Site icon Kannada News-suddikshana

Daily Rashi Bhavishya: ಗುರುವಾರದಂದು ರಾಯರ ಆಶೀರ್ವಾದ ಯಾವ ರಾಶಿ ಮೇಲಿದೆ…? ಯಾವ ರಾಶಿಯವರು ಎಚ್ಚರ ವಹಿಸಬೇಕು…? ಯಾವ ರಾಶಿಯವರು ಒಳ್ಳೆಯ ಸುದ್ದಿ ಕೇಳುತ್ತಾರೆ…?

SUDDIKSHANA KANNADA NEWS/ DAVANAGERE/ DATE:12-10-2023

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿ(Rashi)ಗಳಿಗೆ ಒಳಿತು, ಯಾವ ರಾಶಿಗೆ ಕೆಡುಕು ಎಂಬುದನ್ನು ನೋಡಲಾಗುತ್ತದೆ. ಪ್ರತಿಯೊಂದು ರಾಶಿಯದ್ದು ದಿನಭವಿಷ್ಯವೂ ದಿನ ಕಳೆದಂತೆ ಬೇರೆ ಬೇರೆಯದ್ದೇ ಆಗಿರುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಹಾಗೆಯೇ 27 ರಾಶಿಗಳಿಗೆ ಭವಿಷ್ಯ ಹೇಳಬಹುದು. ಪ್ರತಿಯೊಂದು ಮೊತ್ತವು ತನ್ನದೇ ಆದ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಗ್ರಹಗಳ ಜೀವನದಲ್ಲಿ ಸಂಭವಿಸುವ ಸಂದರ್ಭಗಳು ಪ್ರತಿ ದಿನದ ಗ್ರಹಗಳಿಗೆ ಅನುಗುಣವಾಗಿ ಬದಲಾಗುತ್ತವೆ.

Read Also This Story:

ಸಚಿನ್ ತೆಂಡೂಲ್ಕರ್ ರೆಕಾರ್ಡ್ ಉಡೀಸ್ ಮಾಡಿದ ಹಿಟ್ ಮ್ಯಾನ್: ಭರ್ಜರಿ ಶತಕ ಬಾರಿಸಿದ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ವೈಭವದಲ್ಲಿ ಯಾವೆಲ್ಲಾ ರೆಕಾರ್ಡ್ ಗಳು ಧೂಳೀಪಟ ಗೊತ್ತಾ…?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿ(Rashi)ಗಳಿಗೆ ಒಳಿತು, ಯಾವ ರಾಶಿಗೆ ಕೆಡುಕು ಎಂಬುದನ್ನು ನೋಡಲಾಗುತ್ತದೆ. ಪ್ರತಿಯೊಂದು ರಾಶಿಯದ್ದು ದಿನಭವಿಷ್ಯವೂ ದಿನ ಕಳೆದಂತೆ ಬೇರೆ ಬೇರೆಯದ್ದೇ ಆಗಿರುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಹಾಗೆಯೇ 27 ರಾಶಿಗಳಿಗೆ ಭವಿಷ್ಯ ಹೇಳಬಹುದು. ಪ್ರತಿಯೊಂದು ಮೊತ್ತವು ತನ್ನದೇ ಆದ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಗ್ರಹಗಳ ಜೀವನದಲ್ಲಿ ಸಂಭವಿಸುವ ಸಂದರ್ಭಗಳು ಪ್ರತಿ ದಿನದ ಗ್ರಹಗಳಿಗೆ ಅನುಗುಣವಾಗಿ ಬದಲಾಗುತ್ತವೆ.

ಮೇಷ ರಾಶಿ (Rashi):

ಹಣಕಾಸಿನ ವಿಚಾರದಲ್ಲಿ ಎಚ್ಚರ ಇರಲಿ. ವ್ಯವಹಾರದಲ್ಲಿ ಇಂದು ಲಾಭ ಆಗುವ ಸಾಧ್ಯತೆ ಇದೆ. ಶ್ರೀ ರಾಘವೇಂದ್ರ ಸ್ವಾಮಿಯನ್ನು ಆರಾಧಿಸಿ. ಮಂತ್ರ ಪಠಿಸಿದರೆ ಲಾಭ ಗ್ಯಾರಂಟಿ.

ವೃಷಭ ರಾಶಿ (Rashi):

ವೃಷಭ ರಾಶಿಯವರು ದೂರದ ಪ್ರಯಾಣ ಮುಂದೂಡುವುದು ಒಳ್ಳೆಯದು. ತುರ್ತು ಕೆಲಸವಿದ್ದರೆ ಎಚ್ಚರಿಕೆಯಿಂದ ಪ್ರಯಾಣ ಬೆಳೆಸಿ. ಅನಾವಶಕ್ಯವಾಗಿ ಓಡಾಟ ನಿಲ್ಲಿಸಿ.

ಮಿಥುನ ರಾಶಿ (Rashi):

ಇಂದು ಮಿಥುನ ರಾಶಿಯವರಿಗೆ ಪ್ರಯಾಣದಲ್ಲಿ ಆತಂಕ ಇರುತ್ತದೆ. ಸ್ವಲ್ಪ ಯಾಮಾರಿದರೂ ದೊಡ್ಡ ದಂಡ ತೆರಬೇಕಾಗುತ್ತದೆ. ಎಚ್ಚರ ವಹಿಸಿ. ಬೈಕ್ ಚಾಲನೆ ಮಾಡುವಾಗ ಹೆಚ್ಚು ಹುಷಾರಾಗಿರಿ.

ಕರ್ಕ ರಾಶಿ (Rashi):

ಕರ್ಕ ರಾಶಿಯವರಿಗೆ ಇಂದು ಧನ ಲಾಭ ಇದೆ. ಹಳೆಯ ಸಾಲ ವಾಪಸ್ ಬರುವ ಸಾಧ್ಯತೆ ಇದೆ. ತುಂಬಾ ದಿನಗಳಿಂದ ನೀವು ನಿರೀಕ್ಷಿಸಿದ್ದ ಕೆಲಸ ಆಗಲಿದೆ. ಸಾಲ ವಾಪಸ್ ಬರುವ ಸಾಧ್ಯತೆ ಇದ್ದು, ಹೆಚ್ಚು
ಮಾತನಾಡಬೇಡಿ, ಕೋಪಗೊಳ್ಳಬೇಡಿ.

ಸಿಂಹ ರಾಶಿ (Rashi):

ಸಿಂಹ ರಾಶಿಯವರು ತಾಳ್ಮೆ ವಹಿಸಬೇಕು. ಕೆಲ ವಿಚಾರಗಳಲ್ಲಿ ಸಿಟ್ಟಾಗುವ ಸಾಧ್ಯತೆ ಇದ್ದು, ಇದರಿಂದ ಸಮಸ್ಯೆ ತಲೆದೋರಲಿವೆ. ಸಹೋದರರು, ಸಂಬಂಧಿಕರ ಮಾತುಗಳ ಬಗ್ಗೆ ಎಚ್ಚರ ವಹಿಸಿ.

ಕನ್ಯಾ ರಾಶಿ (Rashi):

ಕನ್ಯಾ ರಾಶಿಯವರ ಶೈಕ್ಷಣಿಕ ಉನ್ನತಿಗೆ ಅವಕಾಶ ಒದಗಿ ಬರುವ ಸಾಧ್ಯತೆ ಇದೆ. ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಿಹಿ ಸುದ್ದಿ ಕೇಳುವಿರಿ. ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕರೂ ಸಿಗಬಹುದು.

ತುಲಾ ರಾಶಿ (Rashi):

ಹಲವು ವರ್ಷಗಳಿಂದ ಇದ್ದ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯ ಬಗೆಹರಿಯುವ ಲಕ್ಷಣ ಗೋಚರಿಸಲಿದೆ. ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಸೇರಿದಂತೆ ಬೇರೆ ಬೇರೆ ರೀತಿಯ ಪಾಲುಪಟ್ಟಿಯ ವಿಚಾರದಲ್ಲಿ ತಲೆದೋರಿರುವ
ಸಮಸ್ಯೆ ನಿವಾರಣೆಯ ಪ್ರಯತ್ನ ಯಶಸ್ವಿ ಆಗುವ ಸಾಧ್ಯತೆಯೂ ಇದೆ.

ವೃಶ್ಚಿಕ ರಾಶಿ (Rashi):

ವೃಶ್ಚಿಕ ರಾಶಿಯವರಿಗೂ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಪ್ರಶಂಸೆ ಮಾತುಗಳು ಕೇಳಿ ಬರುತ್ತವೆ. ಅದೇ ರೀತಿಯಲ್ಲಿ ಉತ್ತಮ ಅವಕಾಶಗಳು ಒದಗಿ ಬರಲಿವೆ. ಶ್ರೀ ರಾಘವೇಂದ್ರ ಸ್ವಾಮಿ ಅವರನ್ನು ಆರಾಧಿಸಿ. ರಾಯರ
ಆಶೀರ್ವಾದ ನಿಮ್ಮದಾಗಲಿದೆ.

ಧನು ರಾಶಿ (Rashi):

ಆರ್ಥಿಕ ಸಂಕಷ್ಟ ದೂರವಾಗಲಿದೆ. ಹೊಸ ವಾಹನ ಖರೀದಿ ಮಾಡುವ ಕುರಿತಂತೆ ಆಲೋಚಿಸುತ್ತೀರಿ. ಸ್ವಲ್ಪ ದಿನಗಳಲ್ಲಿ ಇದು ಸಾಧ್ಯವಾಗಲಿದೆ. ನಿಮ್ಮ ಬಹುದಿನದ ಕನಸು ನನಸು ಆಗುತ್ತದೆ.

ಮಕರ ರಾಶಿ (Rashi):

ಮಕರ ರಾಶಿಯವರು ಅಕ್ಕ ಪಕ್ಕದ ಮನೆಯವರ ಬಗ್ಗೆ ಹುಷಾರಾಗಿರಿ. ಅವರಿಂದ ಮೋಸ ಹೋಗುವ ಸಾಧ್ಯತೆ ಇದೆ. ಬಣ್ಣ ಬಣ್ಣದ ಮಾತನಾಡಿ ನಿಮಗೆ ತೊಂದರೆ ಉಂಟು ಮಾಡಬೇಕೆಂದು ಕಾಯುವವರು ಸಮಯಕ್ಕಾಗಿ ಕಾಯುತ್ತಿದ್ದಾರೆ.
ಹಾಗಾಗಿ, ಹುಷಾರಾಗಿರಿ.

ಕುಂಭ ರಾಶಿ (Rashi):

ಕುಂಭ ರಾಶಿಯವರಿಗೆ ಉದ್ಯೋಗಾವಕಾಶ ಅರಸಿ ಬರುವ ಸಾಧ್ಯತೆ ಇದೆ. ಹಲವು ದಿನಗಳ ಹಿಂದೆ ನೀವು ಅಂದುಕೊಂಡಿದ್ದ ಕೆಲಸ ಈಗ ಈಡೇರುವ ದಿನಗಳು ಹತ್ತಿರ ಬರುತ್ತಿದ್ದು, ಇದಕ್ಕೆ ಇಂದು ಸೂಕ್ತ ವೇದಿಕೆ ಸಿಗಲಿದೆ. ಯಾವುದಕ್ಕೂ ತಾಳ್ಮೆಯಿಂದ
ಕಾಯಿರಿ.

ಮೀನ ರಾಶಿ (Rashi):

ಮೀನ ರಾಶಿಯವರು ಆರ್ಥಿಕವಾಗಿ ಒಳ್ಳೆಯ ಸುದ್ದಿ ಕೇಳುವಿರಿ. ಹಾಗಾಗಿ, ಯಾರೊಟ್ಟಿಗೆ ಜಗಳವಾಡಬೇಡಿ. ದೇವರ ಪ್ರಾರ್ಥನೆಯಲ್ಲಿ ತೊಡಗಿ. ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ನಿಮಗೆ ಸಿಗುವ ಸಾಧ್ಯತೆ ಇದ್ದು, ರಾಯರನ್ನು ಆರಾಧಿಸಿ.

 

Exit mobile version