Home ದಾವಣಗೆರೆ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಕುಕ್ಕಿಂಗ್ ಪ್ರಾವೀಣ್ಯತಾ ಪದಕ ಪಡೆಯಲು “ಕುಕಿಂಗ್ ಆಕ್ಟಿವಿಟಿ ”
ದಾವಣಗೆರೆನವದೆಹಲಿಬೆಂಗಳೂರು

ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಕುಕ್ಕಿಂಗ್ ಪ್ರಾವೀಣ್ಯತಾ ಪದಕ ಪಡೆಯಲು “ಕುಕಿಂಗ್ ಆಕ್ಟಿವಿಟಿ ”

Share
Share

ದಾವಣಗೆರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆ 121 ಸ್ಕೌಟ್ ಮತ್ತು 66 ಗೈಡ್ಸ್ ವಿದ್ಯಾರ್ಥಿಗಳಿಗೆ ಕುಕ್ಕಿಂಗ್ ಪ್ರಾವಿಣ್ಯತಾ ಪದಕ ಪಡೆಯಲು “ಕುಕಿಂಗ್ ಆಕ್ಟಿವಿಟಿ ” ಹಮ್ಮಿಕೊಳ್ಳಲಾಗಿತ್ತು.

ರೇಖಾರಾಣಿ ಕೆ. ಎಸ್. (ಎಡಿಸಿ ) ಮಕ್ಕಳಿಗೆ ಶುಭಹಾರೈಸಿ ಹಸಿರು ನಿಶಾನೆ ತೋರಿಸುವುದರ ಮೂಲಕ ವಿದ್ಯಾರ್ಥಿಗಳ ಫೂಟ್ ಹೈಕ್ ಗೆ ಚಾಲನೆ ನೀಡಿದರು.

ಹೈಕಿಂಗ್ ಮೂಲಕ ಆನಗೋಡಿನ ಸಿದ್ಧೇಶ್ವರ ಪ್ರೌಢಶಾಲಾ ಆವರಣ ತಲುಪಿದ ವಿದ್ಯಾರ್ಥಿಗಳು ಧ್ವಜಾರೋಹಣದ ಬಳಿಕ ತಮ್ಮ ತಮ್ಮ ದಳಗಳ ಪ್ಯಾಟ್ರೋಲ್ ಗುಂಪುಗಳಲ್ಲಿ ಸೌದೆ ಒಲೆಗಳ ಮೇಲೆ ಅವಲಕ್ಕಿ, ಮಂಡಕ್ಕಿ, ಈರುಳ್ಳಿ ಬಜ್ಜಿ, ಮೆಣಸಿನಕಾಯಿ,
ಚಪಾತಿ ಬೆಂಡೆಕಾಯಿ ಪಲ್ಯ, ತಾಳಿಪಟ್ಟು, ಪನ್ನೀರ್ ರೋಲ್, ಗೋಬಿ ಮಂಚೂರಿ, ಪುದೀನಾ ರೈಸ್, ಶಾವಿಗೆ ಪಾಯಸ, ಶರಬತ್ತು, ಬಾದಾಮಿ ಹಾಲು, ಟೀ, ಕಾಫಿ ಸೇರಿದಂತೆ ಇನ್ನಿತರೆ ಖಾದ್ಯಗಳನ್ನು ತುಂಬಾ ರುಚಿಕರವಾಗಿ ಉತ್ಸಾಹದಿಂದ ತಯಾರಿಸಿದರು.

ಅಡುಗೆ ಮಾಡುವ ಕೌಶಲಗಳನ್ನು ತಿಳಿದುಕೊಂಡರು. ನಂತರ ಆನಗೋಡಿನ ಬಳಿ ಇರುವ ಶಿಕ್ಷಣ ಶಿಲ್ಪಿ ಎಂ. ಎಸ್. ಶಿವಣ್ಣ ಶಿಲಾ ಸ್ಮಾರಕದ ಬಳಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂಧರ್ಭದಲ್ಲಿ ಸ್ಕೌಟ್ ಮಾಸ್ಟರ್ಸ್ ಗಳಾದ ಶ್ರೀನಿವಾಸ್ ಎನ್ ಎಲ್ (ಹೆಚ್ ಡಬ್ಲ್ಯೂ ಬಿ ), ಆರೋಗ್ಯಮ್ಮ(ಹೆಚ್ ಡಬ್ಲ್ಯೂ ಬಿ), ತನುಜಾ (ಅಡ್ವಾನ್ಸ್ ಡ್ ) ಹಾಗೂ ಗೈಡ್ ಕ್ಯಾಪ್ಟನ್ಸ್ ಸುನಿ ತಾ ಕೆ ಎಂ (ಹೆಚ್ ಡಬ್ಲ್ಯೂ ಬಿ),ಸುನಿತಾ ಎಂ, ಗೀತಾ ಪಟ್ಟಣಶೆಟ್ಟಿ (ಅಡ್ವಾನ್ಸ್ ಡ್ ) ಅವರು ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಎಂ,ಸಿ (ಹೆಚ್ ಡಬ್ಲ್ಯೂ ಬಿ) ಅವರು ಚಟುವಟಿಕೆಗಳನ್ನು ಉತ್ತಮವಾಗಿ ಸಂಘಟಿಸಿದರು.

Share

Leave a comment

Leave a Reply

Your email address will not be published. Required fields are marked *