SUDDIKSHANA KANNADA NEWS/DAVANAGERE/DATE:12_12_2025
ದಾವಣಗೆರೆ: ಸಾಮಾಜಿಕ ಕಾರ್ಯಕರ್ತ ಹಾಗೂ ಜೆಡಿಎಸ್ ನಾಯಕ ಟಿ. ಅಸ್ಗರ್ ಹತ್ಯೆಗೆ ಯತ್ನಿಸಿದ್ದ ಆರೋಪಿಗೆ ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ನಾಯಕಿ ಕಂ ನಟಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಅವರಿಗೆ ದಾವಣಗೆರೆ ನಾಲ್ಕನೇ ಜೆಎಂಎಫ್ ಸಿ ಹೆಚ್ಚುವರಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
READ ALSO THIS STORY: ಹೊಸ ರೇಷನ್ ಕಾರ್ಡ್ ಅರ್ಜಿ: ಯಾರು ಅರ್ಹರು? ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕೆಂಬ ಮಹತ್ವದ ಮಾಹಿತಿ
ದಾವಣಗೆರೆ ಹಳೇಪೇಟೆಯಲ್ಲಿ ನವೆಂಬರ್ 10ರಂದು ಟಿಪ್ಪು ಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ಬರುವಾಗ ಕಾಂಗ್ರೆಸ್ ಮುಖಂಡ ಖಾಲಿದ್ ಪೈಲ್ವಾನ್ ಚಾಕುವಿನಿಂದ ಹಲ್ಲೆ ನಡೆಸಿದ್ದ. ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಅವರು ಖಾಲಿದ್ ಪೈಲ್ವಾನ್ ಗೆ ತಪ್ಪಿಸಿಕೊಳ್ಳಲು ಹಾಗೂ ಉಳಿದುಕೊಳ್ಳಲು ಆಶ್ರಯ ನೀಡಿದ ಆರೋಪದ ಮೇರೆಗೆ ಆಜಾದ್ ನಗರ ಪೊಲೀಸರು ಬಂಧಿಸಿದ್ದರು. ಇನ್ನು ಅಸ್ಗರ್ ಅವರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು ಬಂಧನ ಆಗುವ ಮೊದಲೇ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಅವರಿಗೆ ನ್ಯಾಯಾಲಯವು ಜಾಮೀನು ನೀಡಿದೆ.
ಘಟನೆ ಹಿನ್ನೆಲೆ:
ದಾವಣಗೆರೆಯ ಜೆಡಿಎಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಟಿ. ಅಸ್ಗರ್ ಕೊಲೆಗೆ ಯತ್ನಿಸಿದ್ದ ಆರೋಪಿಗೆ ನೆರವು ನೀಡಿದ್ದ ಆರೋಪದ ಮೇರೆಗೆ ನಟಿ ಕಂ ಕಾಂಗ್ರೆಸ್ ನಾಯಕಿಯನ್ನು ಪೊಲೀಸರು ಬಂಧಿಸಿದ್ದರು. ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ನಾಯಕಿ ಹಾಗೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಸವಿತಾ ಮಲ್ಲೇಶ್ ನಾಯ್ಕ್ ಬಂಧಿತರು. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಲು ಯತ್ನಿಸಿದ್ದ ರೌಡಿಶೀಟರ್ ಗೆ ಸಹಕಾರ ನೀಡಿದ್ದು ಖಚಿತವಾದ ಕಾರಣಕ್ಕೆ ಬಂಧಿಸಲಾಗಿತ್ತು.
ಚಾಕುವಿನಿಂದ ಹಲ್ಲೆಗೊಳಗಾಗಿದ್ದ ಅಸ್ಗರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಅಸ್ಗರ್ ಕೊಲಗೆ ಯತ್ನಿಸಿದ ಆರೋಪಿ ಖಾಲೀದ್ ಪೈಲ್ವಾನ್ ಗೆ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಸಹಾಯ ಮಾಡಿದ್ದು ತನಿಖೆಯಿಂದ ಗೊತ್ತಾಗಿತ್ತು. ಆಶ್ರಯ ನೀಡಿದ್ದಲ್ಲದೇ, ಹಣಕಾಸಿನ ನೆರವು
ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಸವಿತಾ ಮಲ್ಲೇಶ್ ನಾಯ್ಕ್ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಟಿಕೆಟ್ ಬಯಸಿದ್ದರು. ಕೊನೆ ಹಂತದವರೆಗೂ ಪ್ರಯತ್ನ ಮಾಡಿದ್ದರು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಕೆ. ಎಸ್. ಬಸವಂತಪ್ಪರಿಗೆ ಟಿಕೆಟ್ ನೀಡಿತ್ತು. ಇದರಿಂದ ಬೇಸರಗೊಂಡು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು. ಬಳಿಕ ಮತ್ತೆ ಕಾಂಗ್ರೆಸ್ ಪಕ್ಷ ಸೇರಿದ್ದರು.
ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದರು. ಪ್ರತಿಭಟನೆ, ಸಭೆ ಸೇರಿದಂತೆ ಆಗಾಗ್ಗೆ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೊಲೆ ಯತ್ನ ಪ್ರಕರಣದಲ್ಲಿ
ಆರೋಪಿಗೆ ಸಹಾಯ ಮಾಡಿದ್ದರಿಂದ ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದರು. ಜೈಲಿನಲ್ಲಿದ್ದ ಕಾಂಗ್ರೆಸ್ ನಾಯಕಿಗೆ ಈಗ ನಿರಾಳರಾಗಿದ್ದಾರೆ.
- DAVANAGERE
- DAVANAGERE NEWS
- DAVANAGERE NEWS UPDATES
- DAVANAGERE POLICE
- DAVANAGERE POLICE NEWS
- DAVANAGERE SP
- DAVANAGERE SP UMA PRASHANTH
- DAVANAGERE VARTHE
- ಉಮಾ ಪ್ರಶಾಂತ್ ದಾವಣಗೆರೆ ಪೊಲೀಸ್ ವರಿಷ್ಧಾಧಿಕಾರಿ
- ಎಸ್ಪಿ ಉಮಾ ಪ್ರಶಾಂತ್
- ದಾವಣಗೆರೆ
- ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್
- ದಾವಣಗೆರೆ ನಗರ
- ದಾವಣಗೆರೆ ನ್ಯೂಸ್
- ದಾವಣಗೆರೆ ಪೊಲೀಸ್ ಇಲಾಖೆ
- ದಾವಣಗೆರೆ ಪೊಲೀಸ್ ಕಾರ್ಯ
- ದಾವಣಗೆರೆ ಪೊಲೀಸ್ ಸುದ್ದಿ
- ದಾವಣಗೆರೆ ವಾರ್ತೆ
- ದಾವಣಗೆರೆ ಸಿಟಿ
- ದಾವಣಗೆರೆ ಸುದ್ದಿ ದಾವಣಗೆರೆ ಪೊಲೀಸ್






Leave a comment