ಹೈದರಾಬಾದ್: ಆಂಧ್ರಪ್ರದೇಶದಲ್ಲಿ ತನ್ನ ಪತಿಯನ್ನೇ ಕೊಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ಬಿಂಬಿಸಲು ಹೋದ ಆತನ ಪತ್ನಿ ಮತ್ತು ಪ್ರಿಯಕರ ಬಂಧಿಸಲ್ಪಟ್ಟಿದ್ದಾರೆ.
ತನ್ನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಾಗ ಪತಿ ಆಕ್ರೋಶಗೊಂಡಿದ್ದ. ಪ್ರಿಯಕರನ ಜೊತೆಗಿನ ಅಕ್ರಮ ಸಂಬಂಧ ಬಿಡುವಂತೆ ಹೇಳಿದ್ದ. ಮಾತ್ರವಲ್ಲ, ಒಂಬತ್ತು ತಿಂಗಳ ಹಿಂದೆ ಆಕೆಯನ್ನು ತನ್ನ ಸ್ವಂತ ಹಳ್ಳಿಗೆ ಸ್ಥಳಾಂತರಿಸಿದ್ದ. ಆದರೂ ದೈಹಿಕವಾಗಿ ಪ್ರಿಯಕರನ ಜೊತೆ ಬೇರ್ಪಟ್ಟಿದ್ದರೂ ಸಹ ಇಬ್ಬರ ನಡುವಿನ ಫೋನ್ ಸಲ್ಲಾಪ, ಆಗಾಗ್ಗೆ ಸಂಬಂಧ ಮುಂದುವರಿದಿತ್ತು.
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಪೊಲೀಸರು, ಆರಂಭದಲ್ಲಿ ರಸ್ತೆ ಅಪಘಾತವೆಂದು ಕಂಡುಬಂದಿದ್ದನ್ನು ತನಿಖೆ ಮಾಡಿದ ನಂತರ ಮೂವರನ್ನು ಬಂಧಿಸಿದ್ದಾರೆ. ಜನವರಿ 16 ರಂದು ನಡೆದ ಘಟನೆಯ ವಿವರವಾದ ವಿಚಾರಣೆಯ ನಂತರ, ಅಧಿಕಾರಿಗಳು ಈ ಪ್ರಕರಣವು ಅಪಘಾತವಲ್ಲ ಪೂರ್ವನಿಯೋಜಿತ ಕೊಲೆ ಎಂದು ಬಹಿರಂಗಪಡಿಸಿದ್ದಾರೆ.
ದೇಗಲ ಚಿನ್ನ ಕೊಲೆಗೀಡಾದ ವ್ಯಕ್ತಿ. ಬಂಧಿತರಲ್ಲಿ ಕೊಂಡಮ್ಮ, ಆತನ ಪತ್ನಿ, ಆಕೆಯ ಪ್ರಿಯಕರ ಅಲಕುಂಟಿ ಗಣೇಶ್ ಮತ್ತು ಗಣೇಶ್ ಸಂಬಂಧಿ ಪಾಲೆಪ್ಪ ಶಿವಕುಮಾರ್ ಬಂಧಿತ ಆರೋಪಿಗಳು.
ತನಿಖಾಧಿಕಾರಿಗಳು ಪ್ರಕರಣದ ಮೂಲವನ್ನು 2024 ರಲ್ಲಿ ಪತ್ತೆಹಚ್ಚಿದ್ದರು. ಚಿನ್ನ ಮತ್ತು ಅವರ ಪತ್ನಿ ದಿನಗೂಲಿ ಕೆಲಸಕ್ಕಾಗಿ ತೆನಾಲಿಗೆ ತೆರಳಿದ್ದರು. ಸ್ಥಳೀಯ ಮೇಸ್ತ್ರಿ ಒಬ್ಬರ ಬಳಿ ಕೆಲಸ ಮಾಡುತ್ತಿದ್ದಾಗ, ಕೊಂಡಮ್ಮಳು ಗಣೇಶ್ ಜೊತೆ ಅಕ್ರಮ ಸಂಬಂಧ ಶುರುವಿಟ್ಟುಕೊಂಡಿದ್ದಳು.
ಚಿನ್ನನಿಗೆ ಈ ಸಂಬಂಧ ಗೊತ್ತಾದಾಗ, ಗಣೇಶ್ ಜೊತೆಗಿನ ಸಂಪರ್ಕವನ್ನು ಕೊನೆಗೊಳಿಸುವಂತೆ ತಿಳಿಹೇಳಿದ್ದಾನೆ. ಒಂಬತ್ತು ತಿಂಗಳ ಮೊದಲು ಅವನು ತನ್ನ ಹೆಂಡತಿಯನ್ನು ತನ್ನ ಸ್ವಂತ ಹಳ್ಳಿಗೆ ಕರೆದುಕೊಂಡು ಹೋಗಿದ್ದ. ದೈಹಿಕವಾಗಿ ಬೇರ್ಪಟ್ಟಿದ್ದರೂ, ವಿಶಾಖಪಟ್ಟಣ ಮತ್ತು ಅನಕಪಲ್ಲಿಯಂತಹ ಹತ್ತಿರದ ಪಟ್ಟಣಗಳಿಗೆ ಹೋಗಿ ಎಂಜಾಯ್ ಮಾಡುತ್ತಿದ್ದರು. ಫೋನ್ ನಲ್ಲೇ ಸಲ್ಲಾಪ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನಾ ಕೊಂಡಮ್ಮನಿಗೆ ವಿಚ್ಛೇದನ ನೀಡಲು ನಿರಾಕರಿಸಿದ್ದ. ಆಗ ರೂಪಿಸಿದ್ದೇ ಕೊಲೆ ಸಂಚು. ಕೊಂಡಮ್ಮ ಮತ್ತು ಗಣೇಶ್ ಶಿವಕುಮಾರ್ ಜೊತೆ ಸೇರಿ ಅವನನ್ನು ಕೊಲ್ಲಲು ಸಂಚು ರೂಪಿಸಿದಳು.
ಜನವರಿ 14 ರ ರಾತ್ರಿ, ಕೊಂಡಮ್ಮ ಚಿನ್ನನ ಚಲನವಲನಗಳ ಬಗ್ಗೆ ಸಹ-ಸಂಚುಕೋರರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಅವನು ತನ್ನ ಮೋಟಾರ್ ಸೈಕಲ್ನಲ್ಲಿ ಹತ್ತಿರದ ಹಳ್ಳಿಗೆ ಪ್ರಯಾಣಿಸುತ್ತಿದ್ದಾಗ, ಗಣೇಶ್ ಮತ್ತು ಶಿವಕುಮಾರ್ ಹೊಂಚು ಹಾಕಿ
ಅವನನ್ನು ಹಿಡಿದು ಹತ್ತಿರದ ತೇಗದ ತೋಟಕ್ಕೆ ಎಳೆದೊಯ್ದಿದ್ದಾರೆ. ಪೊಲೀಸರು ಹೇಳುವಂತೆ, ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ, ನಂತರ ಮೃತದೇಹವನ್ನು ರಸ್ತೆಬದಿಯಲ್ಲಿ ಮೋಟಾರ್ ಸೈಕಲ್ ಪಕ್ಕದಲ್ಲಿ ಇರಿಸಿ ಸಾವನ್ನು ಅಪಘಾತ ಎಂದು ಬಿಂಬಿಸಿದ್ದರು.





Leave a comment