Site icon Kannada News-suddikshana

ದಾವಣಗೆರೆ (Davanagere) ಬಂದ್ ಗೆ ಜಿಲ್ಲಾ ಕಸಾಪ ನೈತಿಕ ಬೆಂಬಲ: ಬಿ. ವಾಮದೇವಪ್ಪ

KASAPA PRESIDENT VAMADEVAPPA DEMAND

KASAPA PRESIDENT VAMADEVAPPA DEMAND

SUDDIKSHANA KANNADA NEWS/ DAVANAGERE/ DATE:24-09-2023

ದಾವಣಗೆರೆ (Davanagere): ದಾವಣಗೆರೆ (Davanagere) ಭಾಗದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಭತ್ತದ ಬೆಳೆಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಕಾಡಾ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ್ದು. ಅಧಿಕಾರಿಗಳು ಹೊರಡಿಸಿದ ನೂರು ದಿನಗಳ ಕಾಲ ಸತತವಾಗಿ ನೀರು ಹರಿಸುವ ಆದೇಶ ಹೊರಡಿಸಿದ್ದರಿಂದಲೇ ಬಹುತೇಕ ಭಾಗಗಳಲ್ಲಿ ರೈತರು ಭತ್ತದ ನಾಟಿ ಮಾಡಿರುತ್ತಾರೆ. ಈಗ ಸರ್ಕಾರ ವಲಯವಾರು ಪದ್ಧತಿಯಲ್ಲಿ ನೀರು ನಿಲುಗಡೆಗೆ ಆದೇಶ ಮಾಡಿರುವುದು ಅತ್ಯಂತ ದುರದೃಷ್ಟಕರ ಮತ್ತು ಅಸಮಂಜಸ. ಸೋಮವಾರ ಕರೆ ಕೊಟ್ಟಿರುವ Davanagere ಬಂದ್ ಗೆ ಜಿಲ್ಲಾ ಕಸಾಪ ನೈತಿಕ ಬೆಂಬಲ ಸೂಚಿಸಲಿದೆ ಎಂದು ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 

BIG NEWS UPDATES: ಭದ್ರಾ ಡ್ಯಾಂನ ನೀರಿಗೆ ಒತ್ತಾಯಿಸಿ ದಾವಣಗೆರೆ (Davanagere)ಬಂದ್: ಯಾವೆಲ್ಲಾ ಸಂಘಟನೆಗಳು ಕೊಟ್ಟಿವೆ ಸಪೋರ್ಟ್…? ಹೇಗಿರುತ್ತೆ ಬಂದ್ ಎಫೆಕ್ಟ್…?

ದಾವಣಗೆರೆ (Davanagere):ಭಾಗದ ರೈತರು ಹಾಗೂ ಭಾರತೀಯ ರೈತ ಒಕ್ಕೂಟ ಭದ್ರಾ ನಾಲೆಯಲ್ಲಿ ಸತತವಾಗಿ ನೂರು ದಿನಗಳ ಕಾಲ ನೀರು ಹರಿಸಬೇಕೆಂದು ಒತ್ತಾಯಿಸುತ್ತಿದ್ದು, ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯುವುದಕ್ಕಾಗಿ ನಾಲೆಯಲ್ಲಿ ಸತತವಾಗಿ ನೀರು ಹರಿಸಬೇಕೆಂಬ ಒತ್ತಾಸೆಯಿಂದ ಭಾರತೀಯ ರೈತ ಒಕ್ಕೂಟ ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ.

ಅನ್ನದಾತನ ಹಿತ ಕಾಯಲು ಪರಿಷತ್ತು ಸದಾ ಬದ್ಧವಾಗಿದೆ. ಈ ಬಂದ್ ಅನ್ನು ದಾವಣಗೆರೆ (Davanagere) ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಲ್ಲಾ ಕನ್ನಡದ ಮನಸ್ಸುಗಳು ನೈತಿಕವಾಗಿ ಬೆಂಬಲಿಸುವುದೆಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Exit mobile version