Site icon Kannada News-suddikshana

Davanagere: ದಾವಣಗೆರೆಯಲ್ಲಿ ನೂರಾರು ವರ್ಷಗಳಿಂದ ನಡೆಯುತ್ತಿದೆ ಆಂಜನೇಯ ಸ್ವಾಮಿ ಎಡೆ ಪರವು: ಪರವು ಮಾಡಿದ ದಿನ ಬರುತ್ತೆ ವರ್ಷಧಾರೆ… ಇದು ಭಜರಂಗಿ ಪವಾಡ…!

ANJANEYA SWAMY SPECIAL

ANJANEYA SWAMY SPECIAL

SUDDIKSHANA KANNADA NEWS/ DAVANAGERE/ DATE:30-09-2023

ದಾವಣಗೆರೆ (Davanagere):  : ನೂರಾರು ವರ್ಷಗಳ ಇತಿಹಾಸ ಇರುವ ನಗರದ ವಿದ್ಯಾನಗರದ ಮಟ್ಟಿ ಆಂಜನೇಯ ಸ್ವಾಮಿಯ ಎಡೆ ಪರವು ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರು ಧನ್ಯರಾದರು. 

ಪ್ರತಿ ವರ್ಷವೂ ಭಾದ್ರಪದ ಮಾಸದಲ್ಲಿ ನಡೆಯುವ ಈ ಪರವು ಕಾರ‍್ಯಕ್ರಮದ ಭಾಗವಾಗಿ ಸ್ವಾಮಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಸೆ.29 ರ ಶುಕ್ರವಾರ ರಾತ್ರಿ ಶಾಮನೂರಿನ ಶ್ರೀ ಆಂಜನೇಯ ಹಾಗೂ ಬಸವೇಶ್ವರ ಸ್ವಾಮಿಯ ಆಗಮವಾಯಿತು. ಇಡೀ ರಾತ್ರಿ ಶಾಮನೂರು ಭಜನಾ ತಂಡದಿಂದ ಅಹೋರಾತ್ರಿ ಭಜನಾ ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರು ಖುಷಿಪಟ್ಟರು.

ಈ ಸುದ್ದಿಯನ್ನೂ ಓದಿ: 

Davanagere: ಸಮಾಜದ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳು ಸಿಗುತ್ತಿಲ್ಲ: ಸಿದ್ದರಾಮಯ್ಯರ ಕಾರ್ಯವೈಖರಿಗೆ ಎಸ್ ಎಸ್ ಬೇಸರ

ಶನಿವಾರ ಬೆಳಿಗ್ಗೆ 8.30 ರಿಂದ ಮೂರು ದೇವರಿಗೆ ವಿವಿಧ ಅಲಂಕಾರ ಮತ್ತು ಪೂಜಾ ಕೈಂಕರ್ಯಗಳು ಶ್ರದ್ಧೆ, ಭಕ್ತಿಗಳಿಂದ ನೆರವೇರಿದವು. ಇಂದಿನ ಕಾರ್ಯಕ್ರಮಗಳ ಕುರಿತು ದೇವಸ್ಥಾನದ ಭಕ್ತರಾದ ಶಾಮನೂರಿನ ಚನ್ನಪ್ಪ ಗೌಡರು ಮತ್ತು ಮಂಜಣ್ಣ, ಕೊಟ್ರೇಶ್ ಮಾತನಾಡಿ, ಶಾಮನೂರು, ನಿಟುವಳ್ಳಿ, ಶಿರಮಗೊಂಡನಹಳ್ಳಿಗಳು ಗಡಿಪ್ರದೇಶಗಳಾಗಿದ್ದು, ಇದರ ರಕ್ಷಣೆಗಾಗಿ ಶತಮಾನಗಳ ಹಿಂದೆ ಮಟ್ಟಿ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪರವು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಶತಮಾನಗಳು ಉರುಳಿದರೂ ಕೂಡ ಎಡೆ ಪರವು ಕಾರ‍್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಹಿಂದೆಲ್ಲ ಭಕ್ತರು ಎತ್ತಿನ ಬಂಡಿ ಕಟ್ಟಿಕೊಂಡು ಬಂದು ಇಲ್ಲಿಯೇ ವಾಸ್ತವ್ಯ ಹೂಡಿ ರಾತ್ರಿಯಿಡೀ ಸ್ವಾಮಿಯ ಸೇವೆ ಮಾಡಿ, ಬೆಳಿಗ್ಗೆ ಪ್ರಸಾದ ವಿನಿಯೋಗ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಪರವು ಮಾಡಿದ ದಿನ ಈ ಭಾಗದಲ್ಲಿ ಮಳೆ ಬರುವುದು ವಿಶೇಷ. ಇದೀಗ ಇದಕ್ಕಾಗಿ ಸಮಿತಿ ರಚಿಸಿಕೊಂಡು ಕಳೆದ 25 ವರ್ಷಗಳಿಂದ ಪರವು ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಮಂಜಣ್ಣ, ಕೊರಟೀಕೆರೆ ಶಿವಕುಮಾರ್, ಪ್ರಭು, ಮಾರುತಿ, ಆನಂದ್,ಲಿಂಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂತರ ಪ್ರಸಾದ ವಿನಿಯೋಗ ನಡೆಯಿತು.

Exit mobile version