Site icon Kannada News-suddikshana

ಸಿ.ಟಿ.ರವಿ ಬಂಧನ: ಪೋಲಿಸ್ ವ್ಯಾನ್ ಹತ್ತಿ ಅಸಮಧಾನ ಹೊರ ಹಾಕಿದ ಬಿಜೆಪಿ ಶಾಸಕರು

ಬೇಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಡಿ ಸಿ.ಟಿ.ರವಿಯವರನ್ನು ಪೋಲಿಸರು ಬಂಧಿಸಿದ್ದಾರೆ.

ಎಫ್ಐಆರ್ ದಾಖಾಲಾದ ಬೆನ್ನಲ್ಲೇ ಸಿ.ಟಿ ರವಿಯವರನ್ನು ಬಂಧಿಸಿದ ಪೋಲಿಸರು ಹೀರೆಬಾಗೆವಾಡಿ ಪೋಲಿಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಇತ್ತ ರವಿಯವರ ಬಂಧನವನ್ನ ಖಂಡಿಸಿ ಬಿಜೆಪಿ ಶಾಸಕರು ಪೋಲಿಸ್ ವ್ಯಾನ್ ಮೇಲೆ ಅಸಮಧಾನ ಹೊರಹಾಕಿದ ಘಟನೆ ನಡೆಯಿತು.

ಸುವರ್ಣಸೌಧದಲ್ಲಿ ತಮ್ಮ ಮೇಲೆ ಹಲ್ಲೆಗೆ ಮುಂದಾದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅಕ್ರೋಶ ಹೊರಹಾಕಿದರು.ನಂತರ ಬಿಜೆಪಿಯ ಎಲ್ಲಾ‌ ಶಾಸಕರು ಸೇರಿ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿ, ಹಲ್ಲೇ ಮಾಡಲು ಬಂದವರು ಗೂಂಡಾಗಳು ಎಂದು ಕಿಡಿಕಾರಿದರು.

Exit mobile version