Site icon Kannada News-suddikshana

Cricket World Cup: ಭಾರತದಲ್ಲಿ ಇಂದಿನಿಂದ ವಿಶ್ವಕಪ್ ಕ್ರಿಕೆಟ್: ಎಷ್ಟು ತಂಡಗಳು ಪಾಲ್ಗೊಳ್ಳಲಿವೆ… ಎಷ್ಟು ಪಂದ್ಯಗಳು ನಡೆಯುತ್ತವೆ… ಪಂದ್ಯಗಳು ಯಾವ್ಯಾವಾಗ ನಡೆಯುತ್ತೆ…?

SUDDIKSHANA KANNADA NEWS/ DAVANAGERE/ DATE:05-10-2023

ಕ್ರಿಕೆಟ್ ವಿಶ್ವಕಪ್ 2023(Cricket World Cup): ಇಂದಿನಿಂದ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಗಲಿದೆ. ICC ಕ್ರಿಕೆಟ್ ಪುರುಷರ ವಿಶ್ವಕಪ್ 2023ಕ್ಕೆ ಭಾರತ ಸಜ್ಜಾಗಿದೆ.

Read Also This Story:

ಎಲ್ಐಸಿ(Life Insurance Corporation)ಗೆ ಆದಾಯ ತೆರಿಗೆ ಇಲಾಖೆಯು ಅಷ್ಟೊಂದು ದಂಡ ವಿಧಿಸಿದ್ಯಾಕೆ…?

ವಿಶ್ವ ಕಪ್ 2023 ಟ್ರೋಫಿಗಾಗಿ ಒಟ್ಟು 10 ತಂಡಗಳು ಸ್ಪರ್ಧಿಸಲಿವೆ ಮತ್ತು ಬಹು ನಿರೀಕ್ಷಿತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೃಹತ್ ನಗದು ಬಹುಮಾನ ನೀಡಲಾಗುತ್ತದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಮತ್ತು ಲಕ್ನೋದ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ (BRSBAVE) ಕ್ರಿಕೆಟ್ ಸ್ಟೇಡಿಯಂ ಸೇರಿದಂತೆ ಭಾರತದ 10 ಮೈದಾನಗಳಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಒಟ್ಟು 48 ಪಂದ್ಯಗಳು ನಡೆಯಲಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ವರ್ಷದ ರನ್ನರ್ ಅಪ್ ನ್ಯೂಜಿಲೆಂಡ್ ವಿರುದ್ಧ ಸೆಣಸುವ ಮೂಲಕ ಪಂದ್ಯಾವಳಿಯು ಕಿಕ್‌ಸ್ಟಾರ್ಟ್ ಆಗಲಿದೆ. ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿ ಕೂಡ ಅಕ್ಟೋಬರ್ 15 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಎಲ್ಲಾ ವಿಶ್ವಕಪ್ 2023 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ICC Men’s World Cup 2023 schedule

Exit mobile version