು ಬೇರೆಯವರು ಟಿಕೆಟ್ ನಿರೀಕ್ಷೆ ಮಾಡುವಂತಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೆ ಮಾತ್ರ ಅಲ್ಪಸಂಖ್ಯಾತರಿಗೆ ಅವಕಾಶ ಸಿಗಬಹುದು. ಶಾಮನೂರು ಕುಟುಂಬದವರೇ ಸಚಿವರು ಇದ್ದಾರೆ, ಸಂಸದೆ ಇದ್ದಾರೆ. ಈಗ ಮಗನಿಗೆ ಟಿಕೆಟ್ ನೀಡಿದ್ದಾರೆ. ಶಾಮನೂರು ಕುಟುಂಬಕ್ಕೆ ಅಧಿಕಾರ ಬೇಕು. ಆದರೆ ಕ್ಷೇತ್ರದ ಜನರಿಗೆ ಅಭಿವೃದ್ಧಿ ಬೇಕಾಗಿದೆ ಎಂದು ವಿಶ್ಲೇಷಿಸಿದರು.

ಕ್ಷೇತ್ರದಲ್ಲಾಗಲಿ, ರಾಜ್ಯದಲ್ಲಾಗಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕಾಂಗ್ರೆಸ್ ಮಾಡಲಿಲ್ಲ. ಒಂದೇ ಒಂದು ಶಂಕುಸ್ಥಾಪನೆ ನಡೆದಿಲ್ಲ. ಸಿದ್ದರಾಮಯ್ಯ ಅವರು ಸಾಲದ ರಾಮಯ್ಯ ಆಗಿದ್ದಾರೆ. ಅವರು ಸಾಲ ಮಾಡುವುದಲ್ಲಿ ನಿಸ್ಸೀಮ. ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದ ಕೆ ಸಿ ರೆಡ್ಡಿ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿ ವರೆಗೆ ಆದ ಸಾಲ ಶೇ 40 ರಷ್ಟಿದ್ದರೆ ಸಿದ್ದರಾಮಯ್ಯ ಅವರೊಬ್ಬರೇ ಶೇ 60 ರಷ್ಟು ಸಾಲ ಮಾಡಿದ್ದಾರೆ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *