Home ಕ್ರೈಂ ನ್ಯೂಸ್ ನಾಸಿಕ್ ಟಿಸಿಎಸ್ ಘಟಕದಲ್ಲಿ ಮತಾಂತರ ಜಾಲ ಮತ್ತು ಲೈಂಗಿಕ ಕಿರುಕುಳ ಆರೋಪ: ಆರು ಮಂದಿ ಉದ್ಯೋಗಿಗಳ ಬಂಧನ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ನಾಸಿಕ್ ಟಿಸಿಎಸ್ ಘಟಕದಲ್ಲಿ ಮತಾಂತರ ಜಾಲ ಮತ್ತು ಲೈಂಗಿಕ ಕಿರುಕುಳ ಆರೋಪ: ಆರು ಮಂದಿ ಉದ್ಯೋಗಿಗಳ ಬಂಧನ!

Share
ನಾಸಿಕ್
Share

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸಂಸ್ಥೆಯಲ್ಲಿ ಲೈಂಗಿಕ ಶೋಷಣೆ ಮತ್ತು ಬಲವಂತದ ಮತಾಂತರದ ಗಂಭೀರ ಆರೋಪಗಳು ಕೇಳಿಬಂದಿವೆ.

ಕಳೆದ ಎರಡು ಮೂರು ವರ್ಷಗಳಿಂದ ಈ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ 18 ರಿಂದ 25 ವರ್ಷ ವಯಸ್ಸಿನ ಎಂಟು ಮಹಿಳಾ ಉದ್ಯೋಗಿಗಳು ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇದರಲ್ಲಿ ಟೀಮ್ ಲೀಡರ್‌ಗಳು ಮತ್ತು ಇಂಜಿನಿಯರ್‌ಗಳು ಸೇರಿದ್ದಾರೆ.

ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದಲ್ಲದೆ, ನಮಾಜ್ ಮಾಡುವುದು ಮತ್ತು ರೋಜಾ ಇಡುವಂತೆ ಒತ್ತಾಯಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣವನ್ನು ಬಿಜೆಪಿ ‘ಕಾರ್ಪೊರೇಟ್ ಜಿಹಾದ್’ ಎಂದು ಕರೆದಿದ್ದು, ತನಿಖೆಗಾಗಿ 12 ಸದಸ್ಯರ ವಿಶೇಷ ತನಿಖಾ ದಳವನ್ನು (SIT) ರಚಿಸಲಾಗಿದೆ. ಟಿಸಿಎಸ್ ಸಂಸ್ಥೆಯು ಆರೋಪಿಗಳನ್ನು ಕೆಲಸದಿಂದ ಅಮಾನತುಗೊಳಿಸಿದೆ.

Share

Leave a comment

Leave a Reply

Your email address will not be published. Required fields are marked *