Site icon Kannada News-suddikshana

SPECIAL STORY: ಚಾಣಾಕ್ಷ ನಾಯಕ ಕಾಂಗ್ರೆಸ್ ಕಟ್ಟಾಳು “ಗಜೇಂದ್ರ” ಜಗನ್ನಾಥ

ಚಾಣಾಕ್ಷ

ರಾಜಕಾರಣದಲ್ಲಿ ಸಂಘಟನೆ ಮುಖ್ಯ. ಯಾವುದೇ ಯಶಸ್ವಿ ಆಗಬೇಕಾದರೂ ಸಂಘಟನೆ ಬೇಕು. ಇದಕ್ಕೆ ಚತುರತೆ ಮತ್ತು ಚಾಣಾಕ್ಷತೆ ಬೇಕು. ಈ ಎರಡೂ ವಿಚಾರ ಮೈಗೂಡಿಸಿಕೊಂಡಿರುವ ದಾವಣಗೆರೆಯ ಭಗತ್ ಸಿಂಗ್ ನಗರದ ಕಾಂಗ್ರೆಸ್ ಯುವ ಮುಖಂಡ ಗಜೇಂದ್ರ ಜಗನ್ನಾಥ ಅವರದ್ದು ವಿಶಿಷ್ಟ ವ್ಯಕ್ತಿತ್ವ. ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ, ಪೂರ್ಣಗೊಳಿಸುವವರೆಗೆ ವಿರಮಿಸದ ಯುವನಾಯಕ. ಹಾಗಾಗಿಯೇ ಎಲ್ಲರ ಸೂಜಿಗಲ್ಲಿನಂತೆ ಸೆಳೆಯುವ ಯುವ ನಾಯಕ. ಚಾಣಾಕ್ಷ ಸಂಘಟನಕಾರ.

ಗಜೇಂದ್ರ ಜಗನ್ನಾಥ ಅವರ ಕುಟುಂಬವೇ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಲೇ ಬರುತ್ತದೆ. ಇವರ ಮುತ್ತಜ್ಜ ಗುಡದಪ್ಪ ಹೊಟೇಲ್ ಅಂತಾನೇ ಪ್ರಖ್ಯಾತಿ ಗಳಿಸಿದವರು.

ಗುಡದಪ್ಪ ಅವರೂ ಸಹ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಇದ್ದವರು. ಅವರ ತಾಯಿ ಸಹ ಇದೇ ದಾರಿಯಲ್ಲಿ ನಡೆದವರು. ಪುತ್ರ ಗಜೇಂದ್ರ ಜಗನ್ನಾಥ ಅವರೂ ಇದೇ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಪ್ರಾಥಮಿಕ, ಪ್ರೌಢ ಶಿಕ್ಷಣ ದಾವಣಗೆರೆಯ ಶ್ರೀ ಸಿದ್ದಗಂಗಾ ಶಾಲೆಯಲ್ಲಿ ಕಲಿತರು. ಅವರು ಎಂಜಿನಿಯರಿಂಗ್ ಪದವೀಧರರು.

ಕುಟುಂಬವೇ ಕಾಂಗ್ರೆಸ್:

ಭಗತ್ ಸಿಂಗ್ ನಗರದ ದಿವಂಗತ ಆರ್. ಜಗನ್ನಾಥ ಮತ್ತು ಪುಷ್ಪಲತಾ ದಂಪತಿಯ ಪುತ್ರ. ಕಳೆದ ಹತ್ತು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಲೇ ಇದ್ದಾರೆ. ಕೆಲವರು ಪ್ರಚಾರಕ್ಕೆಂದು ಓಡಾಡುತ್ತಾರೆ, ಆಮೇಲೆ ಕಣ್ಮರೆ ಆಗಿ ಬಿಡುತ್ತಾರೆ. ಇದಕ್ಕೆ ಅಪವಾದ ಗಜೇಂದ್ರ ಜಗನ್ನಾಥ.

ಈ ಸುದ್ದಿಯನ್ನೂ ಓದಿ: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಮಾರ್ಗಸೂಚಿಗಳ ಹೊರಡಿಸಿದ ಸುಪ್ರೀಂಕೋರ್ಟ್

ಪಕ್ಷದ ಕಾರ್ಯಕ್ರಮಗಳಾಗಲೀ, ಸಭೆಗಳಾಗಲೀ, ಹೋರಾಟಗಳಾಗಲೀ ಸದಾ ಲವಲವಿಕೆಯಿಂದ ಭಾಗವಹಿಸುವ ಗಜೇಂದ್ರ ಅವರ ಕಾರ್ಯವೈಖರಿ ಎಂದರೆ ಎಲ್ಲರಿಗೂ ಅಚ್ಟುಮೆಚ್ಚು.

ರಾಜಕಾರಣ ಪ್ರವೇಶಿಸಬೇಕೆಂಬ ಕನಸು ಬಂದಿರುವುದರಲ್ಲಿ ಹೊಸತೇನಲ್ಲ. ತಾತ, ತಂದೆ, ಅಮ್ಮ ಸಹ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಇದ್ದವರು. ತಂದೆ ಜಗನ್ನಾಥ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಆಪ್ತರು. ತಾಯಿ ಪುಷ್ಪಲತಾ ಅವರು 2015ರಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಜಗನ್ನಾಥ ಅವರು ಅಪಘಾತದಲ್ಲಿ ತೀರಿಕೊಂಡ ಬಳಿಕ ತಾಯಿಯೂ ಪಕ್ಷದಲ್ಲಿ ಗುರುತಿಸಿಕೊಂಡರು. ಪಾಲಿಕೆ ಸದಸ್ಯರಾಗಿ ಸಾಕಷ್ಟು ಸೇವೆ ಸಲ್ಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ತಂದೆ ಜಗನ್ನಾಥರ ಹಾದಿಯಲ್ಲಿ ಗಜೇಂದ್ರ:

ಇನ್ನು ತಂದೆ ಜಗನ್ನಾಥ ಮತ್ತು ತಾಯಿ ಪುಷ್ಪಲತಾ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ. ದಾವಣಗೆರೆ ಜಿಲ್ಲಾ ಒಬಿಸಿ ಘಟಕದ ಉಪಾಧ್ಯಕ್ಷರಾಗಿ ಜಗನ್ನಾಥ ಅವರು ಕೆಲಸ ಮಾಡಿದ್ದರು. ತಾಯಿ ಪುಷ್ಪಲತಾ ಅವರು ಸಂಘಟನಾ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿಸಿದ್ದರು. ಈಗ ಪುತ್ರ ಗಜೇಂದ್ರ ಅವರೂ ಪಕ್ಷ ವಹಿಸಿದ ಎಲ್ಲಾ ಜವಾಬ್ದಾರಿಗಳು, ಕೊಟ್ಟ ಕೆಲಸ ಸಮರ್ಥವಾಗಿ ನಿಭಾಯಿಸಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದ ಯುವ ನಾಯಕ. ಭಗತ್ ಸಿಂಗ್ ನಗರದಲ್ಲಿದ್ದರೂ ಪಾದರಸದಂತೆ ಓಡಾಟ, ಕೆಲಸ ಪೂರ್ಣಗೊಳಿಸುವವರೆಗೆ ವಿರಾಮ ನೀಡದೇ ಕೆಲಸ ನಿರ್ವಹಿಸುವ ಪರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಕೊರೊನಾ ಸಂಕಷ್ಟದ ಸಮಯದಲ್ಲಿ…

ಇಡೀ ವಿಶ್ವವೇ ಕೊರೊನಾ ಸಂಕಷ್ಟದಲ್ಲಿ ನಲುಗಿ ಹೋಗಿತ್ತು. ಇಂದಿಗೂ ನೆನಪು ಮಾಡಿಕೊಂಡರೂ ಕರಾಳ ಘಟನೆ ಮರುಕಳಿಸುತ್ತಲೇ ಇರುತ್ತದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರಿಗೂ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದವರು. ಊಟ ಇಲ್ಲದವರಿಗೆ ಊಟ, ಕೊರೊನಾ ಲಸಿಕೆ, ಮಾಸ್ಕ್ ಸೇರಿದಂತೆ ಎಷ್ಟೋ ಮಂದಿಗೆ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಿದರು. ಎಲ್ಲಿಯೂ ಹೇಳಿಕೊಳ್ಳದೇ ಸೇವೆ ಮಾಡಿದ ಗಜೇಂದ್ರ ಜಗನ್ನಾಥ ಅವರು ಎಲೆಮರೆಯ ಕಾಯಿಯಂತೆ ಸೇವೆ ಮಾಡಿದವರು. ಇಂದಿಗೂ ಸೇವೆ ಮಾಡಿದ್ದು ಪ್ರಚಾರಕ್ಕಲ್ಲ, ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ ತೃಪ್ತಿ ಸಿಕ್ಕಿದೆ ಅಂತಾರೆ.

ನಿರ್ವಹಿಸಿದ ಜವಾಬ್ದಾರಿಗಳು:

ವಿಧಾನಸಭೆ, ಎಂಪಿ ಚುನಾವಣೆಯಲ್ಲಿ ಶ್ರಮ:

2013, 2018, 2023ರ ವಿಧಾನಸಭೆ ಚುನಾವಣೆಯಲ್ಲಿ ತನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಗಜೇಂದ್ರ ಜಗನ್ನಾಥ ಅವರು, ಭಗತ್ ಸಿಂಗ್ ನಗರ, ಕೆಟಿಜೆ ನಗರದಲ್ಲಿ ಚಿರಪರಿಚಿತ ಹೆಸರು. ಕಳೆದ ಲೋಕಸಭೆ ಚುನಾವಣೆಯಲ್ಲಿಯೂ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ ಪ್ರಚಾರ ಮಾಡಿ ತನಗೆ ವಹಿಸಿದ್ದ ವಾರ್ಡ್ ಗಳ ಬೂತ್ ಗಳಲ್ಲಿ ಮುನ್ನಡೆ ಕೊಡಿಸಿದ ಶ್ರೇಯವೂ ಗಜೇಂದ್ರ ಜಗನ್ನಾಥ್ ಅವರಿಗೆ ಸಲ್ಲುತ್ತದೆ.

ಎಸ್. ಎಸ್. ಮಲ್ಲಿಕಾರ್ಜುನ್ ಕುರಿತ ಕಾರ್ಯಕ್ರಮಗಳು:

ಗಜೇಂದ್ರ ಜಗನ್ನಾಥ ಅವರು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಆಪ್ತರು. ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಗಜೇಂದ್ರ ಅವರು ಸಮಾಜ ಸೇವೆ, ರಕ್ತದಾನ, ಬಡ ವಿದ್ಯಾರ್ಥಿಗಳಿಗೆ ನೆರವು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಎಸ್ ಎಸ್ ಎಂ ಜನ್ಮದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮ ಆಯೋಜಿಸಿ ಜನಮನ ಸೆಳೆದಿದ್ದಾರೆ.

ಬಡವರಿಗೆ ಸಹಾಯ:

ಇನ್ನು ಬಡವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಬಡ ಮಕ್ಕಳ ಓದಿಗೆ ಕೈಯಲ್ಲಾದಷ್ಟು ಸಹಾಯ ಮಾಡಿ ವಿದ್ಯಾರ್ಜನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಇದೇ ರೀತಿಯಲ್ಲಿ ಸಮಾಜ ಸೇವೆ, ಬಡವರ ಮಕ್ಕಳಿಗೆ ಹೆಲ್ಪ್ ಮಾಡಿರುವ ಗಜೇಂದ್ರ ಅವರ ವ್ಯಕ್ತಿತ್ವ ಎಲ್ಲರನ್ನೂ ಸೆಳೆಯುವಂಥದ್ದು. ಸ್ನೇಹ ಜೀವಿಯೂ ಆಗಿರುವ ಗಜೇಂದ್ರ ಜಗನ್ನಾಥ ಅವರು ಗಣೇಶೋತ್ಸವ ಸೇರಿದಂತೆ ವಾರ್ಡ್ ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯುವಕರು, ಹಿರಿಯರು ಸೇರಿದಂತೆ ಎಲ್ಲರ ಮನ ಗೆದ್ದು ಸಂಘಟನಾ ಚತುರ ಎನಿಸಿಕೊಂಡಿದ್ದಾರೆ.

ಅಖಿಲ ಭಾರತ ವಿಶ್ವಕರ್ಮ ಪರಿಷತ್ ವತಿಯಿಂದ ಸಮಾಜ ಸೇವೆಗೆ ಕೊಡಮಾಡಲ್ಪಟ್ಟ ವಿಶ್ವ ನೇಕಾರ ಬಂಧು ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಗಜೇಂದ್ರ ಜಗನ್ನಾಥ ಅವರನ್ನು ಗೌರವಿಸಿ ಸನ್ಮಾನಿಸಿವೆ.

ಕುಟುಂಬದವರು, ತಾಯಿ, ಪತ್ನಿ ಸಹಕಾರ:

ಇನ್ನು ಗಜೇಂದ್ರ ಜಗನ್ನಾಥ ಅವರು ಉದ್ಯಮಿಯಾಗಿ ಕೆಲಸ ನಿರ್ವಹಿಸುತ್ತಾರೆ. ಸಹೋದರ ಚಂದ್ರಶೇಖರ್, ಅಕ್ಕ ಜಯಲಕ್ಷ್ಮೀ ಮತ್ತು ಅವರ ಪತಿ ಗಜೇಂದ್ರ ಜಗನ್ನಾಥರ ರಾಜಕೀಯ ಏಳಿಗೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಎಲ್ಲಾ ರೀತಿಯ ಸಹಕಾರವನ್ನೂ ನೀಡುತ್ತಿದ್ದಾರೆ.

ರಾಜಕಾರಣಕ್ಕೆ ಸಹೋದರ, ತಾಯಿ, ಪತ್ನಿಯ ಸಹಕಾರವೂ ಇದೆ. ತಂದೆ ತಾಯಿಯಂತೆ ರಾಜಕಾರಣದಲ್ಲಿ ಛಾಪು ಮೂಡಿಸುತ್ತಿರುವ ಜೊತೆಗೆ ಬೇರೆ ಕ್ಷೇತ್ರಗಳಲ್ಲಿಯೂ ಪ್ರಾಮಾಣಿಕವಾಗಿ ದುಡಿಯುವ ಗುಣ, ಅಶಕ್ತರಿಗೆ ಸಹಾಯ, ಬಡವರ ಬಗ್ಗೆ ಇರುವ ಕಾಳಜಿ, ಮಾನವೀಯ ಗುಣಗಳು ಪ್ರತಿಯೊಬ್ಬರನ್ನು ಸೆಳೆಯುತ್ತಿದೆ. ಗಜೇಂದ್ರ ಅವರ ರಾಜಕಾರಣ, ಉದ್ಯಮ ಸೇರಿದಂತೆ ಎಲ್ಲಾ ರೀತಿಯ ಕಾರ್ಯಗಳಿಗೆ ಪತ್ನಿ ರೋಹಿಣಿ ಮತ್ತು ತಾಯಿ ಪುಷ್ಪಲತಾ ಅವರ ಸಹಕಾರ ಇದೆ ಎನ್ನುತ್ತಾರೆ ಗಜೇಂದ್ರ ಅವರು.

28, 37ನೇ ವಾರ್ಡ್ ಆಕಾಂಕ್ಷಿ:

ಕುಟುಂಬವೇ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದೆ. ಇನ್ನು ತಾಯಿ ನಾಮನಿರ್ದೇಶಿತ ಪಾಲಿಕೆ ಸದಸ್ಯರಾಗಿದ್ದ ವೇಳೆ ಓಡಾಡಿದ್ದ ಗಜೇಂದ್ರ ಜಗನ್ನಾಥ ಅವರು ಪಾಲಿಕೆ ಸದಸ್ಯರಾಗಿ ಜನರ ಕಣ್ಣೀರು ಒರೆಸುವ, ಸಮಾಜ ಸೇವೆ ಮಾಡುವ ಉದ್ದೇಶ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ 28 ಮತ್ತು 27ನೇ ವಾರ್ಡ್ ನಿಂದ ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಆಕಾಂಕ್ಷಿ ಆಗಿದ್ದಾರೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ. ಅವಕಾಶ ಕೊಟ್ಟರೆ ನಿಭಾಯಿಸುತ್ತೇನೆ ಎನ್ನುತ್ತಾರೆ.

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ರಾಜಕೀಯ ಜಾಣ್ಮೆ, ಎಸ್. ಎಸ್. ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಪರ ಕಾರ್ಯಗಳು, ರಾಜಕೀಯದ ಪಟ್ಟುಗಳು, ದಾವಣಗೆರೆ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವ ನಾಯಕರು ನಮಗೆಲ್ಲರಿಗೂ ಆದರ್ಶ ಮತ್ತು ದಾರಿದೀಪ.

ಅವರ ಆಶೀರ್ವಾದ ಇದ್ದರೆ ಪಾಲಿಕೆ ಚುನಾವಣೆಗೆ ಸ್ಪರ್ಧೆ ಮಾಡುವ ಇಚ್ಚೆ ಹೊಂದಿದ್ದೇನೆ. ಮೊದಲಿನಿಂದಲೂ ರಾಜಕಾರಣದಲ್ಲಿ ಆಸಕ್ತಿ ಇದ್ದು ಅವಕಾಶ ಸಿಗುವ ನಂಬಿಕೆಯೂ ಇದೆ ಎನ್ನುತ್ತಾರೆ ಗಜೇಂದ್ರ ಜಗನ್ನಾಥ ಅವರು.

Exit mobile version