SUDDIKSHANA KANNADA NEWS/DAVANAGERE/DATE:09_12_2025
ದಾವಣಗೆರೆ: ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ 17 ವರ್ಷದ ಅಪ್ರಾಪ್ತಳಿಗೆ ವಿವಾಹ ಮಾಡಲು ಸಿದ್ಧತೆ ನಡೆಸಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಬಾಲ್ಯವಿವಾಹ ನಿಲ್ಲಿಸಿದ ಘಟನೆ ನಡೆದಿದೆ.
112 ಕರ್ತವ್ಯಾಧಿಕಾರಿಗಳಾದ ನರೇಂದ್ರ ನಾಯ್ಕ್ ಹಾಗೂ ವೀರೇಶ್ ರವರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದರು. ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹರ್ಷದ್ ಅಲಿ ಹಾಗೂ ಪಿಡಿಒ ಜಯಲಕ್ಷ್ಮಿ ಅವರ ಸಮಕ್ಷಮದಲ್ಲಿ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸಿದ್ದನ್ನು ತಡೆದರು. ಬಾಲಕಿಯನ್ನು ರಕ್ಷಿಸಿ, ಅಪ್ರಾಪ್ತ ವಯಸ್ಸಿಗೆ ವಿವಾಹ ಮಾಡುವುದು ಕಾನೂನು ಬಾಹಿರವಾಗಿರುತ್ತದೆಂದು ಅಪ್ರಾಪ್ತಳ ಪೋಷಕರಿಗೆ ಸೂಕ್ತ ತಿಳುವಳಿಕೆ ನೀಡಿದರು.
ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಕಚೇರಿಗೆ ಪೋಷಕರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.





Leave a comment