Site icon Kannada News-suddikshana

ನಮಗೂ ಟೈಂ ಬರುತ್ತೆ ಎಂದ ಸಿ.ಟಿ.ರವಿ: ನೀವೇನು ಕಾಲಜ್ಞಾನಿನಾ ಎಂದು ವ್ಯಂಗ್ಯವಾಡಿದ ಕೈ ನಾಯಕ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿ.ಟಿ.ರವಿ ರವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿ ರವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅತ್ತೆಗೊಂದು ಕಾಲ,ಸೊಸೆಗೊಂದು ಕಾಲ, ಸರ್ವಾಧಿಕಾರ ಧೋರಣೆ ಕೊನೆಯಾಗಲಿದೆ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ನಮಗೂ ಕಾಲ ಬರುತ್ತೆ ಎಂದು ಆಕ್ರೋಶ ಹೊರಹಾಕಿದ್ದರು.

 

ಕಲಬುರಗಿ ಏರ್ಪೋರ್ಟ್ ಅಲ್ಲಿ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್ ಕಾಲ ಬದಲಾಗೋದರ ಬಗ್ಗೆ ಹೇಳೊಕೆ‌ ಅವರೇನು ಕಾಲ ಜ್ಞಾನಿನಾ ಎಂದು ವ್ಯಂಗ್ಯವಾಡಿದ್ದಾರೆ. ಅವರಿಗೆ ಕಾಲ ಬಂದಿದ್ದು ಆಯಿತು ಹೋಗಿದ್ದು ಆಯಿತು ಅವರ ಕಾಲದಲ್ಲಿ‌ ಏನು ಮಾಡಿಲ್ಲ ಅದನ್ನು ಜನ ನೋಡಿದ್ದಾರೆ ಎಂದು ಕಿಡಿಕಾರಿದರು.

Exit mobile version