Home ಕ್ರೈಂ ನ್ಯೂಸ್ ದಾವಣಗೆರೆಯ ಆನಗೋಡಿನಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಭೀಕರ ಹೆಜ್ಜೇನು ದಾಳಿ: ಎಎಸ್ಐ ಸೇರಿ 60ಕ್ಕೂ ಹೆಚ್ಚು ಜನರಿಗೆ ಗಾಯ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯ ಆನಗೋಡಿನಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಭೀಕರ ಹೆಜ್ಜೇನು ದಾಳಿ: ಎಎಸ್ಐ ಸೇರಿ 60ಕ್ಕೂ ಹೆಚ್ಚು ಜನರಿಗೆ ಗಾಯ

Share
ದಾವಣಗೆರೆ
Share

ದಾವಣಗೆರೆ: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಹೆಜ್ಜೇನು ದಾಳಿ ನಡೆಸಿ ಸುಮಾರು 60ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಆನಗೋಡು ಗ್ರಾಮದಲ್ಲಿ ಶನಿವಾರ ನಡೆದಿದೆ.

ಆಸೀಪ್ ಅಲಿ (28), ಶಫೀವುಲ್ಲಾ( 50), ಗಂಗಜ್ಜಿ(65), ಸನಾವುಲ್ಲಾ ಸಾಬ್(65), ಸಿರಾಜ್ (46), ಇಸಾದ್ (42), ಹನೀಫ್ ಅಲಿ( 30), ಯೂಸೀಪ್ ಅಲಿ (30) ಸೇರಿದಂತೆ 60ಕ್ಕೂ ಪ್ರಾರ್ಥನೆಗೆ ಕುಳಿತ್ತಿದ್ದ ಮುಸ್ಲಿಂ ಬಾಂಧವರು,  ಪಾದಚಾರಿಗಳು, ಈದ್ಗಾ ಮೈದಾನದಲ್ಲಿ ಬಂದೋಬಸ್ತ್ ಗೆ ನಿಯೋಜಿಸಿದ್ದ ಎಎಸ್ ಐ ನಾರಪ್ಪ ಮೂವರು ಸಿಬ್ಬಂದಿಗೂ ಹಾಗೂ ಸಾರ್ವಜನಿಕರು ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ನಿರತರಾಗಿದ್ದಾರೆ. ಇಬ್ವರು ಮಕ್ಕಳು ಸೇರಿದಂತೆ ಹಲವರ ಸ್ಥೀತಿ ಗಂಭೀರವಾಗಿದ್ದು, ಅವರಿಗೆ ಸ್ಥಳದಲ್ಲೇ ಮೊಕ್ಕಂ ಹೂಡಿದ ಡಿಎಚ್ ಒ, ಟಿಎಚ್ ಒ, ಆಸ್ಪತ್ರೆಯ ಆಡಳಿತಾಧಿಕಾರಿಗಳು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles