Site icon Kannada News-suddikshana

United States dollar: ಅಮೆರಿಕನ್ ಡಾಲರ್, ಡೈಮಂಡ್ ಸೇರಿ 34 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದ ಖತರ್ನಾಕ್ ಕಳ್ಳ ಸೆರೆ: ಬಂಧಿತ ಆರೋಪಿ ಎಲ್ಲಿಯವನು ಗೊತ್ತಾ…?

SUDDIKSHANA KANNADA NEWS/ DAVANAGERE/ DATE:27-08-2023

ದಾವಣಗೆರೆ: ಆತ ಕುಖ್ಯಾತ ಮನೆಕಳ್ಳ. ಆತ ಕದ್ದಿದ್ದು ಕೇವಲ ಚಿನ್ನಾಭರಣ ಮಾತ್ರವಲ್ಲ, ಅಮೆರಿಕನ್ ಡಾಲರ್ (United States dollar) ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಡೈಮಂಡ್, ಬಂಗಾರ, ಬೆಳ್ಳಿ ಕಳ್ಳತನವಾಗಿತ್ತು. ಕಳ್ಳತನ ಮಾಡಿದ್ದ ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ. ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸರು ಖತರ್ನಾಕ್ ಕಳ್ಳನನ್ನು ಸೆರೆ ಹಿಡಿದಿದ್ದಾರೆ.

ಮೂಲತಃ ತಮಿಳುನಾಡಿನ ಕೃಷ್ಣಗಿರಿ ತಾಲೂಕಿನ ರಾಣೀಪೇಟೆ ಹಾಗೂ ಬೆಂಗಳೂರಿನ ಉತ್ತರಹಳ್ಳಿಯ ಭುವನೇಶ್ವರಿ ನಗರದ ಮಂಜುನಾಥ ಅಲಿಯಾಸ್ ಕಲ್ಕೇರೆ ಮಂಜ ಅಲಿಯಾಸ್ ಮಂಜ (43) ಬಂಧಿತ ಆರೋಪಿ.

ಘಟನೆ ಹಿನ್ನೆಲೆ:

ಕಳೆದ 20ರಂದು ವಿದ್ಯಾನಗರದ ಕೆನರಾ ಬ್ಯಾಂಕ್ ನ ಎದುರು ವಾಸವಿದ್ದ 63 ವರ್ಷದ ಜಿ. ಹೆಚ್. ಶಂಕರ್ ಎಂಬುವವರು ವಿದ್ಯಾನಗರ ಪೊಲೀಸ್ ಠಾಣೆಗೆ ಹಾಜರಾಗಿ ಮನೆಯಲ್ಲಿ ಕಳ್ಳತನ ಆಗಿರುವ ಕುರಿತಂತೆ ದೂರು ಕೊಟ್ಟಿದ್ದರು. ಆಗಸ್ಟ್ 17ರಂದು ಮಧ್ಯಾಹ್ನ 2 ಗಂಟೆಗೆ ನಮ್ಮ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಬೆಂಗಳೂರಿಗೆ ಹೋಗಿದ್ದೆವು. ಆದ್ರೆ, 20 ರಂದು ಮನೆಗೆ ವಾಪಸ್ ಬಂದಾಗ ಯಾರೋ ಕಳ್ಳರು ಮನೆ ಬಾಗಿಲು ಹೊಡೆದು ಮನೆಯಲ್ಲಿದ್ದ 262 ಗ್ರಾಂ ಬಂಗಾರ, 1500 ಗ್ರಾಂ ಬೆಳ್ಳಿ ಆಭರಣಗಳು ಮತ್ತು 1,20,000 ರೂಪಾಯಿ ನಗದು ಒಂದು ಸಾವಿರ ಅಮೆರಿಕನ್ ಡಾಲರ್ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು.

ಈ ಸುದ್ದಿಯನ್ನೂ ಓದಿ: 

Funeral: ಕಣ್ಣೀರ ಕೋಡಿಯಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ದಾವಣಗೆರೆಯ ಮೂವರ ಅಂತ್ಯಸಂಸ್ಕಾರ: ಡೆತ್ ನೋಟ್ ಸೀಕ್ರೆಟ್ ಇನ್ನೂ ಸಸ್ಪೆನ್ಸ್…!

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪ್ರಭಾರದಲ್ಲಿದ್ದ ಪ್ರೊಫೆಷನಲ್ ಡಿವೈಎಸ್ಲಿ ಯಶವಂತ್‌ ಕುಮಾರ್, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವು ಪ್ರಕರಣದ ಆರೋಪಿತನಾದ ಪತ್ತೆ ಮಾಡಿ ಬಂಧಿಸಿದ್ದಾರೆ.

ಬಂಧಿತನಿಂದ ಕಳ್ಳತನ ಮಾಡಿದ್ದ ಸುಮಾರು 15,63,600 ರೂಪಾಯಿ ಮೌಲ್ಯದ 210 ಗ್ರಾಂ ಡೈಮಂಡ್ ಸಮೇತ ಬಂಗಾರದ ಆಭರಣಗಳು ಮತ್ತು ಬಂಗಾರದ ಗಟ್ಟಿ, 47 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳು, 37927 ರೂಪಾಯಿ ಬೆಲೆ ಬಾಳುವ 460 ಅಮೆರಿಕನ್ ಡಾಲರ್, ಕಳ್ಳತನ ಮಾಡಿದ್ದ 13,50,000 ರೂ. ಬೆಲೆ ಬಾಳುವ ಕೆ.ಎ- 17 ಎಂ.ಎ – 1466 ನಂಬರ್ ನ ಬ್ರೀಜ್ಜಾ ಕಾರ್, ಮತ್ತು ಕೃತ್ಯಕ್ಕೆ ಬಳಿಸಿದ್ದ 4 ಲಕ್ಷ ರೂಪಾಯಿ ಮೌಲ್ಯದ ಕೆ.ಎ-51 ಪಿ- 5250 ಸ್ವಿಫ್ಟ್ ಡೀಜೈರ್ ಕಾರು ವಶಕ್ಕೆ ಪಡೆಯಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯ ಒಟ್ಟು 3 ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತದೆ. ಉಳಿದ ಆರೋಪಿ ಮತ್ತು ಮಾಲು ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ.

ಆರೋಪಿ ಪತ್ತೆ ಮಾಡಿ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿಯಾದ ಆನಂದ ಮುಂದಲಮನಿ, ಯೋಗೀಶ್ ನಾಯ್ಕ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಗೋಪಿನಾಥ ಬಿ
ನಾಯ್ಕ, ರಾಘವೇಂದ್ರ ಅವರನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.

 

Exit mobile version