Home ಕ್ರೈಂ ನ್ಯೂಸ್ ದಾವಣಗೆರೆಯಲ್ಲಿ ಪೂಜಾ ಸಾಮಗ್ರಿ ಪೂರೈಸಿದ್ದ ಬಾಕಿ ಹಣ ಕೇಳಿದ್ದಕ್ಕೆ ತ್ರಿಶೂಲದಿಂದ ಚುಚ್ಚಿ ಹತ್ಯೆ ಯತ್ನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಪೂಜಾ ಸಾಮಗ್ರಿ ಪೂರೈಸಿದ್ದ ಬಾಕಿ ಹಣ ಕೇಳಿದ್ದಕ್ಕೆ ತ್ರಿಶೂಲದಿಂದ ಚುಚ್ಚಿ ಹತ್ಯೆ ಯತ್ನ!

Share
ದಾವಣಗೆರೆ
Share

ದಾವಣಗೆರೆ: ಪೂಜಾ ಸಾಮಗ್ರಿ ಪೂರೈಕೆ ಮಾಡಿದ್ದ ಬಾಕಿ ಹಣ ಕೇಳಿದ್ದಕ್ಕೆ ತ್ರಿಶೂಲದಿಂದ ಚುಚ್ಚಿ ಹತ್ಯೆಗೆ ಯತ್ನಿಸಿದ ಘಟನೆ ನಗರದ ಕೆ. ಆರ್. ಮಾರುಕಟ್ಟೆಯಲ್ಲಿ ನಡೆದಿದೆ.

READ ALSO THIS STORY: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಹಕ್ಕಿದೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಶಿವಗಂಗಾ ಬಸವರಾಜ್

ಗಾಯಗೊಂಡ ವ್ಯಕ್ತಿಯನ್ನು ಗಣೇಶ್ ಎಂದು ಗುರುತಿಸಲಾಗಿದೆ. ತ್ರಿಶೂಲದಿಂದ ಚುಚ್ಚಿದ ಆರೋಪಿ ಫೈಜಾನ್ ಎಂದು ತಿಳಿದು ಬಂದಿದೆ.

ಫೈಜಾನ್ ಅಂಗಡಿಗೆ ರಾತ್ರಿ ವೇಳೆ ಬಂದಿದ್ದ ಗಣೇಶ್ ಪೂಜಾ ಸಾಮಗ್ರಿ ಪೂರೈಸಿದ್ದ ಬಾಕಿ ಹಣ ಇದೆ. ಈಗಲೇ ನೀಡಿ ಎಂದು ಕೇಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಫೈಜಾನ್ ಅಲ್ಲಿಯೇ ಇದ್ದ ತ್ರಿಶೂಲ ತೆಗೆದುಕೊಂಡು ಗಣೇಶ್ ಗೆ ಚುಚ್ಚಿದ್ದಾನೆ. ಗಾಯಗೊಂಡ ಗಣೇಶ್ ಅವರನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles