Site icon Kannada News-suddikshana

BIG BREAKING: ಏರುತ್ತಲೇ ಇದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮುನ್ನಡೆ: 2ನೇ ರೌಂಡ್ ಮುಕ್ತಾಯ, ಪಡೆದ ಮತಗಳೆಷ್ಟು…?

SUDDIKSHANA KANNADA NEWS/ DAVANAGERE/ DATE:04-06-2024

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು, ಎರಡನೇ ರೌಂಡ್ ನ ಮತ ಎಣಿಕೆ ಮುಕ್ತಾಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು 6318 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಗಾಯಿತ್ರಿ ಸಿದ್ದೇಶ್ವರ ಅವರು ಮತ್ತೆ ಹಿನ್ನೆಡೆ ಅನುಭವಿಸಿದ್ದು, ಅಂಚೆ ಮತಗಳ ಎಣಿಕೆ ವೇಳೆ ಅಲ್ಪ ಮತಗಳ ಮುನ್ನಡೆ ಪಡೆದಿದ್ದ ಗಾಯಿತ್ರಿ ಸಿದ್ದೇಶ್ವರ ಅವರು ಮತ್ತೆ ಮುನ್ನಡೆ ಸಾಧಿಸಲಿಲ್ಲ. ಮೊದಲನೇ ರೌಂಡ್ ಮತ ಎಣಿಕೆ ಮುಕ್ತಾಯವಾದ ಬಳಿಕವೂ ಡಾ. ಪ್ರಭಾ ಮಲ್ಲಿಕಾರ್ಜುನ್ ಮುನ್ನಡೆ ಸಾಧಿಸಿದ್ದರು. ಎರಡನೇ ರೌಂಡ್ ನ ಮತ ಎಣಿಕೆ ಮುಗಿದಿದ್ದು, ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು 6318 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಡಾ. ಪ್ರಭಾ ಮಲ್ಲಿಕಾರ್ಜುನ್ 32,544 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಗಾಯಿತ್ರಿ ಸಿದ್ದೇಶ್ವರ 26,226 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು 3,312 ಮತಗಳನ್ನು ಪಡೆದಿದ್ದಾರೆ.

Exit mobile version