Site icon Kannada News-suddikshana

ಜಾಮೀನಿಗೆ ಅರ್ಜಿ ಸಲ್ಲಿಸಲು ಜೈಲಿನಲ್ಲಿ ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ; ಮಹತ್ವದ ಚರ್ಚೆ

ಬಳ್ಳಾರಿ/ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ರೇಣುಕಾ ಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆಯಲ್ಲಿರುವ ಶೆಡ್‌ಗೆ ಕರೆದುಕೊಂಡು ಹೋಗಲಾಗಿತ್ತು.

ಇದೆಲ್ಲ ಪ್ಲ್ಯಾನ್ ಮಾಡಿದ್ದು ದರ್ಶನ್ ಎನ್ನುವ ಆರೋಪ ಇದೆ. ಇದರಲ್ಲಿ ದರ್ಶನ್ ಪಾತ್ರ ಸಾಕಷ್ಟು ಇದೆ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಆಗಿದೆ. ಈ ಬೆನ್ನಲ್ಲೇ ದರ್ಶನ್ ಜಾಮೀನು ಅರ್ಜಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೂ ಮೊದಲು ಪವಿತ್ರಾ ಗೌಡ ಹಾಗೂ ಇತರರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಅದು ರಿಜೆಕ್ಟ್ ಆಗಿತ್ತು. ಈಗ ದೋಷಾರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ ದರ್ಶನ್ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಲು ರೆಡಿ ಆಗಿದ್ದಾರೆ.

ವಿಜಯಲಕ್ಷ್ಮೀ ಅವರು ಗುರುವಾರ ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಬೇಲ್ ಅರ್ಜಿ ಬಗ್ಗೆ ಚರ್ಚಿಸಿದ್ದಾರೆ. ಜೈಲಿಗೆ ಭೇಟಿ ನೀಡಿದ್ದ ವಿಜಯಲಕ್ಷ್ಮೀ ಹಾಗೂ ದರ್ಶನ್ ಸಹೋದರ ದಿನಕರ್ ಜಾಮೀನು‌ ಅರ್ಜಿ ಕುರಿತು ದರ್ಶನ್ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಮಾತುಕತೆ ವೇಳೆ ಜಾರ್ಜ್‌ ಶೀಟ್ನಲ್ಲಿರುವ ಅಂಶಗಳ ಬಗ್ಗೆ ದರ್ಶನ್‌ಗೆ ಮಾಹಿತಿ ನೀಡುವ ಕೆಲಸ ಆಗಿದೆ. ಇದಕ್ಕೂ ಮೊದಲು ದರ್ಶನ್ ಅವರು ದೂರವಾಣಿ ಮೂಲಕ ವಕೀಲರ ಜತೆ ಮಾತನಾಡಿದ್ದರು. ಈ ವೇಳೆ ಜಾಮೀನಿನ ವಿಚಾರವಾಗಿ ಚರ್ಚೆ ನಡೆದಿದೆ. ವಿಜಯಲಕ್ಷ್ಮೀ ಜತೆ ವಕೀಲರು ಬೇಲ್ ಅರ್ಜಿ ಕಳುಹಿಸಿದ್ದರು. ವಕೀಲರ ಜತೆ ಮಾತುಕತೆ ಬಳಿಕ ಬೇಲ್ ದರ್ಶನ್ ಅರ್ಜಿಗೆ ಸಹಿ ಹಾಕಿದ್ದರು. ವಿಜಯಲಕ್ಷ್ಮೀ ಹಾಗೂ ದಿನಕರ್ ಸಹಿ ಪಡೆದು ಹೋದ ಬಳಿಕ ಜೈಲಿಗೆ ಸರ್ಕಾರಿ ನೋಟರಿಯವರು ಜೈಲು ಅಧಿಕಾರಿಗಳ ಸಮ್ಮುಖದಲ್ಲಿ ಜಾಮೀನು ಅರ್ಜಿ ಹಾಗೂ ಅಫಿಡವಿಟ್ ಸಿದ್ಧ ಮಾಡಿದ್ದಾರೆ.

Exit mobile version