Site icon Kannada News-suddikshana

ಪಾಕಿಸ್ತಾನದ ಪಂದ್ಯ ವೀಕ್ಷಿಸಲು ಬರದ ಪ್ರೇಕ್ಷಕರು- ಟಿಕೆಟ್ ಬೆಲೆ ಕೇವಲ15 ರೂ.

ಕರಾಚಿ: ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 21 ರಿಂದ ಆರಂಭವಾಗಲಿದೆ. ಆದರೆ ತವರಿನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ ಎದುರಾಗಬಹುದು ಎಂಬ ಆತಂಕದಲ್ಲಿ ಪಾಕ್ ಕ್ರಿಕೆಟ್ ಮಂಡಳಿ ಇದೆ.

ಕಳೆದ ಒಂದು ವರ್ಷದಿಂದ ಪಾಕಿಸ್ತಾನ್ ಆಟಗಾರರ ಪಂದ್ಯವನ್ನು ವೀಕ್ಷಿಸಲು ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬಂದಿಲ್ಲ. ಹೀಗಾಗಿಯೇ ಇದೀಗ ಟೆಸ್ಟ್ ಪಂದ್ಯಗಳ ಟಿಕೆಟ್ ದರವನ್ನು ಕೇವಲ 15 ರೂ.ಗೆ ಇಳಿಕೆ ಮಾಡಿದೆ.ಕರಾಚಿಯಲ್ಲಿ ನಡೆಯಲಿರುವ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಪಂದ್ಯದ ಟಿಕೆಟ್ ದರವನ್ನು ಘೋಷಿಸಲಾಗಿದೆ. ಇಲ್ಲಿ ಸಾಮಾನ್ಯ ಟಿಕೆಟ್ ಕೇವಲ 15 ರೂ. (PKR 50 ರೂ.) ಗೆ ಮಾರಾಟ ಮಾಡಲಾಗುತ್ತಿದೆ.

2024ರ ಪಾಕಿಸ್ತಾನ್ ಸೂಪರ್ ಲೀಗ್ ವೇಳೆ ಸ್ಟೇಡಿಯಂಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದುಕಂಡಿತ್ತು. ಫೈನಲ್‌ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ನಿರೀಕ್ಷಿತ ಮಟ್ಟದಲ್ಲಿ ಆಗಮಿಸಿರಲಿಲ್ಲ. ಇನ್ನು ಏಷ್ಯಾಕಪ್ ಕೂಡ ಖಾಲಿ ಸ್ಟೇಡಿಯಂಗೆ ಸಾಕ್ಷಿಯಾಗಿತ್ತು.

ಹೀಗಾಗಿಯೇ ಟೆಸ್ಟ್ ಪಂದ್ಯಗಳಿಗೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಆತಂಕ ಪಿಸಿಬಿ ಎದುರಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು 50 ಪಿಕೆ ರೂ.​ಗೆ (ಭಾರತದ 15 ರೂ.) ಟಿಕೆಟ್​ಗಳನ್ನು ಮಾರಾಟ ಮಾಡಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಿದೆ.

Exit mobile version