ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿವೆ. ಎರಡೂ ಪಕ್ಷಗಳ ನಾಯಕರು ಮತದಾರರ ಮತಗಳ ಬೇಟೆ ಶುರುವಿಟ್ಟುಕೊಂಡಿದ್ದಾರೆ.
ಮತದಾರರ ಮನಗೆಲ್ಲಲು ನಾನಾ ತಂತ್ರಗಾರಿಕೆ ನಡೆಸುತ್ತಿವೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪರ ಪರ ಅವರ ಪತ್ನಿ ಸಂಧ್ಯಾ ಶ್ರೀನಿವಾಸ್ ಅವರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮುಸ್ಲಿಂ ಮಹಿಳೆಯರು ಈ ಬಾರಿ ಶ್ರೀನಿವಾಸ್ ದಾಸಕರಿಯಪ್ಪರನ್ನ ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ.
ಮನೆ ಮನೆಗೆ ತೆರಳಿ ಸಂಧ್ಯಾ ಶ್ರೀನಿವಾಸ್ ಅವರು ಮತಯಾಚನೆ ಮಾಡುತ್ತಿದ್ದಾರೆ. ದಾವಣಗೆರೆ ನಗರದ ಇಮಾಂ ನಗರಕ್ಕೆ ಭೇಟಿ ನೀಡಿದ್ದ ವೇಳೆ ಮುಸ್ಲಿಂ ಮಹಿಳೆಯರು ಉಡಿ ತುಂಬಿ ಬೆಂಬಲ ಘೋಷಿಸಿದರು.
ತನ್ನ ಪತಿ ಪರ ಪ್ರಚಾರ ಮಾಡುವಾಗ ಸಂಧ್ಯಾ ಅವರನ್ನು ಮನೆಗೆ ಆಹ್ವಾನಿಸಿ ಮುಸ್ಲಿಂ ಸಮುದಾಯದ ಮಹಿಳೆಯರು ಗೌರವ ನೀಡಿದ್ದಾರೆ. ಕುಡಿಯಲು ನೀರು ನೀಡಿ ಹಿಂದೂ ಸಂಪ್ರದಾಯದಂತೆ ಉಂಡಿತುಂಬಿ ಆಶೀರ್ವದಿಸಿದ್ದು ವಿಶೇಷ.
ಈ ಬಾರೀ ನಿಮ್ಮ ಪತಿ ಶ್ರೀನಿವಾಸ್ ಅವರಿಗೆ ಮತ ಹಾಕುತ್ತೇವೆ. ಕಾಂಗ್ರೆಸ್ ಮುಸ್ಲಿಂ ಮತ ಹಾಕಿಸಿಕೊಂಡು ದ್ರೋಹ ಬಗೆದಿದೆ.ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ಬಿಜೆಪಿ ನಮಗೆ ವಿರೋಧಿ ಅಲ್ಲ. ಈ ಹಿನ್ನಲೆಯಲ್ಲಿ ಈ ಸಾರಿ ಒಳ್ಳೆಯ ವ್ಯಕ್ತಿ ಶ್ರೀನಿವಾಸ್ ಅವರಿಗೆ ಬೆಂಬಲ ನೀಡ್ತೇವೆ ಎಂದು ಮುಸ್ಲಿಂ ಮಹಿಳೆಯರು ಸಂಧ್ಯಾ ಶ್ರೀನಿವಾಸ್ ಅವರಿಗೆ ಭರವಸೆ ನೀಡಿದರು.
ಶ್ರೀನಿವಾಸ್ ದಾಸಕರಿಯಪ್ಪರ ತಂದೆ ಹಮಾಲಿ ಕೆಲಸ ಮಾಡ್ತಾ ಇದ್ರು, ಈಗ ಅವರ ಮಗ ಶ್ರೀನಿವಾಸ್ ಜನರ ಪರವಾಗಿ ಕೆಲಸ ಮಾಡ್ತಿದ್ದಾರೆ. ಇಂತಹ ವ್ಯಕ್ತಿಗೆ ನೂರಕ್ಕೆ ನೂರರಷ್ಟು ಅವಕಾಶ ಮಾಡಿಕೊಡುತ್ತೇವೆ ಎಂದು ಮುಸ್ಲಿಂ ಮಹಿಳೆಯರು ಹೇಳಿದರು.
- BJP Candidate Srinivas
- Congress vs BJP Davanagere
- DAVANAGERE NEWS
- Ground Report Davanagere
- Hindu Muslim Unity Davanagere
- Imam Nagar Davanagere
- Karnataka Election 2026
- Local News Karnataka
- Minority Votes for BJP
- Muslim Women Support BJP
- Sandhya Srinivas Campaign
- Sandhya Srinivas Door to Door Campaign.
- Udi Thumbu Ritual
- ಅಲ್ಪಸಂಖ್ಯಾತ ಮತದಾರರು
- ಇಮಾಂ ನಗರ ದಾವಣಗೆರೆ
- ಉಡಿ ತುಂಬುವ ಕಾರ್ಯಕ್ರಮ
- ಕರ್ನಾಟಕ ವಿಧಾನಸಭಾ ಚುನಾವಣೆ
- ಕಾಂಗ್ರೆಸ್ಗೆ ಮುಖಭಂಗ
- ದಾವಣಗೆರೆ ರಾಜಕೀಯ
- ದಾವಣಗೆರೆ ಸುದ್ದಿ
- ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ
- ಬಿಜೆಪಿ ಪ್ರಚಾರ
- ಮುಸ್ಲಿಂ ಮಹಿಳೆಯರಿಂದ ಬೆಂಬಲ
- ಶ್ರೀನಿವಾಸ್ ಪತ್ನಿ ಪ್ರಚಾರ.
- ಸಂಧ್ಯಾ ಶ್ರೀನಿವಾಸ್
- ಸ್ಥಳೀಯ ಸುದ್ದಿ ದಾವಣಗೆರೆ
- ಹಿಂದೂ ಮುಸ್ಲಿಂ ಸೌಹಾರ್ದತೆ





Leave a comment