Home ಕ್ರೈಂ ನ್ಯೂಸ್ ಏಳು ವರ್ಷದ ಬಾಲಕಿ ಜೊತೆ ಅಸಭ್ಯ ವರ್ತನೆ: ಸ್ವಯಂಘೋಷಿತ ದೇವಮಾನವನ ವಿರುದ್ಧ ಬಿತ್ತು ಕೇಸ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಏಳು ವರ್ಷದ ಬಾಲಕಿ ಜೊತೆ ಅಸಭ್ಯ ವರ್ತನೆ: ಸ್ವಯಂಘೋಷಿತ ದೇವಮಾನವನ ವಿರುದ್ಧ ಬಿತ್ತು ಕೇಸ್!

Share
ಬಾಲಕಿ
Share

ಬೆಂಗಳೂರು: ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರದ ಮಲ್ಲಿಕಾರ್ಜುನ ಮುತ್ತವ ಎಂಬ ಸ್ವಯಂಘೋಷಿತ ದೇವಮಾನವನ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಏಳು ವರ್ಷದ ಬಾಲಕಿಯನ್ನು ಮಡಿಲಲ್ಲಿ ಕುರಿಸಿಕೊಂಡು ಚುಂಬಿಸುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸೂಚನೆಯಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿಶೇಷವೆಂದರೆ, ಮಹಾರಾಷ್ಟ್ರದ ಸೋಲಾಪುರದವರಾದ ಬಾಲಕಿಯ ಪೋಷಕರೇ ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಅವರು ಇದನ್ನು ಭಕ್ತಿಯ ಪ್ರದರ್ಶನವೆಂದು ಭಾವಿಸಿ ತಪ್ಪು ಎಂದು ಪರಿಗಣಿಸಿರಲಿಲ್ಲ.

ಆದರೆ, ವಿಡಿಯೋದಲ್ಲಿ ಮಗು ಅಸ್ವಸ್ಥಗೊಂಡಿರುವುದು ಸ್ಪಷ್ಟವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಮಕ್ಕಳ ಕಲ್ಯಾಣ ಸಮಿತಿಯು ಕೌನ್ಸೆಲಿಂಗ್ ನಡೆಸಿ ಎಫ್‌ಐಆರ್ ದಾಖಲಿಸಲು ಶಿಫಾರಸು ಮಾಡಿದೆ. ಸದ್ಯ ಯಾದಗಿರಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles