Home ದಾವಣಗೆರೆ ಬಿಹೆಚ್‌ಇಎಲ್ (BHEL) ನಲ್ಲಿ ಕುಶಲಕರ್ಮಿ ಹುದ್ದೆಗಳ ಭರ್ಜರಿ ನೇಮಕಾತಿ: ಆನ್‌ಲೈನ್ ಅರ್ಜಿ ಆಹ್ವಾನ
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ಬಿಹೆಚ್‌ಇಎಲ್ (BHEL) ನಲ್ಲಿ ಕುಶಲಕರ್ಮಿ ಹುದ್ದೆಗಳ ಭರ್ಜರಿ ನೇಮಕಾತಿ: ಆನ್‌ಲೈನ್ ಅರ್ಜಿ ಆಹ್ವಾನ

Share
ಬಿಹೆಚ್‌ಇಎಲ್
Share

ದಾವಣಗೆರೆ, ನ.13 (ಕರ್ನಾಟಕ ವಾರ್ತೆ): ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಇವರು ಆಯೋಜಿಸಿರುವ ಬಿಹೆಚ್‌ಇಎಲ್ ಕುಶಲಕರ್ಮಿ [Fitter, Welder, Turner, Machinist, Electrician, Electronics Mechanic, Foundryman] ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಹತೆ:

10ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ ಸಂಬAಧಪಟ್ಟ ವೃತ್ತಿಯಲ್ಲಿ ‘ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್’ (NTC/ITI)  ಮತ್ತು ‘ನ್ಯಾಷನಲ್ ಅಪ್ರೆಂಟಿಸ್‌ಶಿಪ್ ಸರ್ಟಿಫಿಕೇಟ್’ (NAC)  ಪಡೆದಿರಬೇಕು. ಹಾಗೂ ಎರಡರಲ್ಲೂ, ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕನಿಷ್ಠ 60% ಅಂಕಗಳನ್ನು, ಹಾಗೂ ಎಸ್ಸಿ,ಎಸ್ಟಿ ಅಭ್ಯರ್ಥಿಗಳು ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.

ಸದರಿ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ವೆಬೆಸೈಟ್ https://careers.bhel.in  ಮೂಲಕ ಆನ್‌ಲೈನ್ ಮೂಲಕ ನವೆಂಬರ್ 18 ಬೆಳಗ್ಗೆ 11:45 ಘಂಟೆ ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಪರೀಕ್ಷೆಯ ತಾತ್ಕಾಲಿಕ ಪರೀಕ್ಷೆಯು ಡಿಸೆಂಬರ್ 11 ರಂದು ನಡೆಯಲಿದೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 27 ವರ್ಷಗಳು ಹಾಗೂ ಎಸ್ಸಿ,ಎಸ್ಟಿ,ಒ.ಬಿ.ಸಿ,ಇ.ಎಸ್.ಎಮ್/ಪಿ.ಡಬ್ಲೂ.ಬಿ.ಡಿ ಅಭ್ಯರ್ಥಿಗಳಿಗೆ ನಿಯಾಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ – 080-26989217/26998 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಭವನ, ದಾವಣಗೆರೆ. ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ರವೀಂದ್ರ ಡಿ ತಿಳಿಸಿದ್ದಾರೆ.

Share

Recent Posts

Recent Comments

No comments to show.
Related Articles