Home ಕ್ರೈಂ ನ್ಯೂಸ್ 1,000 ಕೋಟಿ ರೂ. ಗೂ ಅಧಿಕ ವಹಿವಾಟು ಪತ್ತೆ: ಸಿಐಡಿಗೆ ಕೇಸ್ ವರ್ಗಾಯಿಸಿದ್ಯಾಕೆ ದಾವಣಗೆರೆ ಪೊಲೀಸರು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

1,000 ಕೋಟಿ ರೂ. ಗೂ ಅಧಿಕ ವಹಿವಾಟು ಪತ್ತೆ: ಸಿಐಡಿಗೆ ಕೇಸ್ ವರ್ಗಾಯಿಸಿದ್ಯಾಕೆ ದಾವಣಗೆರೆ ಪೊಲೀಸರು?

Share
ದಾವಣಗೆರೆ
Share

SUDDIKSHANA KANNADA NEWS/DAVANAGERE/DATE:20_12_2025

ದಾವಣಗೆರೆ: ನಕಲಿ ಬ್ಯಾಂಕ್ ಖಾತೆಗಳ ಮೂಲಕ ಸೈಬರ್ ವಂಚಕರು ಬರೋಬ್ಬರಿ 1,000 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಅತಿ ದೊಡ್ಡ ಸೈಬರ್ ವಂಚಕ ಜಾಲ ಪತ್ತೆ ಹಚ್ಚಿರುವ ದಾವಣಗೆರೆ ಸಿಇಎನ್ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಮಾತ್ರವಲ್ಲ, ಪ್ರಕರಣ ಗಂಭೀರವಾಗಿರುವ ಕಾರಣದಿಂದಾಗಿ ಸೈಬರ್ ವಂಚನೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ.

READ ALSO THIS STORY: ದಾವಣಗೆರೆಯಲ್ಲಿ ಪ್ರಾಪರ್ಟಿ ರಿಟರ್ನ್ ಪೆರೇಡ್: 20.30 ಕೋಟಿ ರೂ. ಮೌಲ್ಯದ ಮಾಲು ವಾರಸುದಾರರಿಗೆ ಹಸ್ತಾಂತರ!

ರಾಜ್ಯವನ್ನೇ ಬೆಚ್ಚಿ ಬೀಳುವಂಥ ಸೈಬರ್ ವಂಚನೆ ಜಾಲ ಇದಾಗಿದ್ದು, 2 ತಿಂಗಳ ಅವಧಿಯಲ್ಲಿ 150 ಕೋಟಿ ರೂಪಾಯಿ ವಹಿವಾಟಿನಿಂದ ಶುರುವಾಗಿ ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿಯವರೆಗೆ ನಡೆದಿರುವುದು ಗೊತ್ತಾಗಿದೆ. ಇನ್ನು ದೂರು ಕೊಟ್ಟವನೇ ವಂಚನೆ ಜಾಲವಾಗಿದ್ದ ಎಂದು ತಿಳಿದು ಬಂದಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಮುಂಬೈ, ಬೆಂಗಳೂರು, ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ಬೆಳಕಿಗೆ ಬರುತ್ತಿದ್ದ ಡಿಜಿಟಲ್ ಅರೆಸ್ಟ್ ದಾವಣಗೆರೆಗೂ ಕಾಲಿಟ್ಟಿದ್ದು, ಶಿಕ್ಷಕರೊಬ್ಬರು 52 ಲಕ್ಷ ರೂಪಾಯಿ ವರ್ಗಾವಣೆ ಮಾಡಿಕೊಂಡು ವಂಚಿಸಿದ ಪ್ರಕರಣ ಸಂಬಂಧ ಪ್ರಕರಣದ ಮೂರನೇ ಆರೋಪಿ ಬಂಧಿಸಲಾಗಿತ್ತು. ಇನ್ನಿಬ್ಬರು ಆರೋಪಿಗಳಿಗೆ ಹುಡುಕಾಟ ನಡೆದಿತ್ತು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಂಟೇನಹಳ್ಳಿಯ ಕೋರಟಿಕೆರೆ ಗ್ರಾಮದ ವ್ಯವಸಾಯ ವೃತ್ತಿ ಮಾಡುತ್ತಿದ್ದ ಅರುಣ್ ಕುಮಾರ್ (35) ಬಂಧಿತ ಆರೋಪಿಯಾಗಿದ್ದ. ಅರ್ಫಾತ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಗುಜರಾತ್ ನ ಅಮದಾಬಾದ್ ಮೂಲದ ಸಂಜಯ್ ಕುಂದ್ ನನ್ನು ಅರೆಸ್ಟ್ ಮಾಡಲಾಗಿದೆ.

ಘಟನೆ ಹಿನ್ನೆಲೆ:

ದಾವಣಗೆರೆ ವಾಸಿಯಾಗಿದ್ದ ಪ್ರಮೋದ್ ಎಂಬುವವರು 52 ಲಕ್ಷ ರೂಪಾಯಿ ಸೈಬರ್ ವಂಚಕರು ವಂಚಿಸಿದ್ದಾರೆ ಎಂದು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಬೇಲೂರು ಮೂಲದ ಸೈಯದ್ ಅರ್ಫಾತ್ ಎಂಬಾತನನ್ನು ಬಂಧಿಸಿ, ಆತನ ಮೊಬೈಲ್ ವಶಪಡಿಸಿಕೊಂಡಿದ್ದರು. ತನಿಖೆ ನಡೆಸಿದಾಗ ನೂರಾರು ಕೋಟಿ ರೂಪಾಯಿ ವಹಿವಾಟು ನಡೆದಿತ್ತು ಗೊತ್ತಾಗಿತ್ತು.

ಕರೆಂಟ್ ಅಕೌಂಟ್ ತೆರೆದು ವಂಚಕರು ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಗುಜರಾತ್‌ನ ಅಹಮದಾಬಾದ್ ಮೂಲದ ಸಂಜಯ್ ಕುಂಟ್ ಎಂಬುವವನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಕರೆಂಟ್ ಅಕೌಂಟ್ ಮಾರಾಟ ದಂಧೆ ನಡೆದಿದ್ದು ತನಿಖೆಯಿಂದ ಗೊತ್ತಾಗಿದೆ.

ವಂಚನೆ ಜಾಲವಾಗಿದ್ದ ದೂರುದಾರ ಪ್ರಮೋದ್:

ಇನ್ನು ದೂರುದಾರನಾಗಿದ್ದ ಪ್ರಮೋದ್ ಎಂಬಾತನು ವಂಚನೆ ಜಾಲವಾಗಿದ್ದ ಎಂದು ತಿಳಿದು ಬಂದಿದೆ. ಕಮಿಷನ್ ಆಸೆಗೆ ತನ್ನ ಬ್ಯಾಂಕ್ ಖಾತೆಯ ವಿವರಗಳನ್ನು ವಂಚಕರಿಗೆ ನೀಡಿದ್ದ ಪ್ರಮೋದ್, ಖಾತೆಯಲ್ಲಿ ಜಮೆಯಾದ ಹಣಕ್ಕೆ ಕಮಿಷನ್ ಸಿಗದ ಕಾರಣಕ್ಕೆ ರೊಚ್ಚಿಗೆದ್ದು ದೂರು ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೂವರು ಆರೋಪಿಗಳ ಖಾತೆಗಳಿಗೆ ಬೇರೆ ದೇಶಗಳಿಂದಲೂ ಹಣ ಬಂದಿದೆ. ದೇಶ ವಿದೇಶ, ದುಬೈ ಸೇರಿದಂತೆ ಬೇರೆ ಬೇರೆ ಕಡೆಗಳಿಂದಲೂ ಕೋಟ್ಯಾಂತರ ರೂಪಾಯಿ ಹಣ ಕ್ರೆಡಿಟ್ ಆಗಿರುವುದು ತನಿಖೆಯಿಂದ ತಿಳಿದು ಬಂದಿದೆ.

ಇನ್ನು ಕೇವಲ ಡಿಜಿಟಲ್ ಅರೆಸ್ಟ್, ಫೇಕ್ ಟ್ರೇಡಿಂಗ್, ಆನ್ ಲೈನ್ ಗೇಮಿಂಗ್ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಸಂಬಂಧಿಸಿದ್ದು ಎನ್ನಲಾಗುತ್ತಿದ್ದು, ಒಟ್ಟಿನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ವಹಿವಾಟು ನಡೆದಿರುವುದರಿಂದ ಸಿಐಡಿಗೆ ಪ್ರಕರಣವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ವರ್ಗಾಯಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles