ದಾವಣಗೆರೆ: ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಎರಡೂ ಪಕ್ಷಗಳು ಅಭ್ಯರ್ಥಿ ಅಂತಿಮಗೊಳಿಸಲು ಸಜ್ಜಾಗಿವೆ. ಬಾಗಲಕೋಟೆ ವಿಧಾನಸಭಾ ಬೈ ಎಲೆಕ್ಷನ್ ಗೂ ತಯಾರಿ ಬಿರುಸಾಗಿ ನಡೆದಿದೆ.
ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ:
| ವಿವರ | ದಿನಾಂಕ |
| ನಾಮಪತ್ರ ಸಲ್ಲಿಕೆ ಆರಂಭ | ಮಾರ್ಚ್ 16, 2026 |
| ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ | ಮಾರ್ಚ್ 23, 2026 |
| ನಾಮಪತ್ರಗಳ ಪರಿಶೀಲನೆ | ಮಾರ್ಚ್ 24, 2026 |
| ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ | ಮಾರ್ಚ್ 26, 2026 |
| ಮತದಾನದ ದಿನಾಂಕ | ಏಪ್ರಿಲ್ 9, 2026 |
| ಫಲಿತಾಂಶ ಪ್ರಕಟಣೆ | ಮೇ 4, 2026 |
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸ್ಪರ್ಧಿಸಿ ಗೆದ್ದಿದ್ದ ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಅಭ್ಯರ್ಥಿ ಅಖೈರುಗೊಳಿಸುವುದಾಗಿ ಹೈಕಮಾಂಡ್ ಗೆ ತಲೆನೋವು ತಂದಿದೆ. ಆದರೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ದಂಪತಿ ಪುತ್ರ ಸಮರ್ಥ್ ಶಾಮನೂರು ಹೆಸರು ಕೇಳಿ ಬರುತ್ತಿದೆ. ಮತ್ತೊಂದೆಡೆ ಅಲ್ಪಸಂಖ್ಯಾತರಿಂದ ಸೈಯದ್ ಖಾಲಿದ್ ಅಹ್ಮದ್ ಅವರ ಹೆಸರೂ ಮುಂಚೂಣಿಯಲ್ಲಿದೆ. ಅಬ್ದುಲ್ ಜಬ್ಬಾರ್ ಹೆಸರು ಕೂಡ ಪ್ರಸ್ತಾಪದಲ್ಲಿದೆ.
ಮತ್ತೊಂದೆಡೆ ಬಿಜೆಪಿಯು ತನ್ನ ಅಭ್ಯರ್ಥಿ ಅಂತಿಮಗೊಳಿಸಲು ಮುಂದಾಗಿದೆ. ಒಟ್ಟು ಎಂಟು ಮಂದಿ ಆಕಾಂಕ್ಷಿಗಳಿದ್ದರೂ ಐವರ ಹೆಸರಿದ್ದ ಪಟ್ಟಿ ಅಂತಿಮಗೊಳಿಸಿತ್ತು. ಅಂತಿಮ ಕ್ಷಣದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಐವರ ಹೆಸರು ಪ್ರಸ್ತಾಪವಾಗಿತ್ತು. ಅಜಯ್ ಕುಮಾರ್, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪರ ಹೆಸರು ಕೇಳಿ ಬಂದಿತ್ತು. ಆದರೆ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಹೆಸರು ಪ್ರಸ್ತಾಪವಾಗಿದ್ದೇ ತಡ ಬಿಜೆಪಿ ಆಕಾಂಕ್ಷಿಗಳಲ್ಲಿ ಕಂಪನ ಶುರುವಾಗಿದೆ. ಐವರು ಅಭ್ಯರ್ಥಿಗಳು ದಿಢೀರ್ ಪತ್ರಿಕಾಗೋಷ್ಠಿ ನಡೆಸಿ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಘೋಷಿಸಿದ್ದಾರೆ.
ಮಾರ್ಚ್ 16ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮಾರ್ಚ್ 23 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಮಾರ್ಚ್ 26 ರಂದು ನಾಮಪತ್ರ ವಾಪಸ್ ಗೆ ಕೊನೆ ದಿನ. ಆ ನಂತರ ಉಳಿಯುವುದು ಕೆಲವೇ ದಿನಗಳು. ಏಪ್ರಿಲ್ 9ರಂದು ಮತದಾನ ಆಗಲಿದ್ದರೆ, ಮೇ. 4ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.
- Bagalkot By-election 2026
- Congress vs BJP
- Davanagere South Bypoll
- Election Schedule.
- Karnataka Politics
- Nomination last date
- Samarth Shamanur
- Shamanur Shivashankarappa
- Vinay Kumar Insights
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಬಿಜೆಪಿ ಪೈಪೋಟಿ
- ಚುನಾವಣಾ ವೇಳಾಪಟ್ಟಿ 2026.
- ದಾವಣಗೆರೆ ದಕ್ಷಿಣ ಉಪಚುನಾವಣೆ
- ನಾಮಪತ್ರ ಸಲ್ಲಿಕೆ ದಿನಾಂಕ
- ಬಾಗಲಕೋಟೆ ಬೈ ಎಲೆಕ್ಷನ್
- ವಿನಯ್ ಕುಮಾರ್ ಇನ್ ಸೈಟ್ಸ್
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು





Leave a comment