Site icon Kannada News-suddikshana

ರೇಣುಕಾಸ್ವಾಮಿ ಕೊಲೆ ಪ್ರಕರಣ: ಇಂದು ದರ್ಶನ್‌ ಬಂಧನ ಅವಧಿ ಮುಕ್ತಾಯ – ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದು ಸೋಮವಾರ (ಸೆ.9) ಮುಕ್ತಾಯವಾಗಲಿದೆ.

ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ವಿವಿಧ ಜೈಲಲ್ಲಿರುವ ಕಾರಣ ಎಲ್ಲರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ವಿಚಾರಣೆ ಬಳಿಕ ನಟ ದರ್ಶನ್‌ಜಾಮೀನು ಕೋರಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್ ಮಾತ್ರವಲ್ಲ ಡಿ ಗ್ಯಾಂಗ್‌ನ ಉಳಿದ ಸದಸ್ಯರು ಜಾಮೀನು ಪಡೆಯಲು ಕಸರತ್ತು ನಡೆಸಿದ್ದಾರೆ. ಎ1 ಪವಿತ್ರಾಗೌಡ, ಎ7 ಅನುಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ನಾಳೆ ಇಬ್ಬರ ಅರ್ಜಿಗಳು ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಈಗಾಗಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಜೊತೆ ಜಾಮೀನು ಸರ್ಜಿ ಸಲ್ಲಿಕೆ ಮಾಡುವ ಕುರಿತು ದರ್ಶನ್‌ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಆದ್ದರಿಂದ ಸೆ.9 ಅಥವಾ ಸೆ.10ರಂದು ಎಸಿಎಂಎಂ ಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ

Exit mobile version